ಮಟನ್ಗಿಂತಲೂ ಹೆಚ್ಚಾಯ್ತು ನುಗ್ಗೆಕಾಯಿ ದರ : ಕೆಜಿ ನುಗ್ಗೆಕಾಯಿ ಈಗ 600 ರೂಪಾಯಿ..!
The price of nutmeg: ದಿನಬಳಕೆಯ ವಸ್ತುಗಳ ದರವು ಏರಿಕೆಯಾಗುತ್ತಿರುವ ನಡುವೆಯೇ ನುಗ್ಗೆಕಾಯಿ ಕೂಡ ರಾಜ್ಯದ ಜನತೆಗೆ ಬಹುದೊಡ್ಡ ಶಾಕ್ ನೀಡಿದೆ. ಬಹುತೇಕ ಎಲ್ಲರಿಗೂ ಇಷ್ಟವಾಗುವಂತಹ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ನುಗ್ಗೆಕಾಯಿ ದರ ಮಟನ್ಗೆ ಸರಿಸಮವಾಗಿದೆ. ಮಾರುಕಟ್ಟೆಗಳಲ್ಲಿ 1 ನುಗ್ಗೆಕಾಯಿ 50 ರೂಪಾಯಿಗೆ ಮಾರಾಟವಾಗುತ್ತಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 1 ಕೆಜಿ ನುಗ್ಗೆಕಾಯಿ ಬರೋಬ್ಬರಿ 600 ರೂಪಾಯಿಗೆ ಮಾರಾಟವಾಗುತ್ತಿದೆ. ಕಳೆದ ತಿಂಗಳಷ್ಟೇ ಕೆಜಿಗೆ 100 ರೂಪಾಯಿ ಇದ್ದ ನುಗ್ಗೇಕಾಯಿ ದರ ಏಕಾಏಕಿ ಈ ರೀತಿ ಏರಿಕೆ ಕಂಡಿದೆ. ಮುಂದಿನ 2 ತಿಂಗಳುಗಳ ಕಾಲ ನುಗ್ಗೆಕಾಯಿ ಮಟನ್ ದರದಷ್ಟೇ ಆಗಿರಲಿದೆ ಎಂದು ಅಂದಾಜಿಸಲಾಗಿದೆ.
Also Read: Prajwal Revanna Case : ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಹೈಕೋರ್ಟ್ನಲ್ಲಿಂದು ನಡೆದಿದ್ದೇನು ?
ತಮಿಳುನಾಡಿನಲ್ಲಿ ಬೆಳೆ ವಿಳಂಬ ಹಾಗೂ ಚಂಡಮಾರುತಗಳ ಎಫೆಕ್ಟ್ನಿಂದಾಗಿ ನುಗ್ಗೇಕಾಯಿ ದರ ಈ ಪರಿ ಏರಿಕೆ ಕಂಡಿದೆ. ಇತ್ತ ಟೊಮ್ಯಾಟೋ ದರ ಕೂಡ ಏರಿಕೆ ಕಾಣುತ್ತಲೇ ಇದ್ದು ಶತಕ ಸಮೀಪಿಸಿದೆ . ಕಳೆದ ತಿಂಗಳು ಕೇವಲ 20-30 ರೂಪಾಯಿ ಕೆಜಿಗೆ ಲಭ್ಯವಿದ್ದ ಟೊಮ್ಯಾಟೋ(Tomato) ದರ ಈಗ ಕೆಜಿಗೆ 80 ರೂಪಾಯಿ ಆಗಿದೆ. ಶೀಘ್ರದಲ್ಲೇ ಒಂದು ಕೆಜಿ ಟೊಮ್ಯಾಟೋ ದರ 100 ರೂಪಾಯಿ ಆಗಲಿದ ಎಂದು ಅಂದಾಜಿಸಲಾಗಿದೆ.



