ಮಲಗುವಾಗ ಈ 5 ವಸ್ತುಗಳನ್ನು ಪಕ್ಕಕ್ಕಿಟ್ಟು ಮಲಗಬೇಡಿ: ಆರ್ಥಿಕ ಸಂಕಷ್ಟ ಎದುರಾಗಬಹುದು

Sleeping Vastu Tips: ಜೀವನದಲ್ಲಿ ಏನೇ ಸಾಧನೆ ಮಾಡುವುದಿದ್ದರು ಅದು ನಮ್ಮ ಪರಿಶ್ರಮದಿಂದಲೇ ಎಂದು ಹೇಳುತ್ತಾರೆ. ಒಳ್ಳೆಯ ಕೆಲಸಗಳನ್ನು ಮಾಡುವುದರಿಂದ ಬದುಕಿನಲ್ಲಿ ಒಳ್ಳೆಯದೇ ಆಗುತ್ತದೆ.

ಇದು ನೂರಕ್ಕೆ ನೂರು ಸತ್ಯ. ಆದರೆ ಕೆಲವೊಮ್ಮೆ ವಾಸ್ತು ನಿರ್ಣಾಯಕ ಕೆಲಸವನ್ನು ಮಾಡುತ್ತದೆ. ಕೆಲವು ವಾಸ್ತು ನಿಯಮಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಅದರಂತೆ ನಡೆದರೆ ಜೀವನ ಸುಂದರವಾಗಿರುತ್ತದೆ.

ಅದೇ ನಾವು ಮಾಡುವ ಸಣ್ಣ ಪುಟ್ಟ ತಪ್ಪುಗಳು ನಮ್ಮ ಸಾಧನೆಯ ಹಾದಿಗೆ ಮುಳ್ಳಾಗಬಹುದು. ಮನೆಯಲ್ಲಿ ಸಂಘರ್ಷ ಹೆಚ್ಚಾಗಿ, ಶಾಂತಿ ವಾತಾವರಣ ಕದಡಬಹುದು.

ಹಾಗಾಗಿ ವಾಸ್ತು ನಿಯಮಗಳನ್ನು ಸರಿಯಾಗಿ ಪಾಲಿಸುವುದು ಬಹಳ ಮುಖ್ಯ. ಮನುಷ್ಯನಿಗೆ ನಿದ್ರೆ ಅತ್ಯಂತ ಅವಶ್ಯಕ. ಅದು ದಣಿವವನ್ನು ದೂರ ಮಾಡುವುದಷ್ಟೇ ಅಲ್ಲ, ಜೊತೆಗೆ ಹೊಸ ಉತ್ಸಾಹವನ್ನು ತುಂಬುತ್ತದೆ.

ಮಲಗುವ ಕೋಣೆ ಹಾಗೂ ಹಾಸಿಗೆಗೆ ಸಂಬಂಧಿಸಿದ ಕೆಲವು ವಾಸ್ತು ನಿಯಮಗಳು ಜೀವನದಲ್ಲಿ ಅನೇಕ ಸಕಾರಾತ್ಮಕ ಹಾಗೂ ನಕಾರಾತ್ಮಕ ಬದಲಾವಣೆಗೆ ಕಾರಣವಾಗುತ್ತದೆ.

ವಾಸ್ತು ಪ್ರಕಾರ ಮಲಗುವಾಗ ಕೆಲವು ವಸ್ತುಗಳನ್ನು ತಪ್ಪಾಗಿಯೂ ಮಲಗವ ಕೋಣೆ ಅಥವಾ ಹಾಸಿಗೆ ಪಕ್ಕ ಇಡಬಾರದು. ಆ ವಸ್ತುಗಳು ಯಾವುವು ಎಂದು ತಿಳಿಯೋಣ.

ಗಡಿಯಾರ/ವಾಚ್‌

ವಾಸ್ತು ಪ್ರಕಾರ ನೀವು ಮಲಗುವ ಹಾಸಿಗೆಯ ಬಳಿ ಗಡಿಯಾರ ಅಥವಾ ವಾಚ್‌ಅನ್ನು ಇರಿಸಿಕೊಳ್ಳಬಾರದು. ಪ್ರತಿದಿನ ಮಲಗುವಾಗ ಗಡಿಯಾರವನ್ನು ಪಕ್ಕಕ್ಕಿಟ್ಟುಕೊಳ್ಳುವ ಅಭ್ಯಾಸವಿದ್ದರೆ ಇಂದೇ ಅದನ್ನು ಬಿಟ್ಟು ಬಿಡಿ.

ಏಕೆಂದರೆ ಅದರ ಶಕ್ತಿಯು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ನೀವು ಮಲಗುವ ಸ್ಥಳದಿಂದ ಸ್ವಲ್ಪ ದೂರದಲ್ಲಿ ಗಡಿಯಾರ ಅಥವಾ ವಾಚ್‌ ಅನ್ನು ಇಡುವುದು ಉತ್ತಮ.

