ಬೆಂಗಳೂರು : ರಸ್ತೆಯಲ್ಲಿ ಬಿದ್ದಿದ್ದ ಮರಕ್ಕೆ ಬೈಕ್‌ ಢಿಕ್ಕಿ : ಸವಾರ ಸಾವು

ಬೆಂಗಳೂರು : ಮುಂಜಾನೆ ಅಂಗಡಿ ತೆರೆಯುವ ಸಲುವಾಗಿ ತನ್ನ ಬೈಕಿನಲ್ಲಿ ತೆರಳುತ್ತಿದ್ದ ವೇಳೆಯಲ್ಲಿ ರಸ್ತೆಯಲ್ಲಿ ಬಿದ್ದಿದ್ದ ಮರಕ್ಕೆ ಬೈಕ್‌ ಢಿಕ್ಕಿಯಾಗಿ ತಲೆಗೆ ಗಂಭೀರವಾಗಿ ಗಾಯವಾಗಿ ಬೈಕ್‌ ಸವಾರನೋರ್ವ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಸೌತ್‌ ಎಂಡ್‌ ಸರ್ಕಲ್‌ ಬಳಿಯಲ್ಲಿ ನಡೆದಿದೆ.

ನಾಗರಾಜ್‌ ಎಂಬವರೇ ಮೃತ ದುರ್ದೈವಿ. ವಾದಿರಾಜ್‌ ಅಂಗಡಿ ಮಾಲೀಕರಾಗಿದ್ದ ನಾಗರಾಜ್‌ ಮುಂಜಾನೆ 4.30ರ ಸುಮಾರಿಗೆ ಅಂಗಡಿ ತೆರೆಯಲು ತನ್ನ ಬೈಕಿನಲ್ಲಿ ತೆರಳುತ್ತಿದ್ದರು. ಆದರೆ ರಸ್ತೆಯಲ್ಲಿ ಮರವೊಂದು ಬಿದ್ದಿದ್ದು, ಮರಕ್ಕೆ ಬೈಕ್‌ ಢಿಕ್ಕಿಯಾಗಿದೆ. ಇದರಿಂದಾಗಿ ನಾಗರಾಜ್‌ ಅವರ ತಲೆಗೆ ಗಂಭೀರವಾಗಿ ಗಾಯವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.

ನಿನ್ನೆಯೇ ಮರ ಉರುಳಿ ಬಿದ್ದಿದ್ದು, ಮರವನ್ನುಕಡಿದು ರಸ್ತೆಯಲ್ಲಿಯೇ ಹಾಕಲಾಗಿತ್ತು. ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಅವಘಡ ಸಂಭವಿಸಿದೆ.

ಇದನ್ನೂ ಓದಿ : ಬೆಂಗಳೂರಲ್ಲಿ ಭಾರೀ ಮಳೆ, ಮನೆಗಳಿಗೆ ನೀರು ನುಗ್ಗಿ ಅವಾಂತರ

ಇದನ್ನೂ ಓದಿ : ವಾಹನ ಚಾಲಕರಿಗೆ ಎಚ್ಚರ ! ಡ್ರೈವಿಂಗ್‌ ವೇಳೆ ಬ್ಲೂಟೂತ್‌, ಇಯರ್‌ ಪೋನ್‌ ಅಷ್ಟೇ ಅಲ್ಲಾ, Google Map ಬಳಸಿದ್ರೂ ಬೀಳುತ್ತೆ ದಂಡ

(Bengaluru: A rider died after a bike crashed into a tree )

Comments are closed.