ಗೃಹಲಕ್ಷ್ಮೀ, ಗೃಹಜ್ಯೋತಿ ಯೋಜನೆಗಳ ಮರುಅರ್ಜಿಗೆ ಸಿಎಂ ಕರೆ.. ಗ್ಯಾರಂಟಿ ಯೋಜನೆ ಸೋರಿಕೆ ತಡೆಗೆ ದಿಟ್ಟ ಕ್ರಮ!
ಗೃಹಲಕ್ಷ್ಮೀ ಹಾಗೂ ಗೃಹಜ್ಯೋತಿ ಯೋಜನೆಗಳ ಲಾಭವನ್ನು ಮುಂದುವರಿಸಿಕೊಳ್ಳಬೇಕು ಎಂದರೆ ಮತ್ತೊಮ್ಮೆ ಅರ್ಜಿ ಸಲ್ಲಿಕೆ ಮಾಡುವುದು ಕಡ್ಡಾಯ ಎಂದು ಸ್ವತಃ ಸಿಎಂ ಡಿ.ಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ.

ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮೀ ಹಾಗೂ ಗೃಹಜ್ಯೋತಿ ಯೋಜನೆಗಳ ಲಾಭವನ್ನು ಮುಂದುವರಿಸಿಕೊಳ್ಳಬೇಕು ಎಂದರೆ ಮತ್ತೊಮ್ಮೆ ಅರ್ಜಿ ಸಲ್ಲಿಕೆ ಮಾಡುವುದು ಕಡ್ಡಾಯ ಎಂದು ಸ್ವತಃ ಸಿಎಂ ಡಿ.ಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ. ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ ಸಿಇಓಗಳ ಜೊತೆ ರಾಜ್ಯ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು ಗ್ಯಾರಂಟಿ ಯೋಜನೆ ಅಕ್ರಮ ತಡೆಗೆ ಈ ನಡೆ ಅನಿವಾರ್ಯ ಎಂದಿದ್ದಾರೆ.
ಇದನ್ನೂ ಓದಿ : ಗೃಹಲಕ್ಷ್ಮಿ ಯೋಜನೆ ಹಣ ಇನ್ಮುಂದೆ ಇಂತಹ ಮಹಿಳೆಯರಿಗೆ ಸಿಗಲ್ಲ! ಸರ್ಕಾರದಿಂದ ಸ್ಪಷ್ಟನೆ
ರಾಜ್ಯದಲ್ಲಿ ನಾವು ಗೃಹಲಕ್ಷ್ಮೀ ಅಥವಾ ಗೃಹಜ್ಯೋತಿ ಯೋಜನೆಗಳನ್ನು ಬಂದ್ ಮಾಡುತ್ತಿಲ್ಲ. ಆದರೆ ಗೃಹಲಕ್ಷ್ಮೀ ಯೋಜನೆಯ ಹೆಸರಲ್ಲಿ ಈಗಾಗಲೇ 100 ಕೋಟಿ ರೂಪಾಯಿಗಳನ್ನು ಅನರ್ಹರು ಪಡೆದುಕೊಂಡಿದ್ದಾರೆ. ಮನೆ ಮನೆಗಳಿಗೆ ಉಚಿತ ವಿದ್ಯುತ್ ಸೌಕರ್ಯ ನೀಡಿದರೆ , ಅನೇಕರು ಈ ಯೋಜನೆಯಿಂದ ತಮ್ಮ ಅಂಗಡಿ ನಡೆಸುತ್ತಿದ್ದಾರೆ. ಹೀಗಾಗಿ ಗ್ಯಾರಂಟಿ ಯೋಜನೆಯಲ್ಲಿ ಸೋರಿಕೆ ತಡೆಗಟ್ಟುವುದು ನಮ್ಮ ಉದ್ದೇಶವಾಗಿದೆ. ಅನರ್ಹರಿಗೆ ಗ್ಯಾರಂಟಿ ಯೋಜನೆ ಲಾಭ ದೊರಕಬಾರದು. ಈ ನಿಟ್ಟಿನಲ್ಲಿ ಮತ್ತೊಮ್ಮೆ ಈ ಎರಡೂ ಯೋಜನೆಗಳಿಗೆ ಅರ್ಜಿ ಕರೆಯಲಿದ್ದೇವೆ ಎಂದಿದ್ದಾರೆ.
ಇದೇ ವೇಳೆ ಭ್ರಷ್ಟಾಚಾರ ಮುಕ್ತ ಕರ್ನಾಟಕಕ್ಕೆ ಸಿಎಂ ಡಿ.ಕೆ ಶಿವಕುಮಾರ್ ಕರೆ ನೀಡಿದ್ದು , ಯಾವುದೇ ಸರ್ಕಾರಿ ಕಚೇರಿಗಳಲ್ಲಿ 10 ರೂಪಾಯಿ ಭ್ರಷ್ಟಾಚಾರ ನಡೆದರೂ ಸಹಿಸಲು ಸಾಧ್ಯವೇ ಇಲ್ಲ. ಶಾಸಕರು, ಸಚಿವರೇ ಈ ಕೃತ್ಯದಲ್ಲಿ ಭಾಗಿಯಾಗಿದ್ದರೂ ಯಾರಿಗೂ ಹೆದರದೇ ನನ್ನ ಗಮನಕ್ಕೆ ತನ್ನಿ. ಅಧಿಕಾರಿಗಳು ನನಗೆ ಕರೆ ಮಾಡಿ ಮಾಹಿತಿ ನೀಡಿ ಎಂದು ಸಿಎಂ ಡಿ.ಕೆ ಶಿವಕುಮಾರ್ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ.



