ಸಿಎಂ, ಡಿಸಿಎಂ ಬಳಿಕ ಕಾಂಗ್ರೆಸ್​ ಶಾಸಕರಿಂದ ಶಕ್ತಿ ಪ್ರದರ್ಶನ : 30ಕ್ಕೂ ಅಧಿಕ ಜನಪ್ರತಿನಿಧಿಗಳಿಂದ ಡಿನ್ನರ್​ ಪಾಲಿಟಿಕ್ಸ್​

ಇದೇ ಮೊದಲ ಬಾರಿಗೆ ಕೇವಲ ಕಾಂಗ್ರೆಸ್​ ಶಾಸಕರು ದಿಢೀರ್​ ಸಭೆ ನಡೆಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ರಾಜ್ಯದಲ್ಲಿ ಸದ್ಯ ಅಧಿಕಾರ ಬದಲಾವಣೆ ಎನ್ನುವುದು ಆರಕ್ಕೇರದು, ಮೂರಕ್ಕೆ ಇಳಿಯದು ಎಂಬಂತಾಗಿದೆ. ಕೇವಲ ಸರಣಿ ಸಭೆಗಳು , ಔತಣಕೂಟಗಳು ನಡೆಯುತ್ತಿವೆ . ಆದರೆ ಅಧಿಕಾರ ಬದಲಾವಣೆಯ ಸಣ್ಣ ಲಕ್ಷಣಗಳೂ ಗೋಚರವಾಗುತ್ತಿಲ್ಲ. ಒಮ್ಮೆ ಸಿಎಂ ಬಣ ಮತ್ತೊಮ್ಮೆ ಡಿಸಿಎಂ ಬಣ ಹೀಗೆ ಶಕ್ತಿ ಪ್ರದರ್ಶನಗಳು ನಡೆಯುತ್ತಲೇ ಇದೆ. ಆದರೆ ಈ ಎಲ್ಲದರ ನಡುವೆ ಇದೇ ಮೊದಲ ಬಾರಿಗೆ ಕೇವಲ ಕಾಂಗ್ರೆಸ್​ ಶಾಸಕರು ದಿಢೀರ್​ ಸಭೆ ನಡೆಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

30ಕ್ಕೂ ಅಧಿಕ ಕಾಂಗ್ರೆಸ್​ ಶಾಸಕರು ಬೆಂಗಳೂರಿನ ಖಾಸಗಿ ಹೋಟೆಲ್​ ಒಂದರಲ್ಲಿ ಡಿನ್ನರ್​ ಸಭೆ ನಡೆಸಿದ್ದಾರೆ. ಈ ಡಿನ್ನರ್​ ಸಭೆಯಲ್ಲಿ ಕೆಲ ಹಿರಿಯ ಶಾಸಕರು ಹಾಜರಾಗಿದ್ದಾರೆ ಎಂದು ತಿಳಿದುಬಂದಿದೆ. ಮೊದಲ ಬಾರಿಗೆ ಆಯ್ಕೆಯಾದ ಶಾಸಕರನ್ನೂ ಸಂಪುಟಕ್ಕೆ ಪರಿಗಣಿಸಬೇಕೆಂಬ ಕೂಗಿನ ಬೆನ್ನಲ್ಲೇ ಈ ಸಭೆ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: By Polls in Karnataka: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯಲ್ಲಿ ಉಪಚುನಾವಣೆ; ಏಪ್ರಿಲ್ 9ಕ್ಕೆ ವೋಟಿಂಗ್!

ಕೆಲವು ದಿನಗಳ ಹಿಂದೆಯಷ್ಟೇ ಡಿಸಿಎಂ ಡಿ.ಕೆ ಶಿವಕುಮಾರ್​, ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷದ ಅಧಿಕಾರಾವಧಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಶಾಸಕರಿಗೆ ಔತಣಕೂಟ ಏರ್ಪಡಿಸಿದ್ದರು. ಇದಾದ ಬಳಿಕ ಸಿಎಂ ಸಿದ್ದರಾಮಯ್ಯ ಸೋಮವಾರದಂದು 14 ಮಂದಿ ಶಾಸಕರೊಂದಿಗೆ ಕಾವೇರಿ ನಿವಾಸದಲ್ಲಿ ಡಿನ್ನರ್​ ಸಭೆ ನಡೆಸಿದ್ದರು. ಈ ಎಲ್ಲದರ ಬೆನ್ನಲ್ಲೇ ಇದೀಗ ಎಲ್ಲಾ ಶಾಸಕರು ಒಂದಾಗಿ ಸಭೆ ನಡೆಸಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories