ಧರ್ಮಸ್ಥಳ ಬುರುಡೆ ರಹಸ್ಯ : ಇಂದು ಸರಕಾರಕ್ಕೆ ಎಸ್‌ಐಟಿ ವರದಿ ಸಲ್ಲಿಕೆ

Dharmasthala mass burials SIT report : ಬೆಂಗಳೂರು: ಧರ್ಮಸ್ಥಳದಲ್ಲಿ ನಡೆಯುತ್ತಿದ್ದ ಎಸ್ಐಟಿ ತನಿಖೆ ತಾರ್ತಿಕ ಅಂತ್ಯ ಕಂಡಿದೆ. ಈಗಾಗಲೇ ಎಸ್‌ಐಟಿ ಅಧಿಕಾರಿಗಳು ಉತ್ಪನನ ಕಾರ್ಯವನ್ನು ಸ್ಥಗಿತಗೊಳಿಸಿದ್ದಾರೆ.

ಸೋಮವಾರ ಸದನದಲ್ಲಿ ಎಸ್‌ಐಟಿ ಅಧಿಕಾರಿಗಳ ವರದಿ ಮಂಡನೆ ಆಗಲಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ತಿಳಿಸಿದ್ದಾರೆ. ಅನಾಮಿಕ ದೂರುದಾರರು ನೀಡಿದ ಮಾಹಿತಿಯ ಆಧಾರದ ಮೇಲೆ, ಕಳೆದ ಹಲವು ದಿನಗಳಿಂದ ನಡೆಸಿದ ಉತ್ಖನನದಲ್ಲಿ ಅಸ್ತಿ ಪಂಜರ ಸಿಕ್ಕಿದೆಯಾ ?

Advertisement

ಇಲ್ಲವೇ ಅನ್ನೋ ಮಾಹಿತಿಯನ್ನು ನೀಡಲಿದ್ದಾರೆ. ಒಂದೊಮ್ಮೆ ಸಿಕ್ಕಿದ್ರೆ ಅದರ ಮಾಹಿತಿಯನ್ನು ಸನದಕ್ಕೆ ನೀಡಲಿದ್ದಾರೆ. ಸದನದಲ್ಲಿ ಧರ್ಮಸ್ಥಳ ತನಿಖೆಯ ಮಧ್ಯಂತರ ವರದಿ ಮಂಡನೆ ಆಗುತ್ತಿದೆ.

ಮತ್ತೊಂದೆಡೆಯಲ್ಲಿ ಎಸ್‌ಐಟಿ ಅಧಿಕಾರಿಗಳು ತನಿಖೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಶುಕ್ರವಾರ ಸದನದಲ್ಲಿ ಧರ್ಮಸ್ಥಳದ ವಿಚಾರ ಹೈವೋಲ್ಟೇಜ್‌ ಚರ್ಚೆಗೆ ಕಾರಣವಾಗಿತ್ತು.

Advertisement

ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಅವರಿಗೆ ಇದೇ ವಿಚಾರದಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಹಲವು ಬಿಜೆಪಿ ನಾಯಕರು ಸುನಿಲ್‌ ಕುಮಾರ್‌ ಮಾತಿಗೆ ಧ್ವನಿಗೂಡಿಸಿದ್ದರು.

ಸೋಮವಾರ ಎಸ್ಐಟಿ ತನಿಖೆಯ ವರದಿಯ ಕುರಿತು ಮಾಹಿತಿ ನೀಡುವುದಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಧರ್ಮಸ್ಥಳದ ಎಸ್ಐಟಿ ತನಿಖೆಯ ಮಧ್ಯಂತರ ವರದಿ ಸಲ್ಲಿಕೆ ಆಗ್ತಿದೆ.

Advertisement

ಇದನ್ನೂ ಓದಿ : ಗಣೇಶ ಚತುರ್ಥಿ : ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ

ಮುಸುಕುಧಾರಿಯ ಆರೋಪಗಳೇನು ? ದೂರಿನಲ್ಲಿ ಏನಿದೆ ?

ಶವ ಹೂತು ಹಾಕಿದ ಆರೋಪ: ಅಫಿಡವಿಟ್‌ನಲ್ಲಿ, ಧರ್ಮಸ್ಥಳದ ನಿರ್ದಿಷ್ಟ ಸ್ಥಳಗಳಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾಗಿತ್ತು.

Advertisement

ಕೊಲೆ ಮತ್ತು ಆತ್ಮಹತ್ಯೆಗಳ ಆರೋಪ: ಆ ಅಫಿಡವಿಟ್‌ನಲ್ಲಿ, ಕಾಣೆಯಾದ ಮತ್ತು ಅನುಮಾನಾಸ್ಪದ ಸಾವಿಗೀಡಾದ ವ್ಯಕ್ತಿಗಳನ್ನು ಕೊಲೆ ಮಾಡಿ ಅಥವಾ ಅವರು ಆತ್ಮಹತ್ಯೆ ಮಾಡಿಕೊಂಡ ನಂತರ ಶವಗಳನ್ನು ಧರ್ಮಸ್ಥಳದ ಆವರಣದಲ್ಲಿ ಹೂತು ಹಾಕಲಾಗಿದೆ ಎಂದು ಹೇಳಲಾಗಿತ್ತು.

ನಿರ್ದಿಷ್ಟ ಸ್ಥಳಗಳ ಉಲ್ಲೇಖ: ದೂರುದಾರರು, ಶವಗಳನ್ನು ಹೂತು ಹಾಕಿರುವ ಕೆಲವು ನಿರ್ದಿಷ್ಟ ಸ್ಥಳಗಳ ಕುರಿತು ಮಾಹಿತಿಯನ್ನು ಅಫಿಡವಿಟ್‌ನಲ್ಲಿ ನೀಡಿದ್ದರು. ಈ ಮಾಹಿತಿಯ ಆಧಾರದ ಮೇಲೆಯೇ ಎಸ್‌ಐಟಿ ತಂಡವು 17 ಸ್ಥಳಗಳಲ್ಲಿ ಉತ್ಖನನ ನಡೆಸಿತ್ತು.

ಇದನ್ನೂ ಓದಿ : ಸುನಿಲ್‌ ಕುಮಾರ್‌ ವಿರುದ್ದ ಮುತಾಲಿಕ್‌ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ವಜಾ

ಆದರೆ, ಎಸ್‌ಐಟಿ ತಂಡವು ಈ ದೂರುಗಳ ಆಧಾರದ ಮೇಲೆ ಉತ್ಖನನ ನಡೆಸಿದಾಗ, ನೂರಾರು ಶವಗಳ ಬದಲಿಗೆ ಕೇವಲ ಒಂದು ಅಸ್ಥಿಪಂಜರ ಮಾತ್ರ ಪತ್ತೆಯಾಗಿದೆ ಎನ್ನಲಾಗುತ್ತಿದೆ . ಇದರಿಂದ, ಅಫಿಡವಿಟ್‌ನಲ್ಲಿ ನೀಡಿದ ಆರೋಪಗಳು ತನಿಖೆಯ ಸಂದರ್ಭದಲ್ಲಿ ದೃಢಪಟ್ಟಿಲ್ಲ.

Dharmasthala mass burials case SIT report to be submitted to the Karnataka government today

Show More
Advertisement

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories