ಜಾತಿಗಣತಿದಾರರಿಗೆ ಹಣ ನೀಡಲು ಚೌಕಾಶಿ : ಮಾತು ತಪ್ಪಿದ ಸರಕಾರ

ಬೆಂಗಳೂರು: caste enumerators: ರಾಜ್ಯದಲ್ಲಿ ಭಾರೀ ವಿರೋಧದ ನಡುವೆಯೂ ಜಾತಿ ಗಣತಿ ಪೂರ್ಣಗೊಂಡಿದೆ. ಜಾತಿ ಸಮೀಕ್ಷೆಗೆ ತೆರಳಿದ್ದ ಅನೇಕ ಸಿಬ್ಬಂದಿ ಅವಮಾನ ಅನುಭವಿಸಿದ ಪ್ರಕರಣಗಳೂ ಬೆಳಕಿಗೆ ಬಂದಿದ್ದವು.

ಸಾಕಷ್ಟು ಅಡೆತಡೆಗಳನ್ನು ಎದುರಿಸಿದ ಸಮೀಕ್ಷಾದಾರರು ಸರ್ಕಾರಕ್ಕೆ ಜಾತಿ ಗಣತಿಯ ವರದಿ ಸಲ್ಲಿಸಿದ್ದರು. ಜಾತಿ ಗಣತಿ ಸಮೀಕ್ಷೆ ಕೈಗೊಂಡ ಸಿಬ್ಬಂದಿಗೆ ಕೊನೆಗೂ ಹಣ ಬಿಡುಗಡೆ ಮಾಡಿದ ರಾಜ್ಯ ಸರ್ಕಾರದ ಚೌಕಾಶಿ ರಾಜಕಾರಣ ಶುರುವಿಟ್ಟುಕೊಂಡಿದೆ.

ಸಮೀಕ್ಷಾದಾರರು ಹಾಗೂ ಮೇಲ್ವಿಚಾರಕರಿಗೆ ನೀಡಲು 1,27,73,45,200 ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರ ಹಿಂದುಳಿದ ಆಯೋಗದ ಮಾರ್ಗದರ್ಶನದಲ್ಲಿ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಿದೆ.

ಆದರೆ ಗಣತಿದಾರರಿಗೆ 5000 ರೂಪಾಯಿ ಜೊತೆಗೆ ಪ್ರತೀ ಮನೆಗೆ 100 ರೂಪಾಯಿ ನೀಡುವುದಾಗಿ ಹೇಳಿತ್ತು. ಅಲ್ಲದೇ ಮೇಲ್ವಿಚಾರಕರಿಗೂ 10000 ರೂಪಾಯಿ ನೀಡುತ್ತೇನೆ ಎಂದಿತ್ತು. ಆದ್ರೀಗ ಸರಕಾರ ಹಣ ಬಿಡುಗಡೆ ಮಾಡಿದ ಬೆನ್ನಲ್ಲೇ ಹಿಂದುಳಿದ ವರ್ಗಗಳ ಆಯೋಗ ಹೊಸ ರಾಗ ತೆಗೆದಿದೆ.

Also Read: ISKCON : ಇಸ್ಕಾನ್‌ ಟೆಂಪಲ್‌ ಮಾಲೀಕತ್ವ ಬೆಂಗಳೂರಿನ ಕೈತಪ್ಪುತ್ತಾ ? ಸುಪ್ರೀಂ ಕೋರ್ಟ್‌ ಭಿನ್ನ ತೀರ್ಪು

ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿಯಾಗಿರುವ ದಯಾನಂದ್‌ ಅವರು ಹೊಸ ಆದೇಶ ಹೊರಡಿಸಿದ್ದು, 1 ರಿಂದ 2 ಸದಸ್ಯರಿರುವ ಮನೆಗಳ ಸಮೀಕ್ಷೆ ಮಾಡಿದ್ದಕ್ಕೆ 50 ರೂಪಾಯಿ ಹಾಗೂ 3ಕ್ಕಿಂತ ಹೆಚ್ಚು ಜನರು ಇರುವ ಮನೆಯ ಸರ್ವೆ ಕಾರ್ಯಕ್ಕೆ 100 ರೂಪಾಯಿ ನೀಡುವಂತೆ ತಿಳಿಸಿದ್ದಾರೆ.

ಸಮೀಕ್ಷೆಯ ವೇಳೆಯಲ್ಲಿ ಸಮೀಕ್ಷೆದಾರರಿಗೆ ಇನ್ನಿಲ್ಲದ ಕಿರುಕುಳ ನೀಡಿದ್ದ ಅಧಿಕಾರಿಗಳು ಇದೀಗ ಹಣ ನೀಡುವ ವೇಳೆಯಲ್ಲಿ ಚೌಕಾಶಿಗೆ ಇಳಿದಿರೋದು ಎಷ್ಟು ಸರಿ ಅಂತಾ ಪ್ರಶ್ನಿಸುತ್ತಿದ್ದಾರೆ. ಒಂದು ಮನೆಗೆ 50 ರೂಪಾಯಿ ಹಣ ಅನ್ನೋದನ್ನು ಈ ಹಿಂದೆ ಎಲ್ಲಿಯೂ ಉಲ್ಲೇಖ ಮಾಡಿರಲಿಲ್ಲ.

ಆದರೆ ರಾಜ್ಯ ಸರಕಾರ ಹಣ ಬಿಡುಗಡೆ ಮಾಡಿದ ಬೆನ್ನಲ್ಲೇ ದಯಾನಂದ್‌ ಅವರು ಪರಿಷ್ಕೃತ ಆದೇಶ ಹೊರಡಿಸಿದ್ದಾರೆ. 1 ರಿಂದ 2 ಜನರು ಇರುವ ಮನೆಗಳಿಗೆ 50 ರೂಪಾಯಿ ಕೊಡುವುದಾದ್ರೆ, 10 ರಿಂದ 15 ಜನರು ಇರುವ ಮನೆಗಳಿಗೆ ಎಷ್ಟು ಹಣ ಕೊಡ್ತೀರಿ ? ಎಂದು ಗಣತಿದಾರರು ಸರಕಾರವನ್ನು ಪ್ರಶ್ನಿಸಿದ್ದಾರೆ.

ದಸರಾ ರಜೆಯಲ್ಲಿನ್ನೂ ಬಿಟ್ಟು ಲಕ್ಷಾಂತರ ಶಿಕ್ಷಕರು ಗಣತಿ ಕಾರ್ಯ ನಡೆಸಿದ್ದಾರೆ. ಕೆಲವು ಗಣತಿದಾರರಿಗೆ ದೂರ ಊರಿನಲ್ಲಿ ಗಣತಿ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ. ನಿತ್ಯವೂ ನೂರಾರು ರೂಪಾಯಿ ವ್ಯಯಿಸಿ ಗಣತಿ ಕಾರ್ಯ ನಡೆಸಿದ್ದಾರೆ. ಆದ್ರೆ ಎಸಿ ರೂಮ್‌ ನಲ್ಲಿ ಕುಳಿತ ಅಧಿಕಾರಿಗಳು ಮಾಡಿದ ಕೆಲಸಕ್ಕೆ ಗೌರವ ವೇತನವನ್ನೂ ಸರಿಯಾಗಿ ನೀಡುತ್ತಿಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Also Read: ಕೇಂದ್ರ ಕಾರಾಗೃಹದಲ್ಲಿ ಉಗ್ರರಿದ್ದಾರೆ ನಿಜ, ವಿಧಾನಸೌಧದಲ್ಲಿ ಅವರಿಗೂ ಮೀರಿದ ಉಗ್ರರಿದ್ದಾರೆ! ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ

ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ಜಾತಿಗಣತಿ ವಿಚಾರದಲ್ಲಿ ದಿನಕ್ಕೊಂದು ಆದೇಶ ಹೊರಡಿಸುವ ಮೂಲಕ ಗಣತಿದಾರರನ್ನು ಗೊಂದಲಕ್ಕೆ ದೂಡಿತ್ತು. ಕೊನೆಗೆ ರಾಜ್ಯ ಸರಕಾರ ಮಧ್ಯ ಪ್ರವೇಶಿಸಿ ಸಮಸ್ಯೆ ಪರಿಹಾರ ಮಾಡಿತ್ತು. ಇದೀಗ ಗೌರವಧನ ಹಂಚಿಕೆ ವಿಚಾರದಲ್ಲಿಯೂ ರಾಜ್ಯ ಸರಕಾರ ಮಧ್ಯ ಪ್ರವೇಶ ಮಾಡಬೇಕಾಗಿದೆ.

ಶಾಲಾ ಶಿಕ್ಷಕರು, ಸರಕಾರಿ ನೌಕರರನ್ನು ಇತರ ಕಾರ್ಯಕ್ಕೆ ನಿಯೋಜನೆ ಮಾಡುವ ಸರಕಾರಗಳು ಹಠಕ್ಕೆ ಬಿದ್ದವರಂತೆ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ ಹಣ ನೀಡುವ ವಿಚಾರದಲ್ಲಿ ಮಾತ್ರ ಪ್ರತೀ ಬಾರಿಯೂ ಜಾತಿಗಣತಿಯಂತೆಯೇ ಮಾಡ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories