‘ರಾಜ್ಯದಲ್ಲಿ ಸಿಎಂಗೊಂದು ಕಾನೂನು ಶಾಸಕರಿಗೊಂದು ಕಾನೂನಿದ್ಯಾ’ : ನಳೀನ್​ ಕುಮಾರ್ ಕಟೀಲ್​ ಕಿಡಿ

ಕೇರಳದ ಕನ್ನಡ ಶಾಲೆಗಳಲ್ಲಿ ಮಲಯಾಳಂ ಭಾಷೆ ಹೇರಿಕೆ ವಿಚಾರವಾಗಿ ಮಾಜಿ ಸಂಸದ ನಳೀನ್​ ಕುಮಾರ್ ಕಟೀಲ್​ ಕೇರಳ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಹಿಂದೆಯೇ ಕನ್ನಡ ಪ್ರದೇಶವಾದ ಕಾಸರಗೋಡಿನಲ್ಲಿ ಮಲಯಾಳಂ ಕಡ್ಡಾಯಗೊಳಿಸುವ ಪ್ರಕ್ರಿಯೆ ನಡೆದಿತ್ತು. ಆದರೆ ನಮ್ಮ ಹಿರಿಯರ ಹೋರಾಟದ ಫಲವಾಗಿ ಅದು ಮುಂದೂಡಿಕೆಯಾಗಿದೆ. ಈಗ ಮತ್ತೆ ಕಮ್ಯುನಿಸ್ಟ್​ ಸರ್ಕಾರ ಕನ್ನಡ ಮೇಲೆ ಗದಾಪ್ರಹಾರಕ್ಕೆ ಹೊರಟಿದೆ. ಈ ಬೆಳವಣಿಗೆಯನ್ನು ನಾನು ಖಂಡಿಸುತ್ತೇನೆ. ಕಾಸರಗೋಡಿನಲ್ಲಿ ಎಂದಿಗೂ ಕನ್ನಡವೇ ಪ್ರಧಾನ ಭಾಷೆ ಎಂದು ಗುಡುಗಿದ್ದಾರೆ.

ಶಾಸಕಿ ಭಾಗಿರಥಿ ಮುರುಳ್ಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಬರಹದ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು. ಶಾಸಕಿ ಆಗುವುದು ಎಂದರೆ ಸುಲಭದ ಕೆಲಸವಲ್ಲ. ಪಕ್ಷ ಟಿಕೆಟ್​ ನೀಡಬಹುದು. ಆದರೆ ಜನರ ಒಲವು ಇದ್ದರಿಂದಲೇ ಅವರು ಶಾಸಕಿ ಆಗಿದ್ದಾರೆ. ಕೆಟ್ಟದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರಹಗಳನ್ನು ಹಾಕುವುದನ್ನು ನಾನು ಖಂಡಿಸುತ್ತೇನೆ. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸಿದ್ದರಾಮಯ್ಯ ವಿರುದ್ಧ ಬರೆದರೆ ಅಂತಹ ಪತ್ರಕರ್ತರನ್ನು ರಾತ್ರೋರಾತ್ರಿ ಎತ್ತಿಕೊಂಡು ಹೋಗುತ್ತಾರೆ.ಸಿದ್ದರಾಮಯ್ಯರಿಗೆ ಒಂದು ಕಾನೂನು ಶಾಸಕರಿಗೆ ಮತ್ತೊಂದು ಕಾನೂನು ಇದ್ಯಾ ಎಂದು ಪ್ರಶ್ನೆ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿದ ಪ್ರಕರಣದ ವಿಚಾರವಾಗಿಯೂ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್​ ಅಧಿಕಾರಕ್ಕೆ ಬಂದ ಬಳಿಕ ಕರ್ನಾಟಕ ಗೂಂಡಾ ರಾಜ್ಯವಾಗಿದೆ. ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಪಾಕಿಸ್ತಾನ ಘೋಷಣೆ ಕೂಗಲಾಗಿತ್ತು. ವಿಜಯೋತ್ಸವದ ಸಂದರ್ಭದಲ್ಲಿ ಪಾಕಿಸ್ತಾನದ ಧ್ವಜ ಹಾರಿತ್ತು. ಗೂಂಡಾ ಪರ್ವರ್ತನೆಗಳು ಮರುಕರಣೆಯಾಗುತ್ತಲೇ ಇದೆ. ವಿಧಾನಸೌಧದಲ್ಲಿ ಪಾಕ್​ ಪರ ಘೋಷಣೆ ಕೂಗಿದವರನ್ನೇ ಬಂಧಿಸಲು ಇವರಿಂದ ಸಾಧ್ಯವಾಗಲಿಲ್ಲ. ಕೆಡಿಪಿ ಸಭೆಯಲ್ಲಿ ನಮ್ಮ ಶಾಸಕರ ಮೇಲೆ ಕಾಂಗ್ರೆಸ್ ಶಾಸಕರು ಕೈ ಎತ್ತುತ್ತಾರೆ. ಬಳ್ಳಾರಿಯಲ್ಲಿ ಗುಂಡು ಹೊಡೆಯುತ್ತಾರೆ.ಇದೆಲ್ಲವೂ ಕಾಂಗ್ರೆಸ್​ ಸರ್ಕಾರ ಮಾನಸಿಕತೆಯನ್ನು ತೋರಿಸುತ್ತಿದೆ. ಗಾಂಧೀಜಿಯವರ ರಾಮರಾಜ್ಯ ಕನಸು ನನಸಾಗಿಲ್ಲ. ಇದು ರಾವಣ ರಾಜ್ಯವಾಗಿದೆ. ಕರ್ನಾಟಕ ಲಂಕಾಪುರವಾಗಿದೆ . ನಮ್ಮಲ್ಲೂ ಸೀತೆಯ ಅಪರಹಣ ಆಗುತ್ತಿದೆ. ಸೀತೆ ಮೇಲೆ ಹಲ್ಲೆ ನಡೆಯುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
‘ಬಿಜೆಪಿಯೊಂದಿಗೆ ಜೆಡಿಎಸ್​ ವಿಲೀನ ಎಂಬ ಡಿ.ಕೆ ಶಿವಕುಮಾರ್​ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ನಳೀನ್​ ಕುಮಾರ್ ಕಟೀಲ್​, ಡಿ.ಕೆ ಶಿವಕುಮಾರ್​ ಆಗಾಗ ಕೇರಳಕ್ಕೆ ಹೋಗುತ್ತಿರುತ್ತಾರೆ. ಬಹುಶಃ ಜ್ಯೋತಿಷ್ಯ ಕಲಿಯುತ್ತಿದ್ದಾರೆ ಎನಿಸುತ್ತೆ. ತನ್ನನ್ನು ಮುಖ್ಯಮಂತ್ರಿ ಮಾಡಲ್ಲ ಎಂದು ತಿಳಿದು ಜ್ಯೋತಿಷ್ಯ ಕಾರ್ಯಾಲಯವಾದರೂ ತೆರೆಯೋಣ ಎಂದು ಪ್ಲಾನ್​ ಮಾಡಿದ್ದಾರೆ ಕಾಣುತ್ತೆ ಎಂದು ವ್ಯಂಗ್ಯವಾಡಿದ್ರು.

ಇದನ್ನೂ ಓದಿ: ದಾಖಲೆ ಮುರಿಯಲು ರಾಜಕೀಯ ಮಾಡಿಲ್ಲ, ಸಮಾನತೆಗಾಗಿ ಹೋರಾಟ : ಸಿಎಂ ಸಿದ್ದರಾಮಯ್ಯ

ನ್ಯಾಷನಲ್​ ಹೆರಾಲ್ಡ್​ ಜಾಹಿರಾತು ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ನ್ಯಾಷನಲ್ ಹೆರಾಲ್ಡ್ ಗೆ ಜಾಹೀರಾತು ನೀಡಿರುವುದು ತಪ್ಪು. ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಳ್ಳುವುದು ಆಕ್ಷೇಪಾರ್ಹ. ಹೆರಾಲ್ಡ್​ ಪತ್ರಿಕೆ ಪ್ರಕರಣ ಸುಪ್ರೀಂಕೋರ್ಟ್ನಲ್ಲಿದೆ. ಸೋನಿಯಾ ಗಾಂಧಿ ರಾಹುಲ್ ಗಾಂಧಿ ಈ ಪ್ರಕರಣದಲ್ಲಿ ಜಾಮೀನಿನಲ್ಲಿದ್ದಾರೆ. ಇಂತಹ ಪತ್ರಿಕೆಗೆ ಒಂದೂವರೆ ಕೋಟಿ ಜಾಹಿರಾತು ನೀಡಿದ್ದಾರೆ ಎಂದರೆ ಏನೆನ್ನಬೇಕು. ಡಿಕೆಶಿ ಸ್ವಂತ ಹಣ ಕೊಟ್ಟಿದ್ದರೆ ನಾವು ಪ್ರಶ್ನೆ ಮಾಡುತ್ತಿರಲಿಲ್ಲ. ಆದರೆ ಕೊಟ್ಟಿರುವುದು ಸರ್ಕಾರದ ಹಣ. ಸಿದ್ದರಾಮಯ್ಯ, ಡಿಕೆಶಿ 100 ಕೋಟಿ ರೂಪಾಯಿ ಕೊಡಲಿ ನಾವು ಕೇಳಲ್ಲ. ಆದರೆ ಸರ್ಕಾರದ ಹಣ ರಾಜ್ಯದ ಜನತೆಯ ಹಣ . ಇದನ್ನು ಪ್ರಶ್ನಿಸುವ ಹಕ್ಕು ನಮಗಿದೆ ಎಂದರು.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories