ಸಿಗಂದೂರು ಸೇತುವೆ ಲೋಕಾರ್ಪಣೆ : ನನಸಾಯ್ತು 6 ದಶಕಗಳ ಕನಸು

ಶಿವಮೊಗ್ಗ: ಶರಾವತಿ ನದಿಯ ಹಿನ್ನೀರಿನ ಮೇಲೆ ಅಂಬಾರಗೋಡ್ಲು ಮತ್ತು ಕಸವಳ್ಳಿ ನಡುವೆ ಸಂಪರ್ಕ ಕಲ್ಪಿಸುವ ಸಿಗಂದೂರು ಸೇತುವೆ ಲೋಕಾರ್ಪಣೆಗೊಂಡಿದೆ.
ಈ ಮೂಲಕ ಮಲೆನಾಡಿಗರು ಹಾಗೂ ಭಕ್ತರ 6 ದಶಕಗಳ ಬೇಡಿಕೆ ಈಡೇರಿಕೆಯಾಗಿದೆ. ಭಾರತದಲ್ಲಿಯೇ ಎರಡನೇ ಅತೀ ಉದ್ದದ ಕೇಬಲ್ ಆಧಾರಿತ ಸೇತುವೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಲೋಕಾರ್ಪಣೆ ಮಾಡಿದ್ದಾರೆ.
ಈ ಮೂಲಕ ಮಲೆನಾಡು ಹಾಗೂ ಕರಾವಳಿಯ ನಡುವೆ ಮತ್ತೊಂದು ಸಂಪರ್ಕ ಕೊಂಡಿಯಾಗಲಿದೆ. ಸುಮಾರು ₹473 ಕೋಟಿಗೂ ಅಧಿಕ ವೆಚ್ಚದಲ್ಲಿ ಈ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ.

ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಅವರ ವಿಶೇಷ ಮುತುವರ್ಜಿಯೊಂದಿಗೆ ಸೇತುವೆ ಅತ್ಯಂತ ಕಡಿಮೆ ಅವಧಿಯಲ್ಲಿ ನಿರ್ಮಾಣವಾಗಿದೆ. ಸಿಗಂದೂರು ಸೇತುವೆಯ ಸುಮಾರು 2.12 ಕಿಲೋ ಮೀಟರ್ ಉದ್ದವಿದೆ.
ಕೇಬಲ್- ಸ್ಟೇಯ್ಡ್ ಸೇತುವೆ ಇದ್ದಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ.
Sigandur Bridge : ಸಿಗಂದೂರು ಸೇತುವೆಯ ವಿಶೇಷತೆ ಏನು ?
ದೇಶದ 2ನೇ ಅತೀ ಉದ್ದದ ಕೇಬಲ್ ಆಧಾರಿತ ಸೇತುವೆ : ಸಿಗಂಧೂರು ಸೇತುವೆ ಹಲವು ವಿಚಾರಗಳಲ್ಲಿ ದೇಶದ ಗಮನ ಸೆಳೆದಿದೆ. ಈ ಸೇತುವೆ ಭಾರತದಲ್ಲಿಯೇ ಎರಡನೇ ಅತೀ ಉದ್ದದ ಕೇಬಲ್ ಆಧಾರಿತ (Cable-Stayed) ಸೇತುವೆಯೆಂಬ ಖ್ಯಾತಿಗೆ ಪಾತ್ರವಾಗಿದೆ.
ಸುಮಾರು 2.44 ಕಿಲೋಮೀಟರ್ (2125 ಮೀಟರ್) ಉದ್ದವಿದ್ದು, ಇದರಲ್ಲಿ 740 ಮೀಟರ್ ಕೇಬಲ್ ಆಧಾರದ ಮೇಲೆ ನಿರ್ಮಿಸಲಾಗಿದೆ.
Also Read : ಕನ್ನಡ ಚಿತ್ರರಂಗಅಭಿನಯ ಶಾರದೆ ಖ್ಯಾತ ನಟಿ ಬಿ.ಸರೋಜಾ ದೇವಿ ವಿಧಿವಶ
ನಿರ್ಮಾಣ ವೆಚ್ಚ: ಈ ಬೃಹತ್ ಸೇತುವೆಯ ನಿರ್ಮಾಣಕ್ಕೆ ಅಂದಾಜು ₹473 ಕೋಟಿ ರೂಪಾಯಿ ವೆಚ್ಚವಾಗಿದೆ.
ಶರಾವತಿ ನದಿಗೆ ಅಡ್ಡಲಾಗಿ ನಿರ್ಮಾಣ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಶರಾವತಿ ನದಿಯ ಹಿನ್ನೀರಿನ ಮೇಲೆ ಇದನ್ನು ನಿರ್ಮಿಸಲಾಗಿದೆ.

ಅಂಬಾರಗೋಡ್ಲು ಮತ್ತು ಕಳಸವಳ್ಳಿ (ತುಮರಿ) ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದೆ.
ಪ್ರಯಾಣದ ಸಮಯ ಕಡಿತ: ಈ ಸೇತುವೆಯು ಶರಾವತಿ ಹಿನ್ನೀರಿನ ಆಚೆಗಿನ ಗ್ರಾಮಗಳಾದ್ಯಂತ ಸಂಪರ್ಕವನ್ನು ಸುಧಾರಿಸಿದೆ. ಹಿಂದೆ ಲಾಂಚ್ ಅಥವಾ ಬಾರ್ಜ್ ಮೂಲಕ ಮಾತ್ರ ಪ್ರಯಾಣ ಸಾಧ್ಯವಿತ್ತು, ಇದು ಸಮಯವನ್ನು ತೆಗೆದುಕೊಳ್ಳುತ್ತಿತ್ತು.
ಈಗ ಸೇತುವೆಯಿಂದ ಪ್ರಯಾಣದ ಸಮಯ ಗಣನೀಯವಾಗಿ ಕಡಿಮೆಯಾಗುತ್ತದೆ. ಸಾಗರದಿಂದ ಸಿಗಂಧೂರು ಅಥವಾ ತುಮರಿಗೆ ಹೋಗಲು ರಸ್ತೆ ಮಾರ್ಗವಾಗಿ 80 ಕಿಲೋಮೀಟರ್ ಪ್ರಯಾಣಿಸಬೇಕಿತ್ತು, ಈಗ ಸೇತುವೆಯಿಂದ ಆ ದೂರ ಅರ್ಧದಷ್ಟು ಕಡಿಮೆಯಾಗಲಿದೆ.

ಪ್ರವಾಸೋದ್ಯಮ ಉತ್ತೇಜನ: ಸಿಗಂಧೂರಿನಲ್ಲಿರುವ ಪ್ರಸಿದ್ಧ ಚೌಡೇಶ್ವರಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಹೋಗುವ ಯಾತ್ರಿಕರಿಗೂ ಇದು ಅನುಕೂಲವಾಗಲಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯುತ್ತದೆ.
Also Read : ಅಂಚೆ ಕಚೇರಿ ಯೋಜನೆ : 5 ಲಕ್ಷ ಠೇವಣಿ ಇಟ್ರೆ ಸಿಗುತ್ತೆ 10 ಲಕ್ಷ..!
ಸುರಕ್ಷಿತ ಪ್ರಯಾಣ: ಹಿಂದೆ ಹಿನ್ನೀರಿನಲ್ಲಿ ದೋಣಿ ದುರಂತಗಳು ಸಂಭವಿಸಿದ ಉದಾಹರಣೆಗಳಿವೆ. ಈ ಸೇತುವೆ ಇಂತಹ ಅಪಾಯಗಳನ್ನು ತಪ್ಪಿಸಿ, ಜನರಿಗೆ ಸುರಕ್ಷಿತ ಪ್ರಯಾಣವನ್ನು ಒದಗಿಸುತ್ತದೆ.
ಆಧುನಿಕ ತಂತ್ರಜ್ಞಾನ: ಇದು ‘ಎಕ್ಸ್ಟ್ರಾಡೋಸ್ಡ್ ಬ್ಯಾಲೆನ್ಸ್ಡ್ ಕ್ಯಾಂಟಿಲಿವರ್ ಬ್ರಿಡ್ಜ್’ ವಿನ್ಯಾಸವನ್ನು ಹೊಂದಿದೆ. ಶರಾವತಿ ನದಿಯ ಭೋರ್ಗರೆವ ಪ್ರವಾಹವನ್ನು ತಡೆದುಕೊಳ್ಳುವ ಸಾಮರ್ಥ್ಯದೊಂದಿಗೆ ಇದನ್ನು ವಿನ್ಯಾಸಗೊಳಿಸಲಾಗಿದೆ.
ಗ್ರಾಮೀಣ ಭಾಗದ ಜನರಿಗೆ ಜೀವನಾಡಿ: 1960 ರ ದಶಕದಲ್ಲಿ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣವಾದಾಗ, ರಸ್ತೆ ಸಂಪರ್ಕ ಕಡಿತಗೊಂಡು, ಜನರು ದೋಣಿಗಳನ್ನು ಅವಲಂಬಿಸಿದ್ದರು.
ಈ ಸೇತುವೆಯು ದಶಕಗಳ ಕನಸನ್ನು ನನಸಾಗಿಸಿದೆ ಮತ್ತು ಸುಮಾರು 20,000 ಜನರ ದೈನಂದಿನ ಜೀವನಕ್ಕೆ ಇದು ದೊಡ್ಡ ಅನುಕೂಲವಾಗಿದೆ.
Sigandur Bridge India’s 2nd longest Bridge inaugurated A 6-decade dream has come true in Kannada News



