ಹೊಸ ಅಬಕಾರಿ ನೀತಿ ಜಾರಿ: ಬಡವರಿಗೆ ಮದ್ಯ ದುಬಾರಿ, ಶ್ರೀಮಂತರಿಗೆ ಎಣ್ಣೆ ಅಗ್ಗ!
ಕರ್ನಾಟಕ ಸರಕಾರ ಮದ್ಯ ಪ್ರಿಯರಿಗೆ ಭರ್ಜರಿ ಶಾಕ್ ಕೊಟ್ಟಿದೆ. ರಾಜ್ಯದಲ್ಲಿ ಬಹುದಿನಗಳಿಂದ ಚರ್ಚೆಯಲ್ಲಿದ್ದ ಹೊಸ ಅಬಕಾರಿ ನೀತಿ 2026ರ ಮೇ 11 ರಿಂದ ಅಧಿಕೃತವಾಗಿ ಜಾರಿಗೆ ಬಂದಿದೆ. ಈ ನೂತನ ನೀತಿಯಿಂದಾಗಿ ಸಾಮಾನ್ಯ ಜನರು ಬಳಸುವ ಬಜೆಟ್ ಮದ್ಯದ ಬೆಲೆ ಏರಿಕೆಯಾಗಲಿದೆ.
ಕರ್ನಾಟಕ ಸರಕಾರ ಮದ್ಯ ಪ್ರಿಯರಿಗೆ ಭರ್ಜರಿ ಶಾಕ್ ಕೊಟ್ಟಿದೆ. ರಾಜ್ಯದಲ್ಲಿ ಬಹುದಿನಗಳಿಂದ ಚರ್ಚೆಯಲ್ಲಿದ್ದ ಹೊಸ ಅಬಕಾರಿ ನೀತಿ 2026ರ ಮೇ 11 ರಿಂದ ಅಧಿಕೃತವಾಗಿ ಜಾರಿಗೆ ಬಂದಿದೆ. ಈ ನೂತನ ನೀತಿಯಿಂದಾಗಿ ಸಾಮಾನ್ಯ ಜನರು ಬಳಸುವ ಬಜೆಟ್ ಮದ್ಯದ ಬೆಲೆ ಏರಿಕೆಯಾಗಲಿದೆ. ಕರ್ನಾಟಕ ಸರಕಾರ ಸದ್ಯ ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣಕ್ಕೆ ಅನುಗುಣವಾಗಿ ತೆರಿಗೆ ವಿಧಿಸುವ ಮಾದರಿಯನ್ನು ಅಳವಡಿಸಿಕೊಂಡಿದೆ.
ದೇಶದಲ್ಲಿಯೇ ಈ ಬಾರಿಯ ಮದ್ಯದ ನೀತಿಯನ್ನು ಅಳವಡಿಸಿಕೊಂಡಿರುವ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಇದೀಗ ಕರ್ನಾಟಕ ಪಾತ್ರವಾಗಿದೆ. ಈ ಹಿಂದೆ ಜಾರಿಯಲ್ಲಿದ್ದ 16 ತೆರಿಗೆ ಸ್ಲ್ಯಾಬ್ಗಳನ್ನು ಸರ್ಕಾರ ಈಗ 8 ಸ್ಲ್ಯಾಬ್ಗಳಿಗೆ ಇಳಿಕೆ ಮಾಡಿದೆ.
ಹೊಸ ನೀತಿಯಿಂದಾಗಿ ಸಾಮಾನ್ಯ ಜನರು ಹೆಚ್ಚಾಗಿ ಬಳಸುವ ವಿಸ್ಕಿ, ರಮ್, ಬ್ರಾಂಡಿ ಮತ್ತು ವೋಡ್ಕಾಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಲಿದೆ. ಇನ್ನೊಂದೆಡೆಯಲ್ಲಿ ಪ್ರೀಮಿಯಂ ಮತ್ತು ವಿದೇಶಿ ಬ್ರಾಂಡ್ಗಳ ಮದ್ಯದ ಬೆಲೆಯಲ್ಲಿ ಶೇ. 16 ರಿಂದ 20 ರಷ್ಟು ಇಳಿಕೆಯಾಗಲಿದೆ. 6 ರಿಂದ 8ನೇ ಸ್ಲ್ಯಾಬ್ನಲ್ಲಿ ಬರುವ ದುಬಾರಿ ಪಾನೀಯಗಳ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ. 10-15 ರಷ್ಟು ಕಡಿಮೆ ಮಾಡಲಾಗಿದೆ. ಇದರಿಂದ ಬಹುರಾಷ್ಟ್ರೀಯ ಕಂಪನಿಗಳ ಮದ್ಯದ ದರ ಗಣನೀಯವಾಗಿ ತಗ್ಗಲಿದೆ.
Also Read: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ: ಬಾಕಿ ಹಣ ಬಿಡುಗಡೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಸೂಚನೆ
ಸರ್ಕಾರದ ಈ ನಿರ್ಧಾರದಿಂದ ಸ್ಥಳೀಯ ಮದ್ಯ ತಯಾರಿಕಾ ಘಟಕಗಳಿಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಬಜೆಟ್ ಮದ್ಯವನ್ನೇ ನೆಚ್ಚಿಕೊಂಡಿರುವ ಸಣ್ಣ ಪ್ರಾದೇಶಿಕ ಘಟಕಗಳು ವ್ಯವಹಾರ ಕುಸಿತದ ಭೀತಿಯಿಂದಾಗಿ ಮುಚ್ಚುವ ಹಂತಕ್ಕೆ ತಲುಪಬಹುದು ಎಂದು ಕರ್ನಾಟಕ ಬ್ರೂವರ್ಸ್ ಮತ್ತು ಡಿಸ್ಟಿಲರ್ಸ್ ಅಸೋಸಿಯೇಷನ್ ಆತಂಕ ವ್ಯಕ್ತಪಡಿಸಿದೆ. ರಾಜ್ಯದ ಬೊಕ್ಕಸಕ್ಕೆ ಶೇಕಡಾ 70ಕ್ಕೂ ಅಧಿಕ ಆದಾಯವನ್ನು ತಂದು ಕೊಡುವ ಸಾಮಾನ್ಯ ಮದ್ಯದ ಮೇಲೆಯೇ ಇದೀಗ ಹೆಚ್ಚಿನ ತೆರಿಗೆ ಬಿದ್ದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
New excise policy implemented Alcohol is expensive for the poor Alcohol is cheap for the rich



