ಗುಂಡಿ ಮುಚ್ಚಿಲ್ಲ- ಬಾಕಿ ಹಣ ಕೊಟ್ಟಿಲ್ಲ, ಸರಕಾರ ವಿರುದ್ದ ಜನಾಂದೋಲನ : ಆರ್.ಅಶೋಕ್

ಬೆಂಗಳೂರು : ರಾಜ್ಯದಾದ್ಯಂತ ಇರುವ ರಸ್ತೆ ಗುಂಡಿಗಳನ್ನು ಕರ್ನಾಟಕ ಸರಕಾರ ಸರಿಯಾಗಿ ಮುಚ್ಚಿಲ್ಲ. ಕಸದ ಸಮಸ್ಯೆಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಹೀಗಾಗಿ ಸರಕಾರದ ವಿರುದ್ದ ಜನಾಂದೋಲನ ಕೈಗೊಳ್ಳಲಾಗುವುದು ಎಂದು ವಿಪಕ್ಷ ನಾಯಕ ಆರ್ ಅಶೋಕ್ (R Ashok) ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಗುಂಡಿಗಳನ್ನು ಮುಚ್ಚವ ಕಾರ್ಯದಲ್ಲಿ ವಿಫಲವಾಗಿದೆ. ಕಸದ ಸಮಸ್ಯೆಯನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ನಗರದ ಎಲ್ಲಾ ಕಡೆಗಳಲ್ಲಿಯೂ ಕಸವನ್ನು ಸಂಗ್ರಹಣೆ ಮಾಡುತ್ತಿಲ್ಲ. ಜೊತೆಗೆ ಗುತ್ತಿಗೆದಾರರಿಗೆ ಬಾಕಿ ಹಣ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ.
ರಾಜ್ಯ ಸರಕಾರ ವೈಫಲ್ಯಗಳನ್ನು ಇಟ್ಟುಕೊಂಡು ಬೆಂಗಳೂರು ನಗರ ಬಿಜೆಪಿ ಪ್ರತಿನಿಧಿಗಳು ಸಭೆ ನಡೆಸಿದ್ದೇವೆ. ಎಲ್ಲೆಲ್ಲಿ ರಸ್ತೆಗುಂಡಿಗಳು ಇವೆಯೋ, ಕಸದ ಸಮಸ್ಯೆ ಇದೆಯೋ ಅಲ್ಲಿಗೆ ನಾವು ಇನ್ಸೆಪೆಕ್ಷನ್ ಮಾಡ್ತೇವೆ. ನವೆಂಬರ್ 6 ರಿಂದ ಒಂದು ವಾರದ ಕಾಲ ಸರಕಾರ ವಿರುದ್ದ ಜನಾಂದೋಲನ ಕೈಗೊಳ್ಳುತ್ತೇವೆ ಎನ್ನುವ ಎಚ್ಚರಿಕೆ ರವಾನಿಸಿದ್ದಾರೆ.
ಎ ಖಾತಾ ಮಾಡಿಸಿಕೊಳ್ಳಲು ಶುಲ್ಕ ದುಬಾರಿ ನಿಗದಿ ಮಾಡಿದ್ದಾರೆ. ಇದು ಜನರಿಗೆ ಕಟ್ಟಕ್ಕಾಗದ ದುಬಾರಿ ಶುಲ್ಕ. ದುಡ್ಡು ಹೊಡೆಯಲು ಈ ಸ್ಕೀಂ ತರಲಾಗಿದೆ. ಒಸಿ, ಸಿಸಿ ಹೆಸರಲ್ಲಿ ದುಡ್ಡು ಹೊಡೀತಿದ್ದಾರೆ. ಬೆಂಗಳೂರನ್ನು ದುಬಾರಿ ಮಾಡಲು ಕಾಂಗ್ರೆಸ್ ಹೊರಟಿದೆ. ನಮಗೆ ಜನಸಾಮಾನ್ಯರ ದುಬಾರಿಯಲ್ಲದ ಬೆಂಗಳೂರು ಬೇಕು.ನಿಮ್ಮ ಟನೆಲ್ ರೋಡೂ ಬೇಡ, ದುಬಾರಿ ಶುಲ್ಕಗಳು ಬೇಡ ಎಂದಿದ್ದಾರೆ.
ನಾವು ಅಭಿವೃದ್ಧಿಯ ವಿರೋಧಿಗಳಲ್ಲ. ಟನಲ್ ರೋಡ್ಗೆ 1 ಕಿಮೀಗೆ 1700 ಕೋಟಿ ಕರ್ಚಾಗುತ್ತೆ. ಇದರಲ್ಲಿ 700 ಕೋಟಿ ಹೈಕಮಾಂಡ್ ಗೆ ಪಾರ್ಸಲ್ ಮಾಡ್ತಾರೆ. ಟನೆಲ್ ರೋಡ್ ಮಾಡೋದಾದ್ರೆ ಕಡಿಮೆ ಬೆಲೆಯಲ್ಲಿ ಮಾಡಿ, ಪಾರ್ಕ್ಗಳ ಜಾಗ ಬಳಸಿಕೊಳ್ಳಬೇಡಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದಿಂದ ಸಿಎಂ ಯಾರು ಬೇಕಾದ್ರೂ ಆಗಲಿ. ನಮಗೆ ಅದು ಸಂಬಂಧವಿಲ್ಲ. ಸಿದ್ದರಾಮಯ್ಯರಾದರೂ ಆಗಲೀ ಡಿಕೆಶಿಯವರೂ ಆಗಲೀ ಪರಮೇಶ್ವರ್ ಆಗಲೀ ನಮಗೆ ಸಂಬಧ ಇಲ್ಲ. ಆದ್ರೆ ಯಾರಾದರೂ ಆಗಲೀ ಅಭಿವೃದ್ಧಿ, ಜನರ ಸಮಸ್ಯೆ ಕಡೆಗಣಿಸದಿರಿ ಸಿಎಂ ಯಾರೇ ಆದರೂ ಇವರು ಅಭಿವೃದ್ಧಿ ಮಾಡೋದಿಲ್ಲ, ಮನೆ ಹಾಳ ಕೆಲಸವೇ ಮಾಡೋದು. ನಾವು ಹೇಳಿದ ಭವಿಷ್ಯ ಸತ್ಯ ಆಗಿದೆ. ಸಿದ್ದರಾಮಯ್ಯ ಬದಲಾವಣೆ ಆಗೋದು ಸತ್ಯ ಎಂದರು.
ಅಂದು ಅಶೋಕ್ ಜೋತಿಷ್ಯ ಹೇಳ್ತಾರಾ ಎಂದು ಡಿಕೆ ಕೇಳಿದ್ರು. ಇವತ್ತು ಅದು ನಿಜ ಆಗ್ತಿದೆ. ಡಿಕೆ ಸಿಎಂ ಆಗಲ್ಲ, ಸಿದ್ದರಾಮಯ್ಯರೆ ಮುಂದುವರಿಯುತ್ತಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಲಿ ನೋಡೋಣಾ ? ಮರಿ ಕರ್ಗೆ ಕಿರಿ ಕರ್ಗೆ ಯಾರು ಹೇಳೊದು ಬೇಡ. ಕಾಂಗ್ರೆಸ್ ಹೈಕಮಾಂಡ್ ಹೇಳಲಿ ನೋಡೊಣ ಎಂದು ಸವಾಲು ಹಾಕಿದ್ದಾರೆ.
ಜಿಬಿಎ ಕಮಿಟಿ ಬಗ್ಗೆ ಎಸ್ ಆರ್ ವಿಶ್ವನಾಥ್ ಬೇಸರ ವಿಚಾರದ ಕುರಿತು ಮಾತನಾಡಿದ ಅವರು, ಈ ಕುರಿತು ರಾಜ್ಯಾಧ್ಯಕ್ಷರ ಜೊತೆ ಮಾತಾಡುತ್ತೇನೆ. ಎಲ್ಲರನ್ನೂ ಜೊತೆ ಸೇರಿಸಿಕೊಂಡು ಕೆಲಸ ಮಾಡುತ್ತೇವೆ. ಹಿಂದೆ ವಿಶ್ವನಾಥ್ ಕಮಿಟಿಯಲ್ಲಿ ಇದ್ದರು. ಎಲ್ಲರನ್ನೂ ಒಂದೇ ಕಮಿಟಿಯಲ್ಲಿ ಹಾಕೋಕೆ ಆಗೋದಿಲ್ಲ. ಅಧ್ಯಕ್ಷರ ಜೊತೆ ಮಾತಾಡುತ್ತೇನೆ ಎಂದಿದ್ದಾರೆ.
pothole has not been closed – dues have not been paid peoples movement against the Karnakata government R Ashok



