ಮನೆಯಲ್ಲಿ ಈ ಪ್ರಾಣಿಗಳನ್ನು ಸಾಕುವುದರಿಂದ ಸಂತೃಪ್ತಳಾಗುತ್ತಾಳೆ ಅದೃಷ್ಟ ದೇವತೆ

Vastu Shastra: ಮನೆಯಲ್ಲಿ ಅದೃಷ್ಟ, ನೆಮ್ಮದಿ, ಸುಖ ಶಾಂತಿ ನೆಲೆಸಬೇಕು ಎಂದರೆ ವಾಸ್ತು ಶಾಸ್ತ್ರದಲ್ಲಿ ಹಲವು ನಿಯಮಾವಳಿಗಳಿವೆ. ಯಾವ ವಸ್ತುಗಳು ಎಲ್ಲಿರಬೇಕು ? ಯಾವ ಜಾಗದಲ್ಲಿ ಯಾವ ವಸ್ತುಗಳನ್ನು ಇರಿಸಬಾರದು..? ಹೀಗೆ ನಾನಾ ಶಾಸ್ತ್ರಗಳು ವಾಸ್ತು ವಿಜ್ಞಾನದಲ್ಲಿ ಅಡಕವಾಗಿದೆ.

ಮನೆಯ ಪ್ರತಿಯೊಂದು ದಿಕ್ಕು ಒಂದೊಂದು ವಾಸ್ತು ನಿಯಮ ಹೊಂದಿದೆ. ಇದೆಲ್ಲದರ ಜೊತೆಯಲ್ಲಿ ನೀವು ಮನೆಯಲ್ಲಿ ಯಾವ ಪ್ರಾಣಿಗಳನ್ನು ಸಾಕುವುದು ಒಳಿತು ಹಾಗೂ ಯಾವ ಪ್ರಾಣಿಗಳನ್ನು ಸಾಕುವುದು ಕೆಡುಕು ಎಂಬುದರ ಬಗ್ಗೆಯೂ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾವ ಪ್ರಾಣಿಗಳನ್ನು ಸಾಕಬೇಕು ?

ಆಮೆ : ಆಮೆಯು ತನ್ನ ದೀರ್ಘಾಯುಷ್ಯ ಮತ್ತು ಗಟ್ಟಿತನಕ್ಕೆ ಹೆಸರುವಾಸಿಯಾಗಿದೆ. ಇಂತಹ ಆಮೆಗಳನ್ನು ನೀವು ಮನೆಯಲ್ಲಿ ಸಾಕುವುದರಿಂದ ಸಂಪತ್ತು ಹಾಗೂ ವೃತ್ತಿ ರಂಗದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಿದೆ ಎಂದು ವಾಸ್ತು ಶಾಸ್ತ್ರ ಹೇಳಿದೆ.

ಮೀನು : ಸಾಮಾನ್ಯವಾಗಿ ಅನೇಕರು ಮನೆಯ ಅಲಂಕಾರಿಕ ಅಂಶವಾಗಿ ಅಕ್ವೇರಿಯಂ ಬಳಕೆ ಮಾಡುತ್ತಾರೆ. ಆದರೆ ಅಕ್ವೇರಿಯಂನಲ್ಲಿ ಯಾವ ಬಣ್ಣದ ಮೀನುಗಳು ಒಳಿತಿನ ಸಂಕೇತ ಎಂಬುದಕ್ಕೆ ವಾಸ್ತು ಶಾಸ್ತ್ರದಲ್ಲಿ ನಿಯಮವಿದೆ. ಮನೆಯ ಹಾಲ್​ನಲ್ಲಿ ಬಾಗಿಲಿನ ಬದಿಯಲ್ಲಿಯೇ ಅಕ್ವೇರಿಯಂನ್ನು ಇರಿಸಬೇಕು. ಈ ಅಕ್ವೇರಿಯಂಗಳಲ್ಲಿ ಸದಾ ಗೋಲ್ಡ್​ ಫಿಶ್​(Gold Fish) ಹಾಗೂ ಕಪ್ಪು ಬಣ್ಣದ ಮೀನು ಇರಬೇಕು. ಇವುಗಳು ಸಂಪತ್ತು ಆಗಮನದ ಸಂಕೇತವಾಗಿದೆ. ಜೊತೆಯಲ್ಲಿ ಎಂದಿಗೂ ಅಕ್ವೇರಿಯಂ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು.

Also Read: ಕೆಟ್ಟ ದೃಷ್ಠಿಗಳು ನಿಮ್ಮನ್ನು ತಾಕುತ್ತಿದ್ದೆಯೇ : ಇದರಿಂದ ಪಾರಾಗಲು ವಾಸ್ತು ಶಾಸ್ತ್ರದಲ್ಲಿದೆ ಮಾರ್ಗ

ನಾಯಿಗಳು : ನಂಬಿಕೆಗೆ ಇನ್ನೊಂದು ಹೆಸರಿನಂತೆ ಇರುವ ನಾಯಿಗಳು ವಾಸ್ತು ಶಾಸ್ತ್ರದಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿವೆ. ಶ್ವಾನಗಳು ಪ್ರಾಮಾಣಿಕತೆ, ಶಕ್ತಿ ಹಾಗೂ ಸಕಾರಾತ್ಮಕತೆಯ ಸಂಕೇತವಾಗಿದೆ. ಶ್ವಾನಗಳನ್ನು ಸಾಕುವುದರಿಂದ ಮನೆಯಲ್ಲಿ ಎಂದಿಗೂ ನಕಾರಾತ್ಮಕತೆ ನೆಲೆಸುವುದಿಲ್ಲ.

ಹಸುಗಳು : ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಬಹುತೇಕರ ಮನೆಗಳಲ್ಲಿ ಹಸುಗಳು ಇರುವುದು ಸರ್ವೇ ಸಾಮಾನ್ಯ. ಇತ್ತೀಚಿನ ದಿನಗಳಲ್ಲಿ ನಗರಗಳಲ್ಲಿ ಐಷಾರಾಮಿ ಮನೆಗಳಲ್ಲಿಯೂ ಹಸುಗಳನ್ನು ಸಾಕುವುದು ಟ್ರೆಂಡ್​ ಆಗಿದೆ. ಹಸುವಿಗೆ ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಸ್ಥಾನವಿದೆ. ಇವುಗಳು ಮನೆಯಲ್ಲಿದ್ದರೆ ಅಂತಹ ಮನೆಗಳಲ್ಲಿ ಎಂದಿಗೂ ಭಗವಂತನ ಕೃಪಾಶೀರ್ವಾದ ತುಂಬಿ ತುಳುಕುತ್ತಿರುತ್ತದೆ ಎಂಬ ನಂಬಿಕೆಯಿದೆ.

ಗಿಳಿಗಳು : ಗಿಳಿಗಳು ಅದೃಷ್ಠ ಹಾಗೂ ಚೈತನ್ಯದ ಚಿಲುಮೆಯ ಸಂಕೇತವಾಗಿದೆ. ಗಿಳಿಗಳನ್ನು ಸಾಕಿದ ಮನೆಗಳಲ್ಲಿ ಕುಟುಂಬ ಸದಸ್ಯರ ನಡುವೆ ಅತ್ಯಂತ ಸದೃಢವಾದ ಬಂಧ ಬೆಳೆದಿರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳಿದೆ.

ಯಾವ ದಿಕ್ಕುಗಳಲ್ಲಿ ಪ್ರಾಣಿಗಳನ್ನು ಇರಿಸಬೇಕು :

ಮನೆಗಳಲ್ಲಿ ಸಾಕು ಪ್ರಾಣಿಗಳನ್ನು ಸಾಕಿದರೆ ಮಾತ್ರ ಸಾಲದು. ಅವುಗಳನ್ನು ನೀವು ಮನೆಯ ಯಾವ ದಿಕ್ಕಿನಲ್ಲಿ ಇರಿಸುತ್ತೀರಿ ಎಂಬುದು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಸಾಕುವ ಪ್ರಾಣಿಗಳನ್ನು ಸಾಮಾನ್ಯವಾಗಿ ಉತ್ತರ ಅಥವಾ ಪೂರ್ವ ದಿಕ್ಕುಗಳಲ್ಲಿ ಇರಿಸುವುದು ಉತ್ತಮ. ಪಂಜರ ಅಥವಾ ಅಕ್ವೇರಿಯಂಗಳಲ್ಲಿರುವ ಜೀವಿಗಳನ್ನು ದಕ್ಷಿಣ ದಿಕ್ಕುಗಳಲ್ಲಿ ಇರಿಸಬೇಕು ಎಂದು ವಾಸ್ತು ಶಾಸ್ತ್ರ ಹೇಳಿದೆ.

Also Read: Deepavali: ದೀಪಾವಳಿಗೂ ಮುನ್ನ ಮನೆಯ ಈ ದಿಕ್ಕುಗಳಲ್ಲಿ ಕೈಗೊಳ್ಳಿ ಸ್ವಚ್ಛತೆ : ಲಕ್ಷ್ಮೀ ದೇವಿಯ ವಾಸ ಇಲ್ಲಿದೆ

ಈ ಪ್ರಾಣಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ :

ವ್ಯಾಘ್ರಗಳ ಜಾತಿಗೆ ಸೇರಿದ ಅಥವಾ ತುಂಬಾ ಜೋರಿರುವ ಪ್ರಾಣಿಗಳನ್ನು ಮನೆಯಲ್ಲಿ ಸಾಕಬೇಡಿ. ಪ್ರಾಣಿಗಳು ಸಾಕಿದ ಜಾಗದಲ್ಲಿ ಇರುವ ಕೊಳಕು ಮನೆಗೆ ನಕಾರಾತ್ಮಕತೆಯನ್ನು ತರಬಹುದು. ಹೀಗಾಗಿ ಪಶು ಪಕ್ಷಿಗಳನ್ನು ಸಾಕುವ ಜಾಗ ಎಂದಿಗೂ ಸ್ವಚ್ಛಂದವಾಗಿರುವಂತೆ ನೋಡಿಕೊಳ್ಳಬೇಕು.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories