Parappana Agrahara Jail : ವಿಲಾಸಿ ತಾಣವಾಗಿ ಬದಲಾಯ್ತಾ ಪರಪ್ಪನ ಅಗ್ರಹಾರ : ಲಷ್ಕರ್ ಉಗ್ರನಿಗೆ ಮೊಬೈಲ್ ಬಳಕೆಗೆ ಅವಕಾಶ

Parappana Agrahara Jail : ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಟೋರಿಯಸ್ ಕೈದಿಗಳಿಗೆ ಮೊಬೈಲ್ ಫೋನ್ ಬಳಕೆಗೆ ದೊರೆತ ವಿಡಿಯೋವೊಂದು ವೈರಲ್ ಆಗಿದ್ದು ಕಳವಳಕ್ಕೆ ಕಾರಣವಾಗಿದೆ. ವಿಕೃತ ಕಾಮಿ ಉಮೇಶ್ ರೆಡ್ಡಿ ಮೊಬೈಲ್ ಬಳಕೆ ಮಾಡುತ್ತಾ ಸ್ಮಾರ್ಟ್ ಟಿವಿ ನೋಡುತ್ತಿರುವ ಹಾಗೂ ಲಷ್ಕರ್ ಸಂಘಟನೆಯ ಉಗ್ರ ಮೊಬೈಲ್ ಬಳಕೆ ಮಾಡುತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡಿದೆ.
ಕೈದಿಗಳ ಪಾಲಿಗೆ ಪ್ರಾಯಶ್ಚಿತದ್ದ ಕೇಂದ್ರವಾಗಬೇಕಿದ್ದ ಪರಪ್ಪನ ಅಗ್ರಹಾರ ಕೈದಿಗಳ ಪಾಲಿಗೆ ಸ್ವರ್ಗವಾಗಿದೆ. ಆದರೆ ಪರಪ್ಪನ ಅಗ್ರಹಾರದಲ್ಲಿರುವ ಐಸಿಸ್ ಸಂಘಟನೆಯ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ ಎಂಬಾತ ಕೂಡ ಬಿಂದಾಸ್ ಲೈಫ್ ಎಂಜಾಯ್ ಮಾಡ್ತಿರೋದು ಕಳವಳಕ್ಕೆ ಕಾರಣವಾಗಿದೆ.
ಈ ಹಿಂದೆ ನಟ ದರ್ಶನ್ಗೆ ಜೈಲಿನಲ್ಲಿ ರಾಜಾತಿಥ್ಯ ದೊರಕುತ್ತಿರುವ ವಿಡಿಯೋ ವೈರಲ್ ಆದ ಬಳಿಕ ಸುಪ್ರೀಂ ಕೋರ್ಟ್ ಗೃಹ ಇಲಾಖೆಯನ್ನೇ ತರಾಟೆಗೆ ತೆಗೆದುಕೊಂಡಿತ್ತು. ಆದರೆ ಇದೀಗ ಮೋಸ್ಟ್ ವಾಂಟೆಡ್ ಕ್ರಿಮಿನಲ್ಗಳೇ ಈ ರೀತಿ ವಿಲಾಸಿ ಜೀವನ ನಡೆಸುತ್ತಿರುವುದು ಬೆಳಕಿಗೆ ಬಂದಿರೋದು ನೋಡುತ್ತಿದ್ದರೆ ಅಪರಾಧಿಗಳಿಗೆ ಪರಪ್ಪನ ಅಗ್ರಹಾರ ಸ್ವರ್ಗಕ್ಕೆ ಸಮ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
Also Read : ಸಲಿಂಗಿ ತಾಯಿಯಿಂದಲೇ ಮಗುವಿನ ಹತ್ಯೆ : ಪ್ರೇಯಸಿ ಸಮೇತ ಬಂಧನ
ಇನ್ನು ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ ಉಮೇಶ್ ಎಂಬವರು ಮಾತನಾಡಿದ್ದು, ಜೈಲಿನಲ್ಲಿ ಮೊಬೈಲ್ ಬಳಕೆಗೆ ಅವಕಾಶ ನೀಡುವುದು ಅಕ್ಷಮ್ಯ ಅಪರಾಧ.
ಜೈಲಿನಲ್ಲಿ ವ್ಯವಸ್ಥೆ ಸುಧಾರಿಸಬೇಕು ಎಂದರೆ ಜೈಲು ಅಧೀಕ್ಷಕರಾಗಿ ಐಪಿಎಸ್ ಅಧಿಕಾರಿಗಳೇ ನೇಮಕಗೊಳ್ಳಬೇಕು. ಆಗ ಮಾತ್ರ ಈ ರೀತಿಯ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸಾಧ್ಯವಿದೆ. ಈ ರೀತಿಯ ಚಟುವಟಿಕೆಗಳು ಜೈಲಿನ ಮೂಲ ಉದ್ದೇಶವನ್ನೇ ಹಾಳುಮಾಡುವಂತದ್ದು. ಈ ಅಕ್ರಮಗಳಿಗೆ ಕಡಿವಾಣ ಹಾಕುವ ಕಡೆ ಸರ್ಕಾರ ಗಂಭೀರವಾಗಿ ಚಿಂತಿಸಬೇಕಿದೆ ಎಂದು ಹೇಳಿದ್ದಾರೆ.
Also Read : ಬೇಲಿಕೇರಿ ಅದಿರು ಪ್ರಕರಣ : ಕಾಂಗ್ರೆಸ್ ಶಾಸಕ ಸತೀಶ್ ಸೈಲ್ 21 ಕೋಟಿ ಆಸ್ತಿ ಜಪ್ತಿ
Parappana Agrahara Jail Under Scrutiny LeT Terrorist Allegedly Used Mobile Phone



