ಸಂಪುಟ ರಚನೆಗೆ ಮುಹೂರ್ತ ಫಿಕ್ಸ್‌ : ಬೆಳಗ್ಗೆಯೇ ಶುಭಸೂಚನೆ : ಸಿಎಂ ಬೊಮ್ಮಾಯಿ

ನವದೆಹಲಿ : ರಾಜ್ಯದಲ್ಲಿ ನೂತನ ಸಚಿವ ಸಂಪುಟ ರಚನೆಗೆ ಮುಹೂರ್ತ ಫಿಕ್ಸ್‌ ಆಗಿದೆ. ಹೈಕಮಾಂಡ್‌ ಮುಂಜಾನೆ ಶುಭ ಸೂಚನೆ ನೀಡುವ ನಿರೀಕ್ಷೆಯಲ್ಲಿದೆ. ಹೀಗಾಗಿ ನಾಳೆ ಮಧ್ಯಾಹ್ನ 2.15ರ ಮುಹೂರ್ತದಲ್ಲಿ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯ ನಡೆಯುವ ಭರವಸೆ ಇದೆ ಎಂದು ಸಿಎಂ ಬಸವರಾಜ್‌ ಬೊಮ್ಮಾಯಿ ಹೇಳಿದ್ದಾರೆ.

ನವದೆಹಲಿಯಲ್ಲಿ ಹೈಕಮಾಂಡ್‌ ಭೇಟಿಯ ನಂತರದ ಮಾಧ್ಯಮದವರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಪ್ರಾದೇಶಿಕ, ಸಾಮಾಜಿಕ ನ್ಯಾಯ ಸೇರಿದಂತೆ ಎಲ್ಲಾ ರೀತಿಯಲ್ಲಿಯೂ ಚರ್ಚೆಯೂ ನಡೆದಿದೆ. ಎರಡು ಹಂತಗಳಲ್ಲಿ ಸಚಿವ ಸಂಪುಟ ಎರಡು ಹಂತಗಳಲ್ಲಿ ನಡೆದಿದೆ. ಸಂಪುಟಕ್ಕೆ ಮೂರ್ನಾಲ್ಕು ಮಂದಿಯ ಸೇರ್ಪಡೆಯ ಕುರಿತು ಚರ್ಚೆ ನಡೆದಿದೆ. ಅದನ್ನು ಹೈಕಮಾಂಡ್‌ ಅಂತಿಮಗೊಳಿಸಿದ ಬೆನ್ನಲ್ಲೇ ನೂತನ ಸಚಿವರ ಪ್ರಮಾಣ ವಚನ ನಡೆಯಲಿದೆ.

ಈಗಾಗಲೇ ಸಚಿವ ಸಂಪುಟ ಸೇರುವ ಸಚಿವರ ಪಟ್ಟಿಯ ಕುರಿತು ಚರ್ಚೆಯನ್ನು ನಡೆಸಲಾಗಿದೆ. ಹಿರಿಯರ ಜೊತೆಗೆ ಕಿರಿಯರಿಗೂ ಅವಕಾಶವನ್ನು ನೀಡಲಾಗುತ್ತಿದೆ. ಮುಂಜಾನೆಯೇ ಹೈಕಮಾಂಡ್‌ ನಾಯಕರು ಶುಭ ಸೂಚನೆಯನ್ನು ನೀಡಿದ್ರೆ ಮಧ್ಯಾಹ್ನ ಪ್ರಮಾಣ ವಚನ ಕಾರ್ಯ ನಡೆಯಲಿದೆ. ಸಂಪುಟ ರಚನೆಗೆ ಸಂಬಂಧಿಸಿದಂತೆ ಯಾವುದೇ ಗೊಂದಲವಿಲ್ಲ. ಕೇಂದ್ರದ ನಾಯಕರು ಕೆಲವು ವಿವರಣೆ ಕೇಳಿದ್ದಾರೆ. ಅದಕ್ಕೆ ಸಂಬಂಧಿಸಿದಂತಹ ವಿವರಣೆಯನ್ನು ನೀಡಿದ್ದೇವೆ. ಮುಂಜಾನೆಯ ವರೆಗೆ ಕಾಲಾವಕಾಶವನ್ನು ಕೇಳಿದ್ದಾರೆ ಎಂದರು.

ನಾನು ನಾಳೆ ಮುಂಜಾನೆ 6.10ರ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದೇನೆ. ಹೈಕಮಾಂಡ್‌ ನಾಯಕರ ಸೂಚನೆ ಬಂದ ಕೂಡಲೇ ನೂತನ ಸಚಿವರು ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಇನ್ನೂ ಉಪಮುಖ್ಯಮಂತ್ರಿಗಳ ನೇಮಕದ ಕುರಿತು ಚರ್ಚೆಯೂ ನಡೆದಿದೆ. ಅಲ್ಲದೇ ನೂತನ ಸಂಪುಟದಲ್ಲಿ ಉಪಮುಖ್ಯಮಂತ್ರಿಗಳು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂದಿದ್ದಾರೆ.

Comments are closed.