ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗಾದಿ : ಮಾಜಿ ಸಚಿವರ ನಡುವೆ ಪೈಪೋಟಿ, 3ನೇ ವ್ಯಕ್ತಿಗೆ ಖುಲಾಯಿಸುತ್ತಾ ಲಕ್ ?

ಮಂಗಳೂರು: ಕರಾವಳಿ ಅಭಿವೃದ್ಧಿ ಮಂಡಳಿ (Coastal Development Board) ಯ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ಜೋರಾಗಿದೆ. ಅದ್ರಲ್ಲೂ ಇಬ್ಬರು ಮಾಜಿ ಸಚಿವರ ನಡುವೆ ದೊಡ್ಡ ಮಟ್ಟದಲ್ಲಿಯೇ ಪೈಪೋಟಿ ನಡೆಯುತ್ತಿದೆ ಎಂದು ಕಾಂಗ್ರೆಸ್ ಮೂಲಗಳು ಉಲ್ಲೇಖಿಸಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವರಾಗಿರುವ ಬಿ.ರಮಾನಾಥ ರೈ ಹಾಗೂ ಉಡುಪಿಯ ಮಾಜಿ ಉಸ್ತುವಾರಿ ಸಚಿವರಾದ ವಿನಯ್ ಕುಮಾರ್ ಸೊರಕೆ ಅವರ ನಡುವೆ ಅಧ್ಯಕ್ಷಗಾದಿಗಾಗಿ ದೊಡ್ಡಮಟ್ಟದಲ್ಲಿ ಪೈಪೋಟಿ ಶುರುವಾಗಿದೆ.
ಕರಾವಳಿಯ ಮಟ್ಟಿಗೆ ಇಬ್ಬರೂ ಕೂಡ ಪ್ರಬಾವಿ ಕಾಂಗ್ರೆಸ್ ಮುಖಂಡರು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇದ್ದರೂ ಕೂಡ ಇಬ್ಬರು ಸರಕಾರದ ಮಟ್ಟದಲ್ಲಿ ಯಾವುದೇ ಹುದ್ದೆಯನ್ನೂ ಪಡೆದಿಲ್ಲ.
ಇದೇ ಕಾರಣದಿಂದಲೇ ಶತಾಯಗತಾಯ ಕರಾವಳಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷಗಾಧಿಯ ಮೇಲೆ ಇಬ್ಬರು ನಾಯಕರು ಕಣ್ಣಿಟ್ಟಿದ್ದಾರೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ನಾಯಕರನ್ನು ಭೇಟಿಯಾಗಿ ಮನವೊಲಿಕೆಯ ಕಾರ್ಯವನ್ನು ಮಾಡುತ್ತಿದ್ದಾರಂತೆ.
ಬಿ ರಮಾನಾಥ ರೈ ಕಾಂಗ್ರೆಸ್ ಪಕ್ಷದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿದವರು, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಾತ್ರವಲ್ಲ, ಕರ್ನಾಟಕ ರಾಜ್ಯದ ಗೃಹ ಸಚಿವರಾಗಿ ( ಬಂಧಿಖಾನೆ, ಅಗ್ನಿಶಾಮಕ ಮತ್ತು ಗೃಹರಕ್ಷಕದಳ).
ಅಲ್ಲದೇ ಅಬಕಾರಿ, ಸಾರಿಗೆ, ಬಂದರು ಮತ್ತು ಮೀನುಗಾರಿಕೆ, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವವಿದೆ.
ಇದನ್ನೂ ಓದಿ : ವಾರ್ಷಿಕ ಎಷ್ಟು ವ್ಯವಹಾರಕ್ಕೆ ಜಿಎಸ್‌ಟಿ ನೋಂದಣಿ ಮಾಡಿಸಬೇಕು ?
ಇನ್ನು ವಿನಯ್ ಕುಮಾರ್ ಸೊರಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಪ್ರಭಾವ ಹೊಂದಿದ್ದಾರೆ. ನಗರಾಭಿವೃದ್ದಿ ಸಚಿವರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಅಷ್ಟೇ ಅಲ್ಲಾ ಪುತ್ತೂರು ಹಾಗೂ ಕಾಪು ಕ್ಷೇತ್ರದಿಂದ ಶಾಸಕರಾಗಿ, ಉಡುಪಿ ಸಂಸದರಾಗಿಯೂ ಅನುಭವ ಹೊಂದಿದ್ದಾರೆ.
Coastal Development Board : ಇಬ್ಬರ ಪೈಪೋಟಿ 3ನೇ ವ್ಯಕ್ತಿಗೆ ಲಕ್ ..!
ಕರ್ನಾಟಕ ಕರಾವಳಿ ಭಾಗದ ಪ್ರಭಾವಿ ಮಾಜಿ ಸಚಿವರಾಗಿರುವ ಇಬ್ಬರ ನಡುವೆ ಪೈಪೋಟಿ ಏರ್ಪಡುತ್ತಿದ್ದಂತೆಯೇ ಮೂರನೇ ವ್ಯಕ್ತಿಗೆ ಅಧ್ಯಕ್ಷ ಹುದ್ದೆ ಒಲಿಯಬಹುದು ಅಂತಾ ರಾಜಕೀಯ ವಿಶ್ಲೇಷಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇಬ್ಬರ ನಡುವೆ ಹೆಚ್ಚು ಪೈಪೋಟಿ ಮುಂದುವರಿದಾಗ ಮೂರನೇ ವ್ಯಕ್ತಿಗೆ ಅದೃಷ್ಟ ಬರಬಹುದು. ಅಲ್ಲದೇ ಅನಿವಾರ್ಯ ಕೂಡ ಆಗಬಹುದು.
ಈ ಕುರಿತು ಕಾಂಗ್ರೆಸ್‌ನ ಹಿರಿಯ ನಾಯಕರ ಅಭಿಪ್ರಾಯವನ್ನೂ ಕೂಡ ಕಾಂಗ್ರೆಸ್ ಹೈಕಮಾಂಡ್ ಸಂಗ್ರಹ ಮಾಡಬಹುದು. ನಂತರ ಇದೇ ಅಭಿಪ್ರಾಯವನ್ನೂ ಪರಿಗಣಿಸಬಹುದು ಅಂತಾ ವಿಶ್ಲೇಷಕರು ವಿಶ್ಲೇಷಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ : ಕೇರಳ ನರ್ಸ್ ನಿಮಿಷಾ ಪ್ರಿಯ ಗಲ್ಲುಶಿಕ್ಷೆ ಮುಂದೂಡಿಕೆ : ಮುಂದೇನಾಗುತ್ತೆ ಪ್ರಕರಣ ?
ಕಾಂಗ್ರೆಸ್‌ನ ಇಬ್ಬರು ಹಿರಿಯ ನಾಯಕರು ಬೆಂಗಳೂರು ಮಾತ್ರವಲ್ಲ ದೆಹಲಿ ಮಟ್ಟದಲ್ಲಿಯೂ ಸಾಕಷ್ಟು ಪ್ರಭಾವ ಹೊಂದಿದ್ದಾರೆ. ಹೀಗಾಗಿ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಅನ್ನೋದು ಹೈಕಮಾಂಡ್‌ಗೆ ಕೂಡ ಕಗ್ಗಂಟಾಗುವ ಸಾಧ್ಯತೆಯಿದೆ.
ಇನ್ನು ಘಟನಾನುಘಟಿ ನಾಯಕರೇ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಕಾರಣಕ್ಕೆ ಕರಾವಳಿ ಅಭಿವೃದ್ದಿ ಮಂಡಳಿ ಹೆಚ್ಚು ಪ್ರತಿಷ್ಠೆಯನ್ನು ಪಡೆದುಕೊಂಡಿದೆ.
ನಿಗಮ ಮಂಡಳಿಗೆ ಕೆಲವೇ ತಿಂಗಳಲ್ಲಿ ಇನ್ನೊಂದು ಸುತ್ತಿನ ನೇಮಕ ನಡೆಯಲಿದೆ. ಕಾಂಗ್ರೆಸ್ ನಾಯಕರಲ್ಲಿ ಸಂಚಲನ ಸೃಷ್ಟಿಸಿದೆ.
ಇದನ್ನೂ ಓದಿ : ಹೊಸ ಪಡಿತರ ಚೀಟಿ, ತಿದ್ದುಪಡಿಗೆ ಅವಕಾಶ : ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ
ಹಿರಿಯ ನಾಯಕರು, ಪ್ರಭಾವಶಾಲಿ ಹುದ್ದೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಕರಾವಳಿಯ ರಾಜಕೀಯವನ್ನು ರೋಚಕ ಘಟಕ್ಕೆ ತಂದು ನಿಲ್ಲಿಸಿದೆ.
ಆದರೆ ಕಾಂಗ್ರೆಸ್ ಹೈಕಮಾಂಡ್ ಇದುವರೆಗೂ ಯಾವುದೇ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಪ್ರಭಾವಶಾಲಿ ಕರಾವಳಿಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯುತ್ತದೆ ಅನ್ನೋದನ್ನು ಕಾದು ನೋಡಬೇಕಾಗಿದೆ.
ಕರಾವಳಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಹುದ್ದೆ ಪ್ರತಿಷ್ಠೆಯ ಕಣವಾಗಿದೆ. ಇಬ್ಬರು ನಾಯಕರಲ್ಲಿ ಯಾರು ಹೆಚ್ಚು ಪ್ರಭಾವಿಗಳು ಅನ್ನೋದು ಈ ಮೂಲಕ ಸಾಬೀತಾಗಲಿದೆ. ಕಾಂಗ್ರೆಸ್ ಕಾರ್ಯಕರ್ತರಲ್ಲೂ ಕುತೂಹಲ ಮೂಡಿಸಿದೆ.
Coastal Development Board Chairman seat: Competition between Ramanath Rai and Vinay Kumar Sorake in Kannada News



