ಮನೆಮಾಲೀಕರಿಗೆ ಗುಡ್‌ನ್ಯೂಸ್! OC ಇಲ್ಲದಿದ್ದರೂ ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ಸರ್ಕಾರ ಗ್ರೀನ್ ಸಿಗ್ನಲ್

ಇನ್ಮುಂದೆ ಸ್ವಾಧೀನ ಪ್ರಮಾಣಪತ್ರ (OC - Occupancy Certificate) ಇಲ್ಲದಿದ್ದರೂ ಹೊಸ ಮನೆಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸಲು ರಾಜ್ಯ ಸರ್ಕಾರ ಹಸಿರು ನಿಶಾನೆ ನೀಡಿದೆ.ಇನ್ಮುಂದೆ ಸ್ವಾಧೀನ ಪ್ರಮಾಣಪತ್ರ (OC - Occupancy Certificate) ಇಲ್ಲದಿದ್ದರೂ ಹೊಸ ಮನೆಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸಲು ರಾಜ್ಯ ಸರ್ಕಾರ ಹಸಿರು ನಿಶಾನೆ ನೀಡಿದೆ.

ಹೊಸದಾಗಿ ಮನೆ ನಿರ್ಮಿಸಿ ಶಾಶ್ವತ ವಿದ್ಯುತ್‌ ಸಂಪರ್ಕಕ್ಕಾಗಿ ಕಾಯುತ್ತಿದ್ದ ಜನರಿಗೆ ಕರ್ನಾಟಕ ಸರಕಾರ ಬಂಪರ್‌ ಕೊಡುಗೆ ನೀಡಿದೆ. ಇನ್ಮುಂದೆ ಸ್ವಾಧೀನ ಪ್ರಮಾಣಪತ್ರ (OC – Occupancy Certificate) ಇಲ್ಲದಿದ್ದರೂ ಹೊಸ ಮನೆಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸಲು ರಾಜ್ಯ ಸರ್ಕಾರ ಹಸಿರು ನಿಶಾನೆ ನೀಡಿದೆ. 2026ರ ಮೇ 31ರೊಳಗೆ ಪೂರ್ಣಗೊಂಡಿರುವ ವಸತಿ ಕಟ್ಟಡಗಳಿಗೆ ಈ ಬಾರಿಯ ವಿಶೇಷ ರಿಯಾಯಿತಿ ಅನ್ವಯವಾಗಲಿದೆ. ಇಂಧನ ಇಲಾಖೆ ರಾಜ್ಯದ ಎಲ್ಲಾ ಎಸ್ಕಾಂಗಳಿಗೆ ಕಡ್ಡಾಯ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ರಾಜ್ಯ ಸರಕಾರದ ಆದೇಶದ ಪ್ರಕಾರ ಈ ವಿಶೇಷ ವಿನಾಯಿತಿ ವಸತಿ ಮತ್ತು ಕೃಷಿ ಕಟ್ಟಡಗಳಿಗೆ ಮಾತ್ರವೇ ಅನ್ವಯವಾಗಲಿದೆ. ಅದ್ರಲ್ಲೂ ರೇಟರ್ ಬೆಂಗಳೂರು ಪ್ರಾಧಿಕಾರ (GBA), ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟಡಗಳನಿಗೆ ಇನ್ಮುಂದೆ ಸುಲಭವಾಗಿ 2,400 ಚದರ ಅಡಿವರೆಗಿನ ನಿವೇಶನಗಳಿಗೆ ಓಸಿ ಪಡೆಯಬಹುದಾಗಿದೆ. ಗ್ರೌಂಡ್‌ ಪ್ಲೋರ್‌ + 3 ಮಹಡಿ, ಪಾರ್ಕಿಂಗ್‌ ಪ್ಲಸ್‌ 4 ಮಹಡಿಯ ವಸತಿ ಕಟ್ಟಡಗಳು ಈ ವಿಶೇಷ ರಿಯಾಯಿತಿಗೆ ಒಳಪಡಿಸಲಿದೆ.

ಕೇವಲ ವಾಸದ ಮನೆ ಮಾತ್ರವಲ್ಲದೇ ಗ್ರಾಮೀಣ ಭಾಗದಲ್ಲಿನ ರೈತರ ಮನೆ, ತೋಟದ ಮನೆ, ಕೃಷಿ ಉಪಕರಣಗಳ ಶೆಡ್‌, ದನದ ಕೊಟ್ಟಿಗೆ. ರೇಷ್ಮೆ ಗೂಡಿನ ಮನೆಗಳಿಗೆ ಯಾವುದೇ ವಿಸ್ತೀರ್ಣದ ಮಿತಿ ಇಲ್ಲದೆ ಓಸಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ರಾಜ್ಯ ಸರಕಾರದ ಈ ಆದೇಶ ಪ್ರಕಟವಾದ 15 ದಿನಗಳ ಒಳಗಾಗಿ ಅರ್ಜಿಯನ್ನು ಸಲ್ಲಿಸಿ ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ.

Also Read: ಮುಂದಿನ 48 ಗಂಟೆ ಭಾರಿ ಮಳೆ! ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆಯ ಎಚ್ಚರಿಕೆ

2026ರ ಮೇ 31ರ ಒಳಗೆ ಕಟ್ಟಡವನ್ನು ಪೂರ್ಣಗೊಳಿಸಿ ಈಗಾಗಲೇ ಅರ್ಜಿ ಸಲ್ಲಿಸಿರುವವರು, ತಾತ್ಕಾಲಿಕ (Commercial/Temporary) ಸಂಪರ್ಕ ಹೊಂದಿರುವವರು, ಯಾವುದೇ ಸಂಪರ್ಕ ಪಡೆಯದ ಹೊಸ ಕಟ್ಟಡಗಳ ಮಾಲೀಕರು ಕೂಡ ಓಸಿ ಪಡೆಯಬಹುದಾಗಿದೆ. ಸಾರ್ವಜನಿಕರು ಅರ್ಜಿ ಸಲ್ಲಿಸಿದ ನಂತರ ಕ್ಷೇತ್ರಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕಟ್ಟಡ ಪೂರ್ಣಗೊಂಡಿರುವುದನ್ನು ಖಚಿತಪಡಿಸಿಕೊಳ್ಳಲಿದ್ದಾರೆ. ಅರ್ಜಿದಾರರ ಸಮ್ಮುಖದಲ್ಲೇ ಕಟ್ಟಡದ ಜಿಯೋ-ಟ್ಯಾಗ್ (Geo-tagged) ಫೋಟೋ, ದಿನಾಂಕ ಮತ್ತು ಸಮಯದ ಮಾಹಿತಿಯನ್ನು ದಾಖಲಿಸಿ ಸಿಸಿಬಿ (CCB) ತಂತ್ರಾಂಶದಲ್ಲಿ ಅಪ್ಲೋಡ್ ಮಾಡುವುದು ಕಡ್ಡಾಯವಾಗಿದೆ.

ಸುಪ್ರೀಂ ಕೋರ್ಟ್ ಆದೇಶದ ಬಳಿಕ ಎಸ್ಕಾಂಗಳು ಓಸಿ ಇಲ್ಲದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನಿಲ್ಲಿಸಿದ್ದರಿಂದ ರಾಜ್ಯದ ಲಕ್ಷಾಂತರ ಜನರು ತೊಂದರೆ ಅನುಭವಿಸುತ್ತಿದ್ದರು. ಸರ್ಕಾರದ ಈ ಮಹತ್ವದ ನಿರ್ಧಾರದಿಂದಾಗಿ ಮಧ್ಯಮ ವರ್ಗದ ಮನೆಮಾಲೀಕರಿಗೆ ಹಾಗೂ ಬಾಡಿಗೆ ಮನೆ ನಂಬಿಕೊಂಡಿರುವವರಿಗೆ ದೊಡ್ಡ ಆರ್ಥಿಕ ನೆರವು ಸಿಗಲಿದೆ.

Good news for homeowners Government gives green signal for permanent electricity connection even without OC

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories