ಫಟಾಫಟ್ ರೆಡಿ ಮಾಡಿ ಕಡಲೆಹಿಟ್ಟಿನ ದೋಸೆ

ಹೆಚ್ಚಿನ ಜನರಿಗೆ ಬೆಳಗಿನ ತಿಂಡಿ ತಕ್ಷಣ ತಯಾರಿಸುವಂತ ತಿಂಡಿ ಆಗಿರಬೇಕು, ಅಲ್ಲದೇ ರುಚಿಯಾಗಿ ಕೂಡ ಇರಬೇಕು. ಮನೆಯವರೆಲ್ಲರೂ ಇಷ್ಟ ಪಟ್ಟುತಿನ್ನಬೇಕು. ಇಂತ ತಿಂಡಿ ಏನಿದೇ ಎಂದು ಯೋಚಿಸುತ್ತಿದ್ದೀರಾ? ಹಾಗಾದ್ರೇ ಸುಲಭವಾಗಿ ಕಡಲೆ ಹಿಟ್ಟಿನ ದೋಸೆ ಮಾಡೋದನ್ನು ಹೇಳಿಕೊಡ್ತೇವೆ.

ಕಡಲೆ ಹಿಟ್ಟಿನಿಂದ ಎಷ್ಟೆಲ್ಲಾ ತಿಂಡಿ ತಿನಿಸುಗಳನ್ನು ತಯಾರಿಸಬಹುದು ಅನ್ನೋದು ನಿಮ್ಮೆಲ್ಲರಿಗೂ ಈಗಾಗಲೇ ತಿಳಿದಿದೆ. ಕಡಲೆಹಿಟ್ಟಿನಿಂದ ಗರಿಗರಿಯಾದ ಪಕೋಡ, ಪೋಡಿ ಮಾಡಬಹುದು. ಆದರೆ ಇದೇ ಕಡಲೆಹಿಟ್ಟಿನಿಂದ ದೋಸೆಯನ್ನು ಎಂದಾದರೂ ಟ್ರೈ ಮಾಡಿದ್ದೀರಾ? ಹೌದು, ಬೆಳಗ್ಗಿನ ಉಪಹಾರಕ್ಕೆ ಗರಿಗರಿಯಾದ ರುಚಿಯಾದ ದೋಸೆಯನ್ನು ಈ ಕಡಲೆಹಿಟ್ಟಿನಿಂದ ತಯಾರಿಸಬಹುದು.

ಕಡಲೆ ಹಿಟ್ಟಿನ ದೋಸೆ ಮಾಡಲು ಬೇಕಾಗುವ ಪದಾರ್ಥಗಳು : 1.5 ಕಪ್ ಕಡಲೆಹಿಟ್ಟು, ¼ ಕಪ್ ರವೆ, ¼ ಕಪ್ ಅಕ್ಕಿ ಹಿಟ್ಟು, ಅರ್ಧ ಚಮಚ ಓಂಕಾಳು, ¼ ಚಮಚ ಅರಿಶಿನ, ½ ಚಮಚ ಮೆಣಸಿನ ಪುಡಿ, ¾ ಚಮಚ ಉಪ್ಪು, ನೀರು, ಎಣ್ಣೆಯನ್ನು ಮೊದಲೇ ರೆಡಿಮಾಡಿ ಇಟ್ಟುಕೊಳ್ಳಬೇಕು.

ಮಾಡುವ ವಿಧಾನ : ಮೊದಲನೆಯದಾಗಿ ಒಂದು ದೊಡ್ಡ ಬಟ್ಟಲಿನಲ್ಲಿ 1.5 ಕಪ್ ಕಡಲೆಹಿಟ್ಟು, ¼ ಕಪ್ ರವೆ ಮತ್ತು ¼ ಕಪ್ ಅಕ್ಕಿ ಹಿಟ್ಟು ಹಾಕಿ. ಅದಕ್ಕೆ ½ ಚಮಚ ಓಂಕಾಳು , ¼ ಚಮಚ ಅರಿಶಿನ, ½ ಚಮಚ ಮೆಣಸಿನ ಪುಡಿ ಮತ್ತು ¾ ಟೀಸ್ಪೂನ್ ಉಪ್ಪು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಈಗ ಅದಕ್ಕೆ 2 ಕಪ್ ನೀರು ಸೇರಿಸಿ, ಯಾವುದೇ ಉಂಡೆಯಾಗದಂತೆ ಚೆನ್ನಾಗಿ ಮಿಶ್ರಣ ಮಾಡಿ.

ಇದು ನೀರು ದೋಸೆ ಹಿಟ್ಟಿನಂತೆ ಆಗಲು, ಈಗ ಅಗತ್ಯವಿರುವಷ್ಟು ನೀರನ್ನು ಸೇರಿಸಿ. ಪ್ಯಾನ್ ಗೆ ಎರಡು ಚಮಚ ಎಣ್ಣೆ ಹಾಕಿ, ಬಿಸಿ ಮಾಡಿ. ಕಾದ ನಂತರ ಪ್ಯಾನ್ ಗೆ ಹಿಟ್ಟು ಸುರಿಯಿರಿ. 2 ನಿಮಿಷ ಅಥವಾ ದೋಸೆ ಗರಿಗರಿಯಾಗುವವರೆಗೆ ಬೇಯಲು ಬಿಡಿ. ನಂತರ ಮತ್ತೊಂದು ಬದಿಗೆ ತಿರುಗಿಸಿ ಮತ್ತು ಗೋಲ್ಡನ್ ಬ್ರೌನ್ ಕಾಯಿಸಿ. ಅಂತಿಮವಾಗಿ, ಚಟ್ನಿಯೊಂದಿಗೆ ಕಡಲೆಹಿಟ್ಟಿನ ದೋಸೆ ಸವಿಯಲು ಸಿದ್ಧ.

ಇದನ್ನೂ ಟ್ರೈ ಮಾಡಿ :

ಕರ್ಜಿಕಾಯಿ ರೆಸಿಪಿ ಮನೆಯಲ್ಲೇ ಟ್ರೈಮಾಡಿದ್ದೀರಾ?

ಅವಲಕ್ಕಿ ತಿಂದು ಬೇಸರವಾಯ್ತಾ : ಹಾಗಾದ್ರೆ ಅವಲಕ್ಕಿ ರೊಟ್ಟಿಯನ್ನ ಒಮ್ಮೆ ಟ್ರೈ ಮಾಡಿ

ಬಾಯಿಗೂ ರುಚಿ, ಆರೋಗ್ಯಕ್ಕೂ ಉತ್ತಮ : ಮನೆಯಲ್ಲಿಯೇ ಮಾಡಿ ರಾಗಿ ಇಡ್ಲಿ

Comments are closed.