SSLC, PUC, ITI ಆದವರಿಗೆ ಗುಡ್ ನ್ಯೂಸ್! ದಕ್ಷಿಣ ರೈಲ್ವೆಯಲ್ಲಿ ಅಪ್ರೆಂಟಿಸ್‌ಶಿಪ್ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ
Southern Railway Recruitment 2025: ಭಾರತದ ಅತಿ ದೊಡ್ಡ ಸಂಪರ್ಕ ಸಾರಿಗೆಯಲ್ಲಿ ಒಂದಾದ ದಕ್ಷಿಣ ರೈಲ್ವೆ 3518 ಅಪ್ರೆಂಟಿಸ್‌ಶಿಪ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ನೇಮಕಾತಿ ಪ್ರಕಟಣೆಯನ್ನು ಹೊರಡಿಸಿದೆ.
ಇದರಿಂದ ರೈಲ್ವೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕೆಂಬ ಆಸೆ ಇಟ್ಟುಕೊಂಡಿರುವ ಯುವಕರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಈ ನೇಮಕಾತಿ ಅಧಿಸೂಚನೆಯ ಪ್ರಕಾರ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಐಟಿಐ ಪಾಸಾದ ಅಭ್ಯರ್ಥಿಗಳು ಅಪ್ರೆಂಟಿಸ್‌ಶಿಪ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಹ, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮುಖಾಂತರ ದಕ್ಷಿಣ ರೈಲ್ವೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗಗೊಳ್ಳಲು ಇರಬೇಕಾದ ಅರ್ಹತೆ ಮತ್ತು ಮಾನದಂಡಗಳು ಹೀಗಿವೆ…
ಅರ್ಹತೆ ಮತ್ತು ಮಾನದಂಡ
ಹುದ್ದೆಯ ಹೆಸರು
ಅಪ್ರೆಂಟಿಸ್‌ಶಿಪ್
ಒಟ್ಟು ಹುದ್ದೆಗಳು
3518
ಶೈಕ್ಷಣಿಕ ಅರ್ಹತೆ
ಈ ನೇಮಕಾತಿಯಲ್ಲಿ ಭಾಗವಹಿಸಲು ಅಭ್ಯರ್ಥಿಗಳು ಎಸ್‌ಎಸ್ಎಲ್‌ಸಿ/ಪಿಯುಸಿ/ಐಟಿಐ ಉತ್ತೀರ್ಣರಾಗಿರಬೇಕು.
ವಯೋಮಿತಿ
ಅಭ್ಯರ್ಥಿಯ ಕನಿಷ್ಠ ವಯಸ್ಸು 15 ವರ್ಷಗಳು ಮತ್ತು ಗರಿಷ್ಠ ವಯಸ್ಸು ಹುದ್ದೆಗಳಿಗೆ ಅನುಸಾರವಾಗಿ 22/24 ವರ್ಷಗಳು. ಮೀಸಲು ವರ್ಗಕ್ಕೆ ನಿಯಮಾನುಸಾರ ಗರಿಷ್ಠ ವಯಸ್ಸಿನಲ್ಲಿ ಸಡಿಲಿಕೆಯಿರುತ್ತದೆ.
ಇದನ್ನೂ ಓದಿ: APPSC ಫಾರೆಸ್ಟ್ ಆಫೀಸರ್ ಪರೀಕ್ಷೆ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡುವುದು ಹೇಗೆ?
ಅರ್ಜಿ ಶುಲ್ಕ
ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಡಿ ಮತ್ತು ಮಹಿಳಾ ಅಭ್ಯರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕವನ್ನು ಪಾವತಿ9ಸಬೇಕಾಗುತ್ತದೆ.
ಸ್ಟೈಫಂಡ್
ಈ ನೇಮಕಾತಿಯಲ್ಲಿ, 10ನೇ ತರಗತಿ ಪಾಸ್ ಆದ ಅಭ್ಯರ್ಥಿಗಳಿಗೆ ತಿಂಗಳಿಗೆ 6000 ರೂ. ಸ್ಟೈಫಂಡ್ ನೀಡಲಾಗುವುದು. ಪಿಯುಸಿ ಮತ್ತು ಐಟಿಐ ಪಾಸಾದ ಅಭ್ಯರ್ಥಿಗಳು ಆಯ್ಕೆಯಾದರೆ ತಿಂಗಳಿಗೆ 7000 ರೂ. ಸ್ಟೈಫಂಡ್ ನೀಡಲಾಗುವುದು.
ದಕ್ಷಿಣ ರೈಲ್ವೆಯಲ್ಲಿ ಅಪ್ರೆಂಟಿಸ್‌ಶಿಪ್ ಹುದ್ದೆ ಅರ್ಜಿ ಸಲ್ಲಿಕೆ ಹೇಗೆ?
– ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು8 ಮೊದಲು ದಕ್ಷಿಣ ರೈಲ್ವೆ ಅಧಿಕೃತ ವೆಬ್‌ಸೈಟ್ sr.indianrailways.gov.in ಗೆ ಭೇಟಿ ನೀಡಬೇಕು.
– ವೆಬ್‌ಸೈಟ್‌ನ ಮುಖಪುಟದಲ್ಲಿ ಆಕ್ಟ್ ಅಪ್ರೆಂಟಿಸ್ 2025-26 ಮೇಲೆ ಕ್ಲಿಕ್ ಮಾಡಬೇಕು.
– ಹೊಸ ಪುಟದಲ್ಲಿ, ರಿಜಿಸ್ಟರ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಮತ್ತು ಅಗತ್ಯವಿರುವ ವಿವರಗಳನ್ನು ನಮೂದಿಸಿ, ನೋಂದಣಿ ಮಾಡಿಕೊಳ್ಳಬೇಕು.
– ನಂತರ ಲಾಗಿನ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೇಳಿರುವ ಇತರ ವಿವರಗಳನ್ನು ಭರ್ತಿ ಮಾಡುವ ಮೂಲಕ ಫಾರ್ಮ್ ಅನ್ನು ಪೂರ್ಣಗೊಳಿಸಬೇಕು.
– ಅದಾದ ನಂತರ ಅರ್ಜಿ ಶುಲ್ಕವನ್ನು ಪಾವತಿಸಬೇಕು.
– ಅಂತಿಮವಾಗಿ, ಫಾರ್ಮ್ ಅನ್ನು ಸಲ್ಲಿಸಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಅದರ ಮುದ್ರಣವನ್ನು ತೆಗೆದುಕೊಳ್ಳಬೇಕು.
ಇದನ್ನೂ ಓದಿ: ಸೆಪ್ಟೆಂಬರ್ ಮೊದಲ ವಾರಕ್ಕೆ ಮುಂದೂಡಲ್ಪಟ್ಟ SSC CGL ಪರೀಕ್ಷೆ
(Southern Railway Recruitment 2025 golden opportunity for sslc puc iti pass students)



