ಬುಧ–ಗುರು ಸಂಯೋಗ, ನವಪಂಚಮ ರಾಜಯೋಗ : ಈ 5 ರಾಶಿಯವರಿಗೆ ಕಾದಿದೆ ಸಂತೋಷದ ದಿನಗಳು
Navapancham Rajyoga 2026: ನವಪಂಚಮ ರಾಜಯೋಗ ಎಂದರೇನು? ಗುರು ಮತ್ತು ಬುಧ ಗ್ರಹದ ಸಂಯೋಗದಿಂದ ಯಾವ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ? ಇಲ್ಲಿದೆ ಓದಿ.
Navapancham Rajyoga 2026: ಜ್ಯೋತಿಷ್ಯ ಶಾಸ್ತ್ರದಲ್ಲಿ ನಿರ್ದಿಷ್ಟ ಸಮಯದಲ್ಲಿ ಕೆಲವು ಪ್ರಭಾವಶಾಲಿ ಗ್ರಹಗಳು ಸೇರಿ ರಾಜಯೋಗಗಳನ್ನು ಸೃಷ್ಟಿಸುತ್ತವೆ. ಅವುಗಳಲ್ಲಿ ನವಪಂಚಮ ರಾಜಯೋಗವನ್ನು ಅತ್ಯಂತ ಪ್ರಭಾವಶಾಲಿ ರಾಜಯೋಗವೆಂದು ಪರಿಗಣಿಸಲಾಗಿದೆ. ದೇವತೆಗಳ ಗುರು ಬ್ರಹಸ್ಪತಿ ಮತ್ತು ರಾಜಕುಮಾರ ಬುಧ ಗ್ರಹದ ಸಂಯೋಗದಿಂದ ಉಂಟಾಗುವ ಯೋಗವನ್ನು ನವಪಂಚಮ ರಾಜಯೋಗ ಎಂದು ಕರೆಯುತ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ನಿಯಮಿತವಾಗಿ ಸಂಭವಿಸುವ ರಾಜಯೋಗಗಳು ಬಹಳಷ್ಟು ರಾಶಿಗಳ ಮೇಲೆ ಸಕಾರಾಕತ್ಮ ಹಾಗೂ ನಕಾರಾತ್ಮಕ ಬದಲಾವಣೆಗಳನ್ನು ತರುತ್ತವೆ. ಸದ್ಯ ಗುರು ಗ್ರಹವು ಮಿಥುನ ರಾಶಿಯಲ್ಲಿ ನೇರವಾಗಿ ಚಲಿಸುತ್ತಿದ್ದಾನೆ. ಅದೇ ರಾಶಿಯಲ್ಲಿ ಬುಧ ಗ್ರಹವು ಏಪ್ರಿಲ್ 3 ಪ್ರವೇಶಿಸಿದ್ದರಿಂದ ನವಪಂಚಮ ರಾಜಯೋಗ ರೂಪುಗೊಂಡಿದೆ. ಈ ಯೋಗವು 12 ರಾಶಿಗಳ ಜೀವನದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತದೆ. ಆದರೆ ನವಪಂಚಮ ರಾಜಯೋಗವು 5 ರಾಶಿಯವರ ಜೀವನದಲ್ಲಿ ಮಹತ್ವದ ಬದಲಾವಣೆಗಳನ್ನು ತರುವುದರ ಜೊತೆಗೆ ಸಮೃದ್ಧಿಯ ದಿನಗಳನ್ನು ಹೊತ್ತು ತರುತ್ತದೆ. ಆ ರಾಶಿಗಳು ಯಾವುವು ಇಲ್ಲಿದೆ ಓದಿ.
ಕಟಕ ರಾಶಿ
ನವಪಂಚಮ ರಾಜಯೋಗದಿಂದ ಕಟಕ ರಾಶಿಯವರು ತಮ್ಮ ಜೀವನದಲ್ಲಿ ಸಂತೋಷದ ದಿನಗಳನ್ನು ಕಾಣುತ್ತಾರೆ. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಅವಕಾಶ ಅವರಿಗೆ ಒದಗಿಬರಲಿದೆ. ಸುಖದ ದಿನಗಳು ಹೆಚ್ಚು ಬರುತ್ತದೆ.
ತುಲಾ ರಾಶಿ
ನವಪಂಚಮ ರಾಜಯೋಗವು ತುಲಾ ರಾಶಿಯವರಿಗೆ ಅನುಕೂಲಕರವಾಗಿದೆ. ಇದರಿಂದ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಸಾಧಿಸುತ್ತಾರೆ. ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ ಕೆಲಸಗಳು ಪುನರಾರಂಭಗೊಳ್ಳಲಿದೆ. ಅದೃಷ್ಟದ ದಿನಗಳು ನಿಮ್ಮದಾಗಲಿದೆ.
ಮೀನ ರಾಶಿ
ನವಪಂಚಮ ರಾಜಯೋಗದಿಂದ ಮೀನ ರಾಶಿಯವರಿಗೆ ಪ್ರತಿಯೊಂದು ವಿಷಯದಲ್ಲೂ ಪೋಷಕರ ಸಂಪೂರ್ಣ ಬೆಂಬಲ ಸಿಗಲಿದೆ. ಮನೆ, ಆಸ್ತಿ ಖರೀದಿಸುವ ನಿಮ್ಮ ಕನಸು ನನಸಾಗಲಿದೆ. ಕುಟುಂಬದ ಸಂತೋಷ ಹೆಚ್ಚುತ್ತದೆ.
ಇದನ್ನೂ ಓದಿ: Vastu Tips : ನಿಮ್ಮ ಮನೆಯಲ್ಲಿ ಹಣದ ಮಳೆ ಸುರಿಯಬೇಕೆ ? ಈ ಸರಳ ವಾಸ್ತು ಬದಲಾವಣೆಗಳನ್ನು ಇಂದೇ ಮಾಡಿ
ಕುಂಭ ರಾಶಿ
ಈ ರಾಶಿಯವರು ಅನೇಕ ಕ್ಷೇತ್ರಗಳಲ್ಲಿ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಾರೆ. ನಿಮ್ಮ ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳಲು ಈ ಸಮಯ ಉತ್ತಮವಾಗಿದೆ. ನಿಮ್ಮ ಸಾಮರ್ಥ್ಯದಿಂದ ಅನೇಕ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ಒಳ್ಳೆಯ ದಿನಗಳನ್ನ ಕಾಣುತ್ತೀರಿ.
ಧನು ರಾಶಿ
ನವಪಂಚಮ ರಾಜಯೋಗವು ಧನುರಾಶಿಯವರಿಗೆ ಹೆಚ್ಚು ಅದೃಷ್ಟವನ್ನು ನೀಡುತ್ತದೆ. ನಿಮ್ಮ ವೈವಾಹಿಕ ಜೀವನದಲ್ಲಿ ಈಗಾಗಲೇ ಇರುವ ಸಮಸ್ಯೆ ಮತ್ತು ತೊಡಕುಗಳು ಕೊನೆಗಳ್ಳಲಿದೆ. ಉತ್ತಮ ದಿನಗಳು ನಿಮ್ಮನ್ನು ಹುಡುಕಿ ಬರಲಿವೆ.



