ಮಟನ್​ಗಿಂತಲೂ ಹೆಚ್ಚಾಯ್ತು ನುಗ್ಗೆಕಾಯಿ ದರ : ಕೆಜಿ ನುಗ್ಗೆಕಾಯಿ ಈಗ 600 ರೂಪಾಯಿ..!

The price of nutmeg: ದಿನಬಳಕೆಯ ವಸ್ತುಗಳ ದರವು ಏರಿಕೆಯಾಗುತ್ತಿರುವ ನಡುವೆಯೇ ನುಗ್ಗೆಕಾಯಿ ಕೂಡ ರಾಜ್ಯದ ಜನತೆಗೆ ಬಹುದೊಡ್ಡ ಶಾಕ್​ ನೀಡಿದೆ. ಬಹುತೇಕ ಎಲ್ಲರಿಗೂ ಇಷ್ಟವಾಗುವಂತಹ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ನುಗ್ಗೆಕಾಯಿ ದರ ಮಟನ್​ಗೆ ಸರಿಸಮವಾಗಿದೆ. ಮಾರುಕಟ್ಟೆಗಳಲ್ಲಿ 1 ನುಗ್ಗೆಕಾಯಿ 50 ರೂಪಾಯಿಗೆ ಮಾರಾಟವಾಗುತ್ತಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 1 ಕೆಜಿ ನುಗ್ಗೆಕಾಯಿ ಬರೋಬ್ಬರಿ 600 ರೂಪಾಯಿಗೆ ಮಾರಾಟವಾಗುತ್ತಿದೆ. ಕಳೆದ ತಿಂಗಳಷ್ಟೇ ಕೆಜಿಗೆ 100 ರೂಪಾಯಿ ಇದ್ದ ನುಗ್ಗೇಕಾಯಿ ದರ ಏಕಾಏಕಿ ಈ ರೀತಿ ಏರಿಕೆ ಕಂಡಿದೆ. ಮುಂದಿನ 2 ತಿಂಗಳುಗಳ ಕಾಲ ನುಗ್ಗೆಕಾಯಿ ಮಟನ್​ ದರದಷ್ಟೇ ಆಗಿರಲಿದೆ ಎಂದು ಅಂದಾಜಿಸಲಾಗಿದೆ.

Also Read: Prajwal Revanna Case : ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ : ಹೈಕೋರ್ಟ್‌ನಲ್ಲಿಂದು ನಡೆದಿದ್ದೇನು ?

ತಮಿಳುನಾಡಿನಲ್ಲಿ ಬೆಳೆ ವಿಳಂಬ ಹಾಗೂ ಚಂಡಮಾರುತಗಳ ಎಫೆಕ್ಟ್​ನಿಂದಾಗಿ ನುಗ್ಗೇಕಾಯಿ ದರ ಈ ಪರಿ ಏರಿಕೆ ಕಂಡಿದೆ. ಇತ್ತ ಟೊಮ್ಯಾಟೋ ದರ ಕೂಡ ಏರಿಕೆ ಕಾಣುತ್ತಲೇ ಇದ್ದು ಶತಕ ಸಮೀಪಿಸಿದೆ . ಕಳೆದ ತಿಂಗಳು ಕೇವಲ 20-30 ರೂಪಾಯಿ ಕೆಜಿಗೆ ಲಭ್ಯವಿದ್ದ ಟೊಮ್ಯಾಟೋ(Tomato) ದರ ಈಗ ಕೆಜಿಗೆ 80 ರೂಪಾಯಿ ಆಗಿದೆ. ಶೀಘ್ರದಲ್ಲೇ ಒಂದು ಕೆಜಿ ಟೊಮ್ಯಾಟೋ ದರ 100 ರೂಪಾಯಿ ಆಗಲಿದ ಎಂದು ಅಂದಾಜಿಸಲಾಗಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories