ಚಿಕ್ಕಮಗಳೂರು: ದೇವಸ್ಥಾನದ ಭಜನೆ, ಜಾಗಟೆ ಶಬ್ದದಿಂದ ಕಿರಿಕಿರಿ : ಪೊಲೀಸ್​ ಠಾಣೆ ಮೆಟ್ಟಿಲೇರಿದ ಅನ್ಯಕೋಮಿನ ವ್ಯಕ್ತಿ

ಚಿಕ್ಕಮಗಳೂರು : ಕರುನಾಡು ಸರ್ವಜನಾಂಗದ ಶಾಂತಿಯ ತೋಟ ಎಂದು ರಾಷ್ಟ್ರಕವಿ ಕುವೆಂಪು ಅವರು ನಾಡಗೀತೆಯಲ್ಲಿ ಬಣ್ಣಿಸಿದ್ದಾರೆ. ಆದರೆ ಈ ಮಾತಿಗೆ ವಿರುದ್ಧವಾದ ಘಟನೆಯು ಚಿಕ್ಕಮಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮುಸ್ಲಿಂ ವ್ಯಕ್ತಿಯೊಬ್ಬ ದೇವಸ್ಥಾನದ ಭಜನೆ ಹಾಡು, ಜಾಗಟೆ ಸದ್ದಿನಿಂದ ನನಗೆ ಕಿರಿಕಿರಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ದೇಗುಲದ ಎದುರು ಹೈಡ್ರಾಮಾ ನಡೆಸಿದ್ದಾನೆ.

ಚಿಕ್ಕಮಗಳೂರಿನ ಹಳೆ ಉಪ್ಪಳ್ಳಿಯ ಈಶ್ವರ ದೇವಾಲಯದ ಎದುರು ಇಂತಹದ್ದೊಂದು ಹೈಡ್ರಾಮಾ ನಡೆದಿದೆ. ಬಸವನಹಳ್ಳಿ ಠಾಣಾ ಪೊಲೀಸರು ಕರೆ ಮಾಡಿದ ಈ ವ್ಯಕ್ತಿಯು ದೇವಸ್ಥಾನದಲ್ಲಿ ಭಜನೆ ಹಾಡು ಪ್ರಸಾರವಾಗಬಾರದು ಎಂದು ಪೊಲೀಸರ ಎದುರಲ್ಲೇ ವಾಗ್ವಾದ ಮಾಡಿದ್ದಾನೆ.

ಈಶ್ವರ ದೇವಸ್ಥಾನದ ಪಕ್ಕದಲ್ಲಿಯೇ ಫಾರೂಕ್​ ಎಂಬಾತನ ಮನೆಯಿದೆ. ದೇವಸ್ಥಾನದಿಂದ ನಿತ್ಯ ಬರುವ ಇಂತಹ ಶಬ್ದಗಳಿಂದ ಅಕ್ಕ ಪಕ್ಕದ ನಿವಾಸಿಗಳಿಗೆ ಕಿರಿಕಿರಿಯಾಗುತ್ತಿದೆ ಎಂದು ಆರೋಪಿಸಿ ಈತ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ಇದನ್ನೂ ಓದಿ: ದೈವಕ್ಕೆ ಅಪಮಾನಗೈದ ರಣವೀರ್​ ಸಿಂಗ್​​ಗೆ ಹೈಕೋರ್ಟ್ ತರಾಟೆ : ಸೂಪರ್​ಸ್ಟಾರ್​​ ವರ್ತನೆ ಹೇಗಿರಬೇಕೆಂದು ಪಾಠ

ದೇವಸ್ಥಾನಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನೇ ನಿಲ್ಲಿಸಬೇಕೆಂದು ಫಾರೂಕ್​ ವಾದಿಸಿದ್ದಾನೆ. ದೇವಸ್ಥಾನದ ಅರ್ಚಕರಾದ ಜಗದೀಶ್​ ನಾವು ದೇವಸ್ಥಾನದಲ್ಲಿ ಧ್ವನಿವರ್ಧಕವನ್ನು ನಿಧಾನ ಸ್ವರದಲ್ಲಿಯೇ ಬಳಸುತ್ತೇವೆ ಎಂದು ಹೇಳಿದರೂ ಕೇಳದೇ ಫಾರೂಕ್​ ಜಟಾಪಟಿ ನಡೆಸಿದ್ದು ಕೆಲ ಕಾಲ ಗೊಂದಲದ ವಾತಾವರಣ ಮೂಡಿತ್ತು.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories