ಸಾರಿಗೆ ನೌಕರರಿಗೆ ಸಿಹಿಸುದ್ದಿ: ವೇತನ ಹೆಚ್ಚಳಕ್ಕೆ ಸರ್ಕಾರ ಗ್ರೀನ್ ಸಿಗ್ನಲ್!
ಕರ್ನಾಟಕದ ಲಕ್ಷಾಂತರ ಸಾರಿಗೆ ನೌಕರರ ದೀರ್ಘಕಾಲದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ವೇತನ ಪರಿಷ್ಕರಣೆಗಾಗಿ ಪಟ್ಟು ಹಿಡಿದಿದ್ದ ನೌಕರರ ಬೇಡಿಕೆಗೆ ಕೊನೆಗೂ ಸ್ಪಂದಿಸಿರುವ ಕರ್ನಾಟಕ ಸರಕಾರ, ನಾಲ್ಕು ಸಾರಿಗೆ ನಿಗಮಗಳ ನೌಕರರ ಮೂಲ ವೇತನದಲ್ಲಿ ಶೇ. 12.50 ರಷ್ಟು ಹೆಚ್ಚಳ ಮಾಡಿ ಮಹತ್ವದ ಆದೇಶ ಹೊರಡಿಸಿದೆ.
ಕರ್ನಾಟಕದ ಲಕ್ಷಾಂತರ ಸಾರಿಗೆ ನೌಕರರ ದೀರ್ಘಕಾಲದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ವೇತನ ಪರಿಷ್ಕರಣೆಗಾಗಿ ಪಟ್ಟು ಹಿಡಿದಿದ್ದ ನೌಕರರ ಬೇಡಿಕೆಗೆ ಕೊನೆಗೂ ಸ್ಪಂದಿಸಿರುವ ಕರ್ನಾಟಕ ಸರಕಾರ, ನಾಲ್ಕು ಸಾರಿಗೆ ನಿಗಮಗಳ ನೌಕರರ ಮೂಲ ವೇತನದಲ್ಲಿ ಶೇ. 12.50 ರಷ್ಟು ಹೆಚ್ಚಳ ಮಾಡಿ ಮಹತ್ವದ ಆದೇಶ ಹೊರಡಿಸಿದೆ. ಈ ನಿರ್ಧಾರದಿಂದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗಳ ಸಿಬ್ಬಂದಿಗಳಿಗೆ ಖುಷಿ ತಂದಿದೆ.
ಕರ್ನಾಟಕ ಸರಕಾರದ ಹೊಸ ಆದೇಶದ ಅನ್ವಯ, ಈ ಹೊಸ ವೇತನ ಪರಿಷ್ಕರಣೆಯು 2025ರ ಏಪ್ರಿಲ್ 1ರಿಂದಲೇ ಪೂರ್ವಾನ್ವಯವಾಗಲಿದೆ. 2025ರ ಮಾರ್ಚ್ 31ರ ಅಂತ್ಯಕ್ಕೆ ನೌಕರರು ಪಡೆಯುತ್ತಿದ್ದ ಮೂಲ ವೇತನದ ಮೇಲೆ ಈ ಶೇಕಡಾ 12.50 ಹೆಚ್ಚಳ ಅನ್ವಯವಾಗಲಿದ್ದು, ಈ ಪರಿಷ್ಕೃತ ವೇತನ ಶ್ರೇಣಿಯು 2029ರ ಮಾರ್ಚ್ 31ರವರೆಗೆ ಚಾಲ್ತಿಯಲ್ಲಿ ಇರಲಿದೆ.
2025ರ ಏಪ್ರಿಲ್‌ನಿಂದ 2026ರ ಜೂನ್ ವರೆಗಿನ ಅಂದರೆ ಒಟ್ಟು 15 ತಿಂಗಳ ಹಿಂಬಾಕಿ ಮೊತ್ತವನ್ನು ಸಂಸ್ಥೆಗಳ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಪಾವತಿಸಲು ಸರ್ಕಾರ ತೀರ್ಮಾನಿಸಿದೆ. ಈ ವೇತನ ಹೆಚ್ಚಳದ ನಿರ್ಧಾರದಿಂದ ನಾಲ್ಕು ನಿಗಮಗಳಾದ KSRTC, BMTC, NWKRTC ಮತ್ತು KKRTC ಮೇಲೆ ಪ್ರತಿ ತಿಂಗಳು ಸುಮಾರು 72.80 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ. ಅಲ್ಲದೇ ನಿಗಮಗಳು ವಾರ್ಷಿಕವಾಗಿ 873.64 ಕೋಟಿ ರೂ. ಹೆಚ್ಚುವರಿ ಹಣವನ್ನು ನೌಕರರ ವೇತನಕ್ಕೆ ಮೀಸಲಿಡಬೇಕಾಗಿದೆ.
ಸಾರಿಗೆ ನೌಕರರ ವೇತನ ಹೆಚ್ಚಳದಿಂದಾಗಿ ಕರ್ನಾಟಕ ರಾಜ್ಯದ ಬರೋಬ್ಬರಿ 1 ಲಕ್ಷದ 5 ಸಾವಿರ ಸಾರಿಗೆ ಸಿಬ್ಬಂದಿಗಳಿಗೆ ಅನುಕೂಲವಾಗಲಿದೆ. ಕಳೆದ ಹಲವು ವರ್ಷಗಳಿಂದಲೂ ಸಾರಿಗೆ ನೌಕರರು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಹೋರಾಟವನ್ನು ನಡೆಸಿಕೊಂಡು ಬಂದಿದ್ದಾರೆ. ಅಲ್ಲದೇ ಶೇಕಡಾ 25 ರಷ್ಟು ವೇತನ ಹೆಚ್ಚಳ ಮಾಡುವಂತೆ ಆಗ್ರಹಿಸಿದ್ದರು.
Also Read: ಕಾಫಿನಾಡಿನಲ್ಲಿ ವರುಣನ ಅಬ್ಬರ: ರಾಜ್ಯದಲ್ಲಿ 3 ದಿನ ಹೈ ಅಲರ್ಟ್!
2023ರಲ್ಲಿ ಬಿಜೆಪಿ ಸರಕಾರ ಶೇಕಡಾ 15 ರಷ್ಟು ವೇತನ ಹೆಚ್ಚಳ ಮಾಡಿತ್ತು, ಆದರೆ ಸಾರಿಗೆ ನೌಕರರು ಶೇಕಡಾ 25ರಷ್ಟು ಹೆಚ್ಚಳಕ್ಕೆ ಡಿಮ್ಯಾಂಡ್ ಇಟ್ಟಿದ್ದರು. ಸದ್ಯ ರಾಜ್ಯ ಸರಕಾರ ಶೇಕಡಾ 12.50ರಷ್ಟು ಹೆಚ್ಚಳಕ್ಕೆ ಸಮ್ಮತಿ ಸೂಚಿಸಿದೆ. ನೌಕರರ ಹಿತದೃಷ್ಟಿಯಿಂದ ರಾಜ್ಯ ಸರಕಾರವು 2023ರ ವೇತನ ಪರಿಷ್ಕರಣೆಯ 26 ತಿಂಗಳ ಹಿಂಬಾಕಿ ಮೊತ್ತದಲ್ಲಿ ಮೊದಲ ಕಂತಿನ 450 ಕೋಟಿ ರೂ.
ಹಣವನ್ನು ಈಗಾಗಲೇ ಬಿಡುಗಡೆ ಮಾಡಿದೆ. ಈ ಹಣವು ಈಗಾಗಲೇ ನೌಕರರ ಬ್ಯಾಂಕ್ ಖಾತೆಗಳಿಗೆ ಜಮೆಯಾಗುತ್ತಿದೆ. ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮೇ 20ರಿಂದ ಸಾರಿಗೆ ನೌಕರರು ಕರ್ನಾಟಕದಲ್ಲಿ ಮುಷ್ಕರಕ್ಕೆ ಕರೆ ನೀಡಿದ್ದರು. ಆದರೆ ಇದೀಗ ಸರಕಾರ ವೇತನ ಹೆಚ್ಚಳ ಮಾಡುತ್ತಿದ್ದಂತೆಯೇ ಮುಷ್ಕರವನ್ನು ಕೈಬಿಡುವ ಸಾಧ್ಯತೆಯಿದೆ.
Good news for transport employees Government gives green signal for salary hike



