ಶಬರಿಮಲೆಗೆ ಮಹಿಳೆ ಪ್ರವೇಶ ಪ್ರಕರಣ – ಮಹಿಳೆ ಅಸ್ಪ್ರಶ್ಯಳಲ್ಲ ಎಂದ ಸುಪ್ರೀಂಕೋರ್ಟ್

ಶಬರಿಮಲೆ ತೀರ್ಪು ಪ್ರಕರಣದ ನ್ಯಾಯಪೀಠದ ಸದಸ್ಯೆಯಾಗಿರುವ ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರು ಮಹಿಳೆಯರನ್ನು ಮೂರು ದಿನಗಳ ಕಾಲ ಅಸ್ಪ್ರಶ್ಯಳು ಎಂದು ಪರಿಗಣಿಸುವ ಪದ್ಧತಿಯೇ ಸರಿಯಿಲ್ಲ ಎಂದು ಅಭಿಪ್ರಾಯ ಹೊರಹಾಕಿದ್ದಾರೆ.

Sabarimala Temple: ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದ್ದು 7 ಪ್ರಮುಖ ವಿಚಾರಗಳ ಅಡಿಯಲ್ಲಿ ವಿಚಾರಣೆಯನ್ನು ನಡೆಸುತ್ತಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ 9 ನ್ಯಾಯಾಧೀಶರ ಸಂವಿಧಾನ ಪೀಠ ಶಬರಿಮಲೆ ವಿವಾದ ಸಂಬಂಧ ವಿಚಾರಣೆ ನಡೆಸಿದೆ.

ಇನ್ನು ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರವು ದೇಗುಲಕ್ಕೆ ಸ್ತ್ರೀಯರ ಪ್ರವೇಶ ನಿರ್ಬಂಧಿಸುವ ಕ್ರಮವನ್ನು ಸಮರ್ಥಿಸಿಕೊಂಡಿದೆ. ಶಬರಿಮಲೆ ದೇವಸ್ಥಾನಕ್ಕೆ ಸ್ತ್ರೀಯರ ಪ್ರವೇಶ ನಿರ್ಬಂಧ ಲಿಂಗತಾರತಮ್ಯಕ್ಕೆ ಸಂಬಂಧಿಸಿದ ವಿಚಾರವಲ್ಲ. ಬದಲಾಗಿ ಶಬರಿಮಲೆಯಲ್ಲಿ 10 ವರ್ಷದ ಒಳಗಿನ ಹಾಗೂ 50 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಿರುವುದು ಅಯ್ಯಪ್ಪ ಸ್ವಾಮಿಯ ನೈಷ್ಠಿಕ ಬ್ರಹ್ಮಚರ್ಯದಿಂದ ಉಗಮಿಸಿದೆ. ಇದು ಅಶುದ್ಧತೆ ಅಥವಾ ಕೀಳರಿಮೆಯಿಂದ ಮಾಡಿರುವ ಸಂಪ್ರದಾಯವಲ್ಲ. ಇದು ನ್ಯಾಯಾಂಗ ವ್ಯಾಪ್ತಿಯನ್ನು ಮೀರಿರುವ ಕ್ರಮವಾಗಿದೆ ಎಂದು ಕೇಂದ್ರ ಸರ್ಕಾರ ತನ್ನ ನಿಲುವುನ್ನು ಸ್ಪಷ್ಟಪಡಿಸಿದೆ.

ಇನ್ನು ಶಬರಿಮಲೆ ತೀರ್ಪು ಪ್ರಕರಣದ ನ್ಯಾಯಪೀಠದ ಸದಸ್ಯೆಯಾಗಿರುವ ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರು ಮಹಿಳೆಯರನ್ನು ಮೂರು ದಿನಗಳ ಕಾಲ ಅಸ್ಪ್ರಶ್ಯಳು ಎಂದು ಪರಿಗಣಿಸುವ ಪದ್ಧತಿಯೇ ಸರಿಯಿಲ್ಲ ಎಂದು ಅಭಿಪ್ರಾಯ ಹೊರಹಾಕಿದ್ದಾರೆ . ಮೂರು ದಿನಗಳ ಕಾಲ ಆಕೆಯನ್ನು ಅಸ್ಪ್ರಶ್ಯಳು ಎಂದು ಪರಿಗಣಿಸಿದ ಮೇಲೆ ನಾಲ್ಕನೇ ದಿನ ಏಕಾಏಕಿ ಹೇಗೆ ಆಕೆ ಸ್ಪ್ರಶ್ಯಳಾಗುತ್ತಾಳೆ ಎಂದು ನ್ಯಾಯಮೂರ್ತಿ ಬಿ.ವಿ ನಾಗರತ್ನ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಬುಧ–ಗುರು ಸಂಯೋಗ, ನವಪಂಚಮ ರಾಜಯೋಗ : ಈ 5 ರಾಶಿಯವರಿಗೆ ಕಾದಿದೆ ಸಂತೋಷದ ದಿನಗಳು

ಅಸ್ಪ್ರಶ್ಯತೆಯ ಆಧಾರದಲ್ಲಿ ಮಹಿಳೆಯರನ್ನು ದೇವಸ್ಥಾನದ ಪ್ರವೇಶದಿಂದ ಹೊರಗಿಡಲಾಗುತ್ತಿದೆ ಎಂಬ ವಾದವನ್ನು ಖಂಡಿಸಿದ ಸಾಲಿಸಿಟರ್​ ಜನರಲ್ ತುಷಾರ್​ ಮೆಹ್ತಾ, ಶಬರಿಮಲೆಯಲ್ಲಿ ಮಹಿಳೆಯರಿಗೆ ಇರುವ ನಿರ್ಬಂಧವು ವಯಸ್ಸಿನ ಆಧಾರದ ಮೇಲೆಯೇ ಹೊರತು ಮುಟ್ಟಿನ ಆಧಾರದ ಮೇಲಲ್ಲ. ಶಬರಿಮಲೆ ಒಂದು ನಿರ್ದಿಷ್ಟ ವಯಸ್ಸಿನ ಗುಂಪಿಗೆ ಮಾತ್ರ ಸಂಬಂಧಿಸಿದೆ. ಈ ಬಗ್ಗೆ ಯಾವುದೇ ಗೊಂದಲ ಇರಬಾರದು. ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತದ ಭಗವಾನ್ ಅಯ್ಯಪ್ಪನ ದೇವಾಲಯಗಳು ಎಲ್ಲಾ ವಯಸ್ಸಿನ ಮಹಿಳೆಯರಿಗೆ ಮುಕ್ತವಾಗಿವೆ. ಈ ನಿರ್ಬಂಧವನ್ನು ಹೊಂದಿರುವ ಏಕೈಕ ದೇವಾಲಯ ಶಬರಿಮಲೆ ಎಂದು ಹೇಳಿದ್ದಾರೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories