Ration beneficiaries: ರಾಜ್ಯದ ಪಡಿತರ ಫಲಾನುಭವಿಗಳಿಗೆ ಗುಡ್ ನ್ಯೂಸ್

ಬೆಂಗಳೂರು : ration beneficiaries: ರಾಜ್ಯದ ಜನತೆಗೆ ಆಹಾರ ಭದ್ರತೆ ಒದಗಿಸಲು ಸದಾ ಬದ್ಧವಾಗಿರುವ ರಾಜ್ಯ ಸರ್ಕಾರವು ಇದೀಗ ಹೊಸ ವರ್ಷದ ಗಿಫ್ಟ್ ಕೊಡಲು ಸಜ್ಜಾಗಿದೆ. ರಾಜ್ಯ ಸರ್ಕಾರ ಘೋಷಿಸಿರುವ ಇಂದಿರಾ ಕಿಟ್ ಪಡಿತರ ಫಲಾನುಭವಿಗಳಿಗೆ ಮುಂದಿನ ವರ್ಷ ಜನವರಿ ತಿಂಗಳಿನಿಂದಲೇ ದೊರೆಯಲಿದೆ.

ಕೊಡಗು(Kodagu) ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್ ಬೋಸರಾಜು ಮಾಹಿತಿ ನೀಡಿದ್ದಾರೆ. ಕೊಡಗಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಚುನಾವಣಾ ಸಂದರ್ಭದಲ್ಲಿ ರಾಜ್ಯದ ಜನತೆಗೆ ಕೊಟ್ಟ ಮಾತಿನಂತೆಯೇ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದೇವೆ. ಜನರ ನಂಬಿಕೆ ಹಾಗೂ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಂಚೂಣಿಯಲ್ಲಿದೆ ಎಂದಿದ್ದಾರೆ.

Also Read: Espionage for Pakistan : ಪಾಕಿಸ್ತಾನಕ್ಕೆ ಗೂಢಾಚಾರಿಕೆ : ಮಲ್ಪೆ ಕೊಚ್ಚಿನ್​ ಶಿಪ್​ ಯಾರ್ಡ್​ ಸಿಬ್ಬಂದಿ ಬಂಧನ

ಅದೇ ರೀತಿ ಇಂದಿರಾ ಆಹಾರ ಕಿಟ್ ಯೋಜನೆ ಕೂಡ ಜನವರಿಯಿಂದಲೇ ಆರಂಭಗೊಳ್ಳಲಿದೆ. ಬಡ ಜನರ ಆರ್ಥಿಕ ಅಭಿವೃದ್ಧಿಗೆ ಸರ್ಕಾರ ಶ್ರಮಿಸಲಿದೆ. ಪಡಿತರ ಸಂಖ್ಯೆಗೆ ಅನುಗುಣವಾಗಿ ಇಂದಿರಾ ಆಹಾರ ಕಿಟ್ ರಾಜ್ಯದ ಜನತೆಗೆ ಪೂರೈಕೆಯಾಗಲಿದೆ.

ಇಬ್ಬರು ಸದಸ್ಯರು ಇರುವ ಮನೆಯಲ್ಲಿ 750 ಗ್ರಾಂ ತೊಗರಿ ಬೇಳೆ, ಅರ್ಧ ಲೀಟರ್ ಅಡುಗೆ ಎಣ್ಣೆ, ತಲಾ ಅರ್ಧ ಕೆಜಿ ಸಕ್ಕರೆ ಮತ್ತು ಉಪ್ಪು ಸಿಗಲಿದೆ. ಮನೆಯಲ್ಲಿ ಮೂರು ಅಥವಾ ನಾಲ್ವರು ಸದಸ್ಯರಿದ್ದರೆ ಒಂದೂವರೆ ಕೆಜಿ ತೊಗರಿ ಬೇಳೆ, 1 ಲೀಟರ್ ಅಡುಗೆ ಎಣ್ಣೆ ಹಾಗೂ ತಲಾ 1 ಕೆಜಿ ಸಕ್ಕರೆ ಮತ್ತು ಉಪ್ಪನ್ನು ಪಡೆಯಲಿದ್ದಾರೆ.

ಅದೇ ರೀತಿ ಮನೆಯಲ್ಲಿ ಐವರು ಅದಕ್ಕಿಂತ ಹೆಚ್ಚು ಸದಸ್ಯರಿದ್ದರೆ 2.5 ಕೆಜಿ ತೊಗರಿ ಬೇಳೆ, ಒಂದೂವರೆ ಲೀಟರ್ ಎಣ್ಣೆ ಹಾಗೂ ಒಂದೂವರೆ ಕೆಜಿ ಸಕ್ಕರೆ ಮತ್ತು ಉಪ್ಪನ್ನು ಇಂದಿರಾ ಆಹಾರ ಕಿಟ್ ಮೂಲಕ ನೀಡಲಾಗುತ್ತದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories