ಕುಡಿದ ಮತ್ತಿನಲ್ಲಿ ಕಂಟೈನರ್ ಚಾಲಕನ ಅವಾಂತರ : ಭೀಕರ ಅಪಘಾತದಲ್ಲಿ ಬಾಲಕ ಬಲಿ
ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಅರಗಾ ಗ್ರಾಮದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬಾಲಕ ಮೃತಪಟ್ಟು, ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕುಡಿದ ಮತ್ತಿನಲ್ಲಿ ವಾಹನ ಚಾಲನೆ ಮಾಡುತ್ತಿದ್ದ ಕಂಟೈನರ್ ಚಾಲಕ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮುಗ್ಧ ಬಾಲಕ ಮೃತಪಟ್ಟ ದಾರುಣ ಘಟನೆಯು ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಅರಗಾ ಗ್ರಾಮದಲ್ಲಿ ಸಂಭವಿಸಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕುಡಿದ ಮತ್ತಿನಲ್ಲಿ ಕಂಟೈನರ್ ವಾಹನ ಚಲಾಯಿಸುತ್ತಿದ್ದ ಚಾಲಕ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕಾರಿನ ಮೇಲೆ ಕಂಟೈನರ್ ಬಿದ್ದಿದೆ. ಈ ದುರಂತದಲ್ಲಿ 8 ವರ್ಷದ ಬಾಲಕ ಜೀವ ಕಳೆದುಕೊಂಡಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ದಂಪತಿ ಹಾಗೂ ಮತ್ತೊಂದು ಮಗುವನ್ನು ಕಾರವಾರದ ಮೆಡಿಕಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಉಡುಪಿ : MDMA ಮಾದಕ ವಸ್ತು ಸಾಗಾಟ; ಕಾಂಗ್ರೆಸ್ ಮುಖಂಡ ಸೇರಿ ಇಬ್ಬರು ಅರೆಸ್ಟ್
ಅಪಘಾತ ಮಾಡಿರುವ ಕಂಟೈನರ್ ಮಹಾರಾಷ್ಟ್ರದ ನೋಂದಣಿ ಹೊಂದಿತ್ತು. ಟ್ರಕ್ ಚಾಲಕನನ್ನು ಕಾರವಾರ ಗ್ರಾಮೀಣ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ಕುಡಿದ ಮತ್ತಿನಲ್ಲಿ ರಸ್ತೆ ತುಂಬೆಲ್ಲಾ ಉಳಿದ ವಾಹನಗಳ ಚಾಲಕರೊಂದಿಗೆ ಜಗಳವಾಡುತ್ತಲೇ ಬರುತ್ತಿದ್ದ ಎನ್ನಲಾಗಿದೆ. ಜಗಳ ಮಾಡಿಕೊಂಡು ಕೋಪದಲ್ಲಿ ಕಂಟೈನರ್ ಚಲಾಯಿಸುತ್ತಿದ್ದ ಈತ ಬಳಿಕ ಭೀಕರ ರಸ್ತೆ ಅಪಘಾತ ಮಾಡಿದ್ದಾನೆ.