ವಾಲೆಟ್‌/ಪರ್ಸ್‌

ತಮ್ಮ ವಾಲೆಟ್‌, ಪರ್ಸ್‌ಗಳನ್ನು ಹಾಸಿಗೆ ಪಕ್ಕದಲ್ಲಿರುವ ಡ್ರಾವರ್‌ನಲ್ಲಿ ಇಡುವುದು ಕೆಲವರ ಅಭ್ಯಾಸವಾಗಿರುತ್ತದೆ. ಆದರೆ ವಾಸ್ತು ಪ್ರಕಾರ ಹಾಗೆ ಇಡುವುದು ಸರಿ ಅಲ್ಲ ಎನ್ನಲಾಗಿದೆ.

ಇದರಿಂದ ಲಕ್ಷ್ಮಿ ದೇವಿಗೆ ನಿರಾಶೆಯಾಗುತ್ತದೆ. ಭವಿಷ್ಯದಲ್ಲಿ ಆರ್ಥಿಕ ನಷ್ಟ ಸಂಭವಿಸುತ್ತದೆ.

ಇದನ್ನೂ ಓದಿ: ತುಳಸಿ ವಿವಾಹ ಯಾವಾಗ? ದಿನಾಂಕ, ಶುಭ ಮುಹೂರ್ತ, ಧಾರ್ಮಿಕ ಮಹತ್ವ ತಿಳಿಯಿರಿ

ಎಲೆಕ್ಟ್ರಾನಿಕ್‌ ವಸ್ತುಗಳು

ನೀವು ಮಲಗುವ ಹಾಸಿಗೆ ಬಳಿಕ ಯಾವುದೇ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಇಡಬೇಡಿ. ಲ್ಯಾಪ್‌ಟಾಪ್‌, ಮೊಬೈಲ್‌ಗಳನ್ನು ಹಾಸಿಗೆ ಮೇಲೆ ಇಟ್ಟು ಮಲಗಬೇಡಿ.

ಅದರ ವಿಕಿರಣದಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಜೊತೆಗೆ ವಾಸ್ತು ಪ್ರಕಾರವು ಅದು ಸರಿಯಲ್ಲ.

ಚಪ್ಪಲಿಗಳು

ವಾಸ್ತು ಪ್ರಕಾರ ಮಲಗುವ ಕೋಣೆಯಲ್ಲಿ ಶೂ, ಚಪ್ಪಲಿಗಳನ್ನು ಎಂದಿಗೂ ಇಡಬಾರದು. ಇದು ಹೊರಗಿನ ಕೊಳೆಯನ್ನು ಕೋಣೆಯೊಳಗೆ ತರುವುದಲ್ಲದೇ ನಕಾರಾತ್ಮಕ ಶಕ್ತಿಯನ್ನು ತರುತ್ತದೆ.

ಆದ್ದರಿಂದ ಮಲಗುವ ಹಾಸಿಗೆ ಬಳಿ ಯಾವುದೇ ಚಪ್ಪಲಿಗಳನ್ನು ಬಿಡಬೇಡಿ.

ಪುಸ್ತಕ/ಡೈರಿ

ಕೆಲವರಿಗೆ ಮಲಗುವ ಮೊದಲು ಹಾಸಿಗೆಯ ಮೇಲೆ ಕುಳಿತು ಪುಸ್ತಕ ಓದುವ, ಡೈರಿ ಬರೆಯುವ ಅಭ್ಯಾಸವಿರುತ್ತದೆ. ಹಾಗೆ ಓದಿ, ಬರೆದ ನಂತರ ಅದನ್ನು ಹಾಸಿಗೆಯ ಮೇಲೆ ಇಟ್ಟು ಮಲಗುತ್ತಾರೆ.

ಇದರಿಂದ ಸರಸ್ವತಿ ದೇವಿ ಕೋಪಗೊಳ್ಳುತ್ತಾಳೆ ಎಂದು ವಾಸ್ತು ಹೇಳುತ್ತದೆ. ನಿಮ್ಮ ಓದು ಹಾಗೂ ಬರವಣಿಗೆ ಮುಗಿದ ನಂತರ ಅದನ್ನು ಸರಿಯಾದ ಜಾಗದಲ್ಲಿ ಇರಿಸಿ ಮಲಗಿ.

ಇದನ್ನೂ ಓದಿ: Vastu Tips: ಫ್ಯಾನ್, ಲೈಟ್ ಅಳವಡಿಸುವಾಗ ಮಾಡುವ ಈ ತಪ್ಪುಗಳು ಮನೆಯ ಸಂತೋಷ ಕಸಿದುಕೊಳ್ಳಬಹುದು ಎಚ್ಚರ!

(Do not keep these 5 things near bed while sleeping according to Vastu Rules)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories