RSS Funding : ಆರ್​ಎಸ್​ಎಸ್​ ಆದಾಯದ ಮೂಲ ಪ್ರಶ್ನಿಸಿದ ಸಚಿವ ಪ್ರಿಯಾಂಕ್​ ಖರ್ಗೆಗೆ ಮೋಹನ್ ಭಾಗ್ವತ್​ ತಿರುಗೇಟು

RSS Funding : ಆರ್​ಎಸ್​ಎಸ್​ ಹಾಗೂ ಸಚಿವ ಪ್ರಿಯಾಂಕ್​ ಖರ್ಗೆ ನಡುವೆ ಜಟಾಪಟಿ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಕೆಲ ದಿನಗಳ ಹಿಂದಷ್ಟೇ ಇನ್ನೂ ನೊಂದಣಿಯೇ ಆಗದ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಹಣದ ಮೂಲ ಎಲ್ಲಿಂದ ಬರುತ್ತೆ ಎಂದು ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೆ ಇದೀಗ ಸ್ವತಃ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ ಭಾಗವತ್​ ಉತ್ತರಿಸಿದ್ದಾರೆ.

ಬೆಂಗಳೂರಿನಲ್ಲಿ ಈ ವಿಚಾರವಾಗೊ ಮಾತನಾಡಿದ ಮೋಹನ್​ ಭಾಗ್ವತ್​, ಆರ್​ಎಸ್​ಎಸ್​ ಎಂದಿಗೂ ಹೊರಗಿನ ನಯಾಪೈಸೆ ಮುಟ್ಟಿಲ್ಲ. ನಮ್ಮ ಸಂಘದ ಕಾರ್ಯಕರ್ತರೇ ನಮ್ಮ ಆದಾಯದ ಮೂಲ. ಸ್ವಯಂ ಸೇವಕರು ನೀಡಿದ ದೇಣಿಗೆ ಹಣದಿಂದಲೇ ನಮ್ಮ ಸಂಘ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಆರ್​ಎಸ್​ಎಸ್​ಗೆ ಬಡ ಸ್ವಯಂ ಸೇವಕರೂ ದೇಣಿಗೆ ನೀಡುತ್ತಾರೆ. ವರ್ಷಂಪೂರ್ತಿ ದ್ವಿದಳ ಧಾನ್ಯ ತಿನ್ನದೇ ಹಣ ಕೂಡಿಟ್ಟು ಆರ್​ಎಸ್​ಎಸ್​ಗೆ ನೀಡುವವರೂ ಇದ್ದಾರೆ. ಇದೇ ಹಣದಿಂದ ನಾವು ನಮ್ಮ ಸಂಘವನ್ನು ನಡೆಸುತ್ತಿದ್ದೇವೆ ಎಂದು ಬೆಂಗಳೂರಿನಲ್ಲಿ ನಡೆದ ಆರ್​ಎಸ್​ಎಸ್​ ಶತಮಾನೋತ್ಸವ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಹೇಳಿದರು.

ಇದನ್ನೂ ಓದಿ : ಪರಪ್ಪನ ಅಗ್ರಹಾರ ಜೈಲಲ್ಲಿ ಖೈದಿಗಳ ವಿಲಾಸಿ ಜೀವನ, ಲಷ್ಕರ್‌ ಸಂಘಟನೆ ಉಗ್ರನಿಗೆ ಮೊಬೈಲ್‌ ಬಳಕೆಗೆ ಅವಕಾಶ

ಆರ್​ಎಸ್​ಎಸ್​ ಎಂದಿಗೂ ಅಧಿಕಾರಕ್ಕಾಗಿ ಹೋರಾಡುವುದಿಲ್ಲ. ಆರ್​ಎಸ್​ಎಸ್​ ಸಮಾಜದಲ್ಲಿ ಹಿಂದೂ ಸಂಘಟನೆಯ ಕಾರ್ಯವನ್ನು ಮಾತ್ರ ಮಾಡುತ್ತಿದೆ.ಭಾರತ ಮಾತೆಯ ಘನತೆಯನ್ನು ಕಾಪಾಡಲು ಆರ್​ಎಸ್​ಎಸ್ ಶ್ರಮಿಸಿದೆ.

ಆದರೆ ನಮ್ಮ ಸಂಘವನ್ನು ವಿಷಕಾರಿ ಎಂದು ಕರೆಯುವವರಿದ್ದಾರೆ. ಆದರೆ ಜನರ ಬೆಂಬಲ ನಮ್ಮೊಂದಿಗಿದೆ ಎಂಬುದು ನಮಗೆ ತಿಳಿದಿದೆ. ಸಮಾಜ ಸಂಘಟನೆ ಮಾತ್ರ ನಮ್ಮ ಗುರಿ. ಈ ರೀತಿಯ ವಿರೋಧಗಳಿಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ : ಆರ್‌ಎಸ್‌ಎಸ್‌ ತೆರಿಗೆ ಕಟ್ಟುತ್ತಾ ? ಸತ್ಯ ಬಿಚ್ಚಿಟ್ಟ ಮೋಹನ್‌ ಭಾಗವತ್‌

Mohan Bhagwat Hits Back at Minister Priyank Kharge for Questioning RSS Funding

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories