ಬೆಂಗಳೂರಲ್ಲಿ ಬಾಡಿಗೆ ಮನೆ ಕೇಳೋರೆ ಇಲ್ಲ : ಕಾರಣ ಕೇಳಿದ್ರೆ ಎಚ್ಚರಿಯಾಗೋದು ಪಕ್ಕಾ
ಬೆಂಗಳೂರು : House rent: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಮ್ಮ ಅಗತ್ಯಗಳಿಗೆ ಅನುಗುಣವಾದ ಬಾಡಿಗೆ ಮನೆ ಹುಡುಕುವುದು ಹಾಗೂ ಮೊಸರಿನಲ್ಲಿ ಕಲ್ಲು ಹುಡುಕುವುದು ಎರಡೂ ಒಂದೇ ರೀತಿ. ಆದರೆ ಇತ್ತೀಚಿನ ದಿನಗಳಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಿಗೆ ಬೇಡಿಕೆ ಕಡಿಮೆಯಾಗಿದೆ ಎಂದು ಹೊಸ ವರದಿಯೊಂದು ಮಾಹಿತಿ ನೀಡಿದೆ.
ಮ್ಯಾಜಿಕ್ ಬ್ರಿಕ್ಸ್ ಸಂಸ್ಥೆಯು ಜುಲೈ-ಸೆಪ್ಟೆಂಬರ್ 2025 ತ್ರೈಮಾಸಿಕದ ರೆಂಟಲ್ ಇಂಡೆಕ್ಸ್ ಬಿಡುಗಡೆ ಮಾಡಿದೆ. ಇದರಲ್ಲಿ ಬೆಂಗಳೂರು ಹಾಗೂ ಚೆನ್ನೈ ನಗರಗಳಲ್ಲಿ ಬಾಡಿಗೆ ಮನೆಗಳಿಗೆ ಬೇಡಿಕೆ ಕೊಂಚ ತಗ್ಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಂಪೂರ್ಣ ದೇಶದಲ್ಲಿ ದೆಹಲಿ ಹಾಗೂ ಎನ್ಸಿಆರ್ಗಳಲ್ಲಿ ಬಾಡಿಗೆ ಮನೆಗಳಿಗೆ ಅತೀ ಹೆಚ್ಚು ಬೇಡಿಕೆಯಿದೆ ಎಂದು ಈ ವರದಿಯಲ್ಲಿ ತಿಳಿದುಬಂದಿದೆ.
Also Read: Omission of ghee: ತಿರುಪತಿಯಿಂದ ಕಲಬೆರಕೆ ಲಡ್ಡು 20 ಕೋಟಿ ಭಕ್ತರಿಗೆ ಹಂಚಿಕೆ : ತುಪ್ಪದ ಲೋಪ.. ನಕಲಿ ಲಡ್ಡು ವಿತರಣೆ
ಬೆಂಗಳೂರು, ಚೆನ್ನೈ, ಹೈದರಾಬಾದ್, ಪುಣೆ ಮತ್ತು ಮುಂಬೈ ನಗರಗಳಲ್ಲಿ ಶೇಕಡಾ 1.2ರಿಂದ 7.2 ಪ್ರತಿಶತದವರೆಗೆ ಬಾಡಿಗೆ ಮನೆಗಳಿಗೆ ಬೇಡಿಕೆ ಕುಸಿದಿದೆ ಎನ್ನಲಾಗಿದೆ. ಕಳೆದ ಮೂರು ತ್ರೈಮಾಸಿಕಗಳಲ್ಲಿ ಬೆಂಗಳೂರಿನ ಬಾಡಿಗೆ ಮನೆಗಳಿಗೆ ಬೇಡಿಕೆ ಹೆಚ್ಚಿತ್ತು.
ಆದರೆ ಕಳೆದ ಮೂರು ತ್ರೈಮಾಸಿಕಗಳಲ್ಲಿ 4.4 ಪರ್ಸೆಂಟ್ ಬಾಡಿಗೆ ಏರಿಕೆಯಾಗಿದೆ. ಅಂದರೆ ಕಳೆದೊಂದು ವರ್ಷಗಳಲ್ಲಿ ಮನೆಯ ಬಾಡಿಗೆ 18.2 ಪ್ರತಿಶತ ಏರಿಕೆ ಕಂಡಿದೆ. ಇದೇ ಕಾರಣಕ್ಕೆ ರಾಜಧಾನಿಯಲ್ಲಿ ಮನೆ ಬಾಡಿಗೆ ಪಡೆಯುವುದು ಅನೇಕರ ಪಾಲಿಗೆ ಕೈಗೆಟುಕದ ಸಂಗತಿಯಾಗಿ ಪರಿಣಮಿಸಿದೆ ಎಂದು ಈ ವರದಿ ತಿಳಿಸಿದೆ.



