ಧರ್ಮಸ್ಥಳ ಬುರುಡೆ ಕೇಸ್​ : ಮೂಲ ಪ್ರಕರಣ, ಎಸ್​ಐಟಿ ವಿಚಾರಣೆ ರದ್ದತಿಗೆ ಕೋರ್ಟ್​ ಮೆಟ್ಟಿಲೇರಿದ ಬುರುಡೆ ಗ್ಯಾಂಗ್​

Dharmasthala Burude case: ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿದ್ದ ಧರ್ಮಸ್ಥಳ ಬುರುಡೆ ಗ್ಯಾಂಗ್​ ಪ್ರಕರಣದಲ್ಲಿ ಇದೀಗ ಮತ್ತೊಂದು ಟ್ವಿಸ್ಟ್​ ಎದುರಾಗಿದೆ. ಧರ್ಮಸ್ಥಳದ ಶ್ರೀ ಮಂಜುನಾಥನ ಸನ್ನಿಧಿಗೆ ಅಪಪ್ರಚಾರ ಮಾಡಲು ಪ್ಲಾನ್​ ರೂಪಿಸಿದ್ದ ಬುರುಡೆ ಗ್ಯಾಂಗ್​ನ ತಂತ್ರ ಅವರಿಗೆ ತಿರುಮಂತ್ರವಾದ ಹಿನ್ನೆಲೆಯಲ್ಲಿ ಇದೀಗ ದೂರುದಾರ ಚಿನ್ನಯ್ಯ ನೀಡಿರುವ ಹೇಳಿಕೆ ಆಧರಿಸಿ ಧರ್ಮಸ್ಥಳ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನೇ ರದ್ದು ಮಾಡುವಂತೆ ಹೈಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಸಿದ್ದಾರೆ.

ಇದು ಮಾತ್ರವಲ್ಲದೇ ಸೌಜನ್ಯ ಪರ ಹೋರಾಟಗಾರರು ಎಂದು ಗುರುತಿಸಿಕೊಂಡಿರುವ ಗಿರೀಶ್​ ಮಟ್ಟಣ್ಣವರ್​, ಮಹೇಶ್​ ಶೆಟ್ಟಿ ತಿಮರೋಡಿ, ಟಿ. ಜಯಂತ್​ ಹಾಗೂ ವಿಠ್ಠಲಗೌಡ ವಿಚಾರಣೆಗೆ ಹಾಜರಾಗುವಂತೆ ಅ.24ರಂದು ನೀಡಿರುವ ನೋಟಿಸ್​ ರದ್ದುಗೊಳಿಸಿ ಎಂದು ವಕೀಲ ಬಾಲನ್​ ಮೂಲಕ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ನೋಟಿಸ್​ ರದ್ದು ಮಾಡುವಂತೆ ಹೈಕೋರ್ಟ್​ ಮನವಿ ನೀಡಿರುವ ಬುರುಡೆ ಗ್ಯಾಂಗ್​, ನಮಗೆ ಖುದ್ದಾಗಿ ನೋಟಿಸ್​ ನೀಡದೇ ವಾಟ್ಸಾಪ್​ ಹಾಗೂ ಇಮೇಲ್​ ಸಂದೇಶ ಕಳಿಸಲಾಗಿದೆ. ಅನವಶ್ಯಕವಾಗಿ ನಮ್ಮನ್ನು ಹಲವು ಬಾರಿ ವಿಚಾರಣೆಗೆ ಕರೆದು 100 ಗಂಟೆಗಳಿಗೂ ಅಧಿಕ ಕಾಲ ವಿಚಾರಣೆಗೆ ಒಳಪಡಿಸಿದ್ದಾರೆ.

Also Ready: ಅರಣ್ಯ ಇಲಾಖೆ ಉದ್ಯೋಗದ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

ದೂರಿನಲ್ಲಿರುವ ಒಟ್ಟೂ 164 ಹೇಳಿಕೆಗಳಲ್ಲಿ ನಮ್ಮ ವಿರುದ್ಧ ಯಾವುದೇ ಆರೋಪಗಳಿಲ್ಲ. ಹೀಗಿರುವಾಗ ನಮಗೆ ಸುಖಾ ಸುಮ್ಮನೇ ಎಸ್​ಐಟಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ನೀಡುತ್ತಿದೆ ಎಂದು ಅರ್ಜಿಯಲ್ಲಿ ಕಾರಣ ಉಲ್ಲೇಖಿಸಿದ್ದಾರೆ.

ಬುರುಡೆ ಪ್ರಕರಣದ ಸೂತ್ರಧಾರಿಗಳು ಎನಿಸಿಕೊಂಡಿರುವ ಈ ನಾಲ್ವರಿಗೆ ಅ.24ರಂದು ವಿಚಾರಣೆಗೆ ಹಾಜರಾಗುವಂತೆ ಎಸ್​ಐಟಿ ನೋಟಿಸ್​ ನೀಡಿತ್ತು. ಈ ನೋಟಿಸ್​ನ ಅನ್ವಯ ಈ ನಾಲ್ವರು ಅ.27ರಂದು ಎಸ್​ಐಟಿ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ತಮ್ಮ ಮೊಬೈಲ್​ ಫೋನ್​​ ಸ್ವಿಚ್​ ಮಾಡಿಕೊಂಡಿದ್ದ ಈ ನಾಲ್ವರು ವಕೀಲರನ್ನು ಎಸ್​ಐಟಿ ಕಚೇರಿಗೆ ಕಳುಹಿಸಿಕೊಟ್ಟು ಒಂದು ವಾರದ ಸಮಯಾವಕಾಶ ಕೇಳಿದ್ದರು.

ಸುಳ್ಳು ಕತೆಗಳನ್ನು ಕಟ್ಟಿ ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯುವ ಹುನ್ನಾರ ಮಾಡಿದ್ದ ಈ ನಾಲ್ವರು ಬುರುಡೆ ಗ್ಯಾಂಗ್​ ಪ್ರತಿನಿಧಿಗಳು ಇದೀಗ ತಾವೇ ತೋಡಿದ್ದ ಖೆಡ್ಡಾಗೆ ಬಿದ್ದಿದ್ದಾರೆ. ಪ್ರಕರಣದ ವಿಚಾರಣೆ ಇನ್ನಷ್ಟು ಆಳಕ್ಕೆ ಇಳಿದರೆ ತಮ್ಮ ಬಣ್ಣ ಬಟಾಬಯಲಾಗಬಹುದು ಎಂಬ ಭಯಕ್ಕೆ ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ FIR NO 39/2025 ಮೂಲ ಪ್ರಕರಣ ಹಾಗೂ ಎಸ್​ಐಟಿ ನೀಡಿರುವ ನೋಟಿಸ್​ ರದ್ದತಿಗೆ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.

Also Read: Areca nut: 70,000 ರೂಪಾಯಿ ಗಡಿದಾಟಿದ ರಾಶಿ ಅಡಿಕೆ : ಅಡಿಕೆ ಬೆಳೆಗಾರರಿಗೆ ಬಂಪರ್‌

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories