Kitchen Vaastu Tips : ಮನೆಯ ಯಾವ ದಿಕ್ಕಿನಲ್ಲಿ ಅಡುಗೆಕೋಣೆ ಇರಬೇಕು ಎಂಬುದಕ್ಕೆ ಇಲ್ಲಿದೆ ಮಾಹಿತಿ

Kitchen Vaastu Tips : ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಅಡುಗೆ ಕೋಣೆಗೆ ವಿಶೇಷ ಸ್ಥಾನ ನೀಡಲಾಗಿದೆ. ಇದನ್ನು ಶಕ್ತಿಯ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಇಲ್ಲಿ ಶಕ್ತಿಯು ಧನಾತ್ಮಕವಾಗಿರಬೇಕು. ಅಡುಗೆಮನೆಯಲ್ಲಿ ನಕಾರಾತ್ಮಕ ಶಕ್ತಿ ಇದ್ದರೆ, ಅದು ನಿಮ್ಮ ಆರೋಗ್ಯ ಮತ್ತು ಆದಾಯ ಎರಡರ ಮೇಲೆ ಪರಿಣಾಮ ಬೀರುತ್ತದೆ.

ನೀವು ಹೊಸ ಮನೆ ಕಟ್ಟುತ್ತಿದ್ದರೆ ಅಡುಗೆ ಮನೆಯನ್ನು ಆಗ್ನೇಯ ದಿಕ್ಕಿನಲ್ಲಿ ನಿರ್ಮಿಸಿ. ಇದು ಬೆಂಕಿಯ ಅಂಶದೊಂದಿಗೆ ಸಂಬಂಧಿಸಿದೆ. ಸ್ಥಳಾವಕಾಶವಿಲ್ಲದಿದ್ದರೆ ನೀವು ವಾಯುವ್ಯ ದಿಕ್ಕಿನಲ್ಲಿ ಅಡುಗೆಮನೆಯನ್ನು ಮಾಡಬಹುದು. ಈಶಾನ್ಯದಲ್ಲಿ ಅಡುಗೆ ಕೋಣೆ ಇರಬಾರದು ಎಂಬುದನ್ನು ನೆನಪಿನಲ್ಲಿಡಿ, ಇಲ್ಲದಿದ್ದರೆ ಕುಟುಂಬದ ಸದಸ್ಯರ ಆರೋಗ್ಯವು ಹದಗೆಡುವ ಸಾಧ್ಯತೆ ಇದೆ.

ಅಡುಗೆ ಮನೆಯಲ್ಲಿ ಗ್ಯಾಸ್ ಸ್ಟೌ ಅಥವಾ ಸ್ಟೌವನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಟ್ಟರೆ ಒಳ್ಳೆಯದು. ನೀವು ಅಡುಗೆಮನೆಯಲ್ಲಿ ಬೀರು ನಿರ್ಮಿಸುತ್ತಿದ್ದರೆ, ಅದನ್ನು ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನಲ್ಲಿ ಇರಿಸಿ. ಅಡುಗೆ ಮನೆಯ ಬಾಗಿಲನ್ನು ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಕಿಟಕಿ ಪೂರ್ವ ದಿಕ್ಕಿನಲ್ಲಿ ಇರಲಿ.. ಇದರಿಂದ ಬೆಳಗ್ಗೆ ಸೂರ್ಯನ ಕಿರಣಗಳು ಅಡುಗೆ ಮನೆಯನ್ನು ಪ್ರವೇಶಿಸುತ್ತದೆ. ಇದನ್ನು ವಾಸ್ತುಶಾಸ್ತ್ರದಲ್ಲಿ ಶುಭವೆಂದು ನಂಬಲಾಗಿದೆ .

ಅಡುಗೆ ಕೋಣೆಯ ಸಿಂಕ್ ಅನ್ನು ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಟ್ಯಾಪ್‌ನಿಂದ ಹನಿ ಹನಿಯಾಗಿ ನೀರು ಸೋರಿಕೆಯಾಗದಂತೆ ನೋಡಿಕೊಳ್ಳಿ. ಇದರಿಂದ ಆದಾಯ ನಷ್ಟವಾಗುತ್ತದೆ. ಗ್ಯಾಸ್ ಸ್ಟೌವ್ ಮತ್ತು ಸಿಂಕ್ ಒಂದೇ ಸ್ಥಳದಲ್ಲಿ ಇರಬಾರದು. ಬೆಂಕಿ ಮತ್ತು ನೀರು ಎರಡು ವಿರುದ್ಧ ಗುಣಗಳು, ಆದ್ದರಿಂದ ಅವುಗಳನ್ನು ಹತ್ತಿರ ಇಡಬೇಡಿ.

ಇದನ್ನು ಓದಿ : broom on the roof : ಯಾವುದೇ ಕಾರಣಕ್ಕೂ ಪೊರಕೆಯನ್ನು ಈ ಜಾಗದಲ್ಲಿ ಇಡಲೇಬೇಡಿ

ಇದನ್ನೂ ಓದಿ : small plants : ಮನೆಯ ಈ ದಿಕ್ಕಿನಲ್ಲಿ ಗಿಡವನ್ನು ನೆಟ್ಟರೆ ಸಿಗುತ್ತದೆ ಶುಭಯೋಗ

ಇದನ್ನೂ ಓದಿ : ಶಾಲೆ ಕಾಲೇಜು 15-20 ದಿನ ಬಂದ್‌ ಮಾಡಿ : ನೈಟ್‌ ಕರ್ಪ್ಯೂಯಿಂದ ಜನಜೀವನಕ್ಕೆ ತೊಂದರೆ : ಎಚ್.ಡಿ.ಕುಮಾರಸ್ವಾಮಿ

ಇದನ್ನೂ ಓದಿ : ಈ ಹೋಟೆಲ್​ನಲ್ಲಿ ನೀವು ತಟ್ಟೆ ಊಟ ತಿಂದರೆ ಸಿಗುತ್ತೆ 8 ಲಕ್ಷ ರೂ ಬಹುಮಾನ..!

Kitchen Vaastu Tips follow these tips for kitchen items

Comments are closed.