ಬಿಜೆಪಿಗೆ ಬಿಸಿತುಪ್ಪವಾದ ಸೋಮಣ್ಣ ಮುನಿಸು: ಸ್ವತಃ ಸಂಧಾನಕ್ಕಿಳಿದ ಸಿಎಂ ಬೊಮ್ಮಾಯಿ

ಬೆಂಗಳೂರು: (Minister V Somanna) ರಾಜ್ಯದಲ್ಲಿ ಮತಬೇಟೆಯ ಅಖಾಡ ಸಜ್ಜಾಗಿದೆ. ಹೀಗಾಗಿ ಪಕ್ಷಗಳು ಆಂತರಿಕ ಭಿನ್ನಮತ ಮರೆತು ಜನರ ಮನವೊಲಿಸುವ ಕಾರ್ಯಕ್ಕೆ ಸಜ್ಜಾಗುತ್ತಿವೆ. ಈ‌ಮಧ್ಯೆ ಬಿಜೆಪಿಯ ಹಿರಿಯ ಸಚಿವ ಹಾಗೂ ನಾಯಕ ವಿ.ಸೋಮಣ್ಣ ಚುನಾವಣೆಯ ಹೊಸ್ತಿಲಿನಲ್ಲಿ ಮುನಿಸಿಕೊಂಡಿದ್ದು, ರಾಜ್ಯ ಬಿಜೆಪಿ ಪಾಲಿಗೆ ಇದು ತಲೆನೋವಾಗಿದೆ. ರಾಜ್ಯ ಬಿಜೆಪಿ ಮಟ್ಟಿಗೆ‌ ಮಹತ್ವ ಎನ್ನಿಸದಿದ್ದರೂ ಬೆಂಗಳೂರು ಬಿಜೆಪಿ ಮಟ್ಟಿಗೆ ವಿ.ಸೋಮಣ್ಣ ಪ್ರಭಾವಿ ನಾಯಕರು ಎಂಬುದರಲ್ಲಿ ಎರಡು ಮಾತಿಲ್ಲ. ಬಿಬಿಎಂಪಿ ಚುನಾವಣೆಯಿಂದ ಆರಂಭಿಸಿ ವಿಧಾನಸಭಾ ಚುನಾವಣೆವರೆಗೂ ಸೋಮಣ್ಣ ಮತಗಳಿಕೆಯಲ್ಲಿ ಬಿಜೆಪಿಯ ಕೈ ಬಲಪಡಿಸಿದ್ದಾರೆ.

ಸಚಿವರಾಗಿ ತಮ್ಮ ಖಾತೆಯ ನಿರ್ವಹಣೆ ಹಾಗೂ ಮೈಸೂರು ದಸರಾ, ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಎಲ್ಲವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ಇಷ್ಟೆಲ್ಲ ಸಾಧನೆ ಮಾಡಿ ಪಕ್ಷದ ಜೊತೆಗಿದ್ದ ವಿ.ಸೋಮಣ್ಣ ಇನ್ನೇನು ಚುನಾವಣೆಗೆ ದಿನಗಣನೆ ನಡೆದಿದೆ ಎನ್ನುವಾಗ ಪಕ್ಷದ ಮೇಲೆ‌ಮುನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ತಮ್ಮದೇ ಉಸ್ತುವಾರಿಯ ಚಾಮರಾಜನಗರದಲ್ಲಿ ನಡೆದ ನಡ್ಡಾ ಕಾರ್ಯಕ್ರಮಕ್ಕೂ ಸೋಮಣ್ಣ (Minister V Somanna) ಮುಖ ಹಾಕಲಿಲ್ಲ. ಅಷ್ಟೇ ಅಲ್ಲ ಬೆಂಗಳೂರಿನ ಬಿಜೆಪಿ ರಥಯಾತ್ರೆಯಿಂದಲೂ ಅಂತರ ಕಾಯ್ದುಕೊಂಡಿದ್ದಾರೆ.

ಚುನಾವಣೆಯ ಹೊತ್ತಿನಲ್ಲಿ ಹಿರಿಯ ಲಿಂಗಾಯತ್ ನಾಯಕನ ಈ ಮುನಿಸು ಬಿಜೆಪಿಯನ್ನು ಕಂಗೆಡಿಸಿದೆ. ಈಗಾಗಲೇ ಲಿಂಗಾಯತ್ ಸಮುದಾಯದ ಯಡಿಯೂರಪ್ಪನವರನ್ನು ಬಿಜೆಪಿ ಕಡೆಗಣಿಸಿದೆ ಎಂಬ ಆರೋಪ ಇರುವಾಗ ಸೋಮಣ್ಣನೂ ಮುನಿಸಿಕೊಂಡ್ರೇ ಬಿಜೆಪಿ ಪಾಲಿಗೆ ಇದು ದೊಡ್ಡ ಆಘಾತವನ್ನೇ ತಂದೊಡ್ಡುವ ಭೀತಿ ಇದೆ. ಹೀಗಾಗಿ ಸೋಮಣ್ಣ ಮುನಿಸು ಸಹಜವಾಗಿಯೇ ಕಮಲಪಾಳಯಕ್ಕೆ ತಲೆನೋವಾಗಿದೆ. ಕೇವಲ ಮುನಿಸು ಮಾತ್ರವಲ್ಲ ಸೋಮಣ್ಣ (Minister V Somanna) ಮೊನ್ನೆ ರಾಮನಗರದಲ್ಲಿ ನಡೆದ ಬಡಾವಣೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಂಸದ ಡಿಕೆಸುರೇಶ್ ಜೊತೆ ಆತ್ಮೀಯವಾಗಿ ಮಾತನಾಡಿದ್ದು, ಸಭೆಯಲ್ಲಿ ಡಿಕೆ ಸಹೋದರರನ್ನು ಮುಕ್ತ ಕಂಠದಿಂದ ಹೊಗಳಿದ್ದು ಬಿಜೆಪಿ ಪಾಲಿಗೆ ನುಂಗಲಾರದ ತುತ್ತಾಗಿದೆ.

ಹೀಗಾಗಿ ಈಗ ಸೋಮಣ್ಣ ಮನವೊಲಿಕೆಗೆ ಬಿಜೆಪಿ ಕಸರತ್ತು ಆರಂಭಿಸಿದ್ದಾರೆ. ಒಂದು ಹಂತದ ನಾಯಕರಿಂದ ಮನವೊಲಿಕೆ ಕಸರತ್ತು ನಡೆಯಿತಾದರೂ ಫಲ ಕೊಟ್ಟಿಲ್ಲ. ಹೀಗಾಗಿ ಗುರುವಾರ ಸಂಜೆ ಅಥವಾ ಶುಕ್ರವಾರ ಸ್ವತಃ ಸಿಎಂ ಬೊಮ್ಮಾಯಿಯವರೇ ಕಣಕ್ಕಿಯಲಿದ್ದು, ಗೃಹಕಚೇರಿ ಕೃಷ್ಣಾದಲ್ಲಿ ಸಿಎಂರನ್ನು ಮನವೊಲಿಸುವ ಪ್ರಯತ್ನ ಮಾಡಲಿದ್ದಾರಂತೆ. ಮೂಲಗಳ‌ ಮಾಹಿತಿ ಪ್ರಕಾರ ಸೋಮಣ್ಣ ಬಿಜೆಪಿಯಲ್ಲಿ ಹಾಗೂ ತಮ್ಮ ವ್ಯಾಪ್ತಿಗೆ ಬರುವ ಇಲಾಖೆ ಹಾಗೂ ಪ್ರದೇಶಗಳಲ್ಲಿ ಮಾಜಿಸಿಎಂ ಬಿಎಸ್ವೈ ಪುತ್ರ ವಿಜಯೇಂದ್ರ್ ಹಸ್ತಕ್ಷೇಪದಿಂದ ಅಸಮಧಾನಗೊಂಡಿದ್ದಾರಂತೆ.

ಇದನ್ನೂ ಓದಿ : ಕಾಂಗ್ರೆಸ್ ಟಿಕೇಟ್ ಹಂಚಿಕೆಯಲ್ಲೇ ಅಪಸ್ವರ : ಬಂಡಾಯದ ಸೂಚನೆ ಕೊಟ್ಟ ಎಂ.ಬಿ.ಪಾಟೀಲ್

ಇದನ್ನೂ ಓದಿ : MP Sumalatha join BJP: ನಾಳೆ ಬಿಜೆಪಿ ಗೆ ಸೇರಲಿದ್ದಾರೆ ಸಂಸದೆ ಸುಮಲತಾ: ರೆಬೆಲ್‌ ಹೆಂಡತಿಯ ಒಳಗುಟ್ಟು ಬಯಲು

ನಲ್ವತ್ತು ವರ್ಷಗಳಿಂದ ರಾಜಕಾರಣ ಮಾಡಿಕೊಂಡು ಬಿಜೆಪಿಯ ಏಳ್ಗೆಗಾಗಿಯೂ ದುಡಿದ 72 ವರ್ಷ ವಯಸ್ಸಿನ ನಾನು ನಿನ್ನೆ ಮೊನ್ನೆ ಪಕ್ಷ ಸೇರಿಕೊಂಡ ಚಿಕ್ಕ ಹುಡುಗ ವಿಜಯೇಂದ್ರ್ ಎದುರು ಕೈಕಟ್ಟಿ ನಿಲ್ಲೋದು ಸಾಧ್ಯವೇ ಇಲ್ಲ ಎಂದು ನೊಂದುಕೊಂಡಿದ್ದು, ಅದೇ ಕಾರಣಕ್ಕೆ ಪಕ್ಷ ತೊರೆಯುವ ಚಿಂತನೆಯಲ್ಲಿದ್ದಾರೆ ಎನ್ನಲಾಗಿದೆ. ಈಗ ಸ್ವತಃ ಸಿಎಂ ಸಂಧಾನಕ್ಕೆ ಇಳಿದಿದ್ದು, ಸಂಧಾನಕ್ಕೆ ಫಲ ಸಿಗಲಿದ್ಯಾ ಅನ್ನೋದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ : ಉಡುಪಿ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನರ ರಾಜರು: ವಿವಾದದ ಕಿಡಿ ಹೊತ್ತಿಸಿದ ಮಿಥುನ್‌ ರೈ

Minister V Somanna: Somanna taunts BJP: CM Bommai himself negotiated

Comments are closed.