ಮನೆಯಲ್ಲಿ ಧನಾತ್ಮಕತೆ ನೆಲೆಸಬೇಕೆ : ಹಾಗಾದರೆ ಮೊದಲು ಈ ವಸ್ತುಗಳನ್ನು ಮನೆಯಿಂದ ಹೊರಹಾಕಿ

Life Style News: ಮನೆ ಪ್ರತಿಯೊಬ್ಬರಿಗೂ ಒಂದು ರೀತಿಯಲ್ಲಿ ನೆಮ್ಮದಿಯ ತಾಣವಿದ್ದಂತೆ. ಹೀಗಾಗಿ ಮನೆಯಲ್ಲಿ ಸದಾ ಸಕಾರಾತ್ಮಕ ಅಂಶಗಳೇ ನೆಲೆಸಿರಬೇಕು. ಆಗ ಮಾತ್ರ ನೆಮ್ಮದಿ ನಮ್ಮದಾಗಲು ಸಾಧ್ಯ.

ಆದರೆ ಎಷ್ಟೋ ಬಾರಿ ನಮಗೆ ತಿಳಿಯದೆಯೇ ನಾವು ಮನೆಗೆ ನಕಾರಾತ್ಮಕತೆಯನ್ನು ತರಬಲ್ಲ ವಸ್ತುಗಳನ್ನು ಮನೆಯಲ್ಲಿಯೇ ಇಟ್ಟುಕೊಂಡಿರುತ್ತೇವೆ. ವಾಸ್ತು ಶಾಸ್ತ್ರವು ಮನೆಯಲ್ಲಿ ನಕಾರಾತ್ಮಕ ಅಂಶವನ್ನು ತರಬಹುದಾದ ವಸ್ತುಗಳ ಬಗ್ಗೆ ಹೇಳಿದೆ. ಹೀಗಾಗಿ ಇಂತಹ ವಸ್ತುಗಳನ್ನು ಅವಶ್ಯವಾಗಿ ಮನೆಯಿಂದ ಹೊರ ಹಾಕಬೇಕು.

ಹೌದು..! ನಿಮಗೆ ಅರಿವೇ ಇಲ್ಲದಂತೆ ನೀವು ಮನೆಯಲ್ಲಿ ನಕಾರಾತ್ಮಕತೆಯನ್ನು ತಂದೊಡ್ಡುವಂತಹ ಕೆಲ ವಸ್ತುಗಳಿಗೆ ಜಾಗ ಮಾಡಿದ್ದೀರಾ. ಇವುಗಳನ್ನು ತೆರವುಗೊಳಿಸುವ ಮೂಲಕ ನೀವು ಮನೆಯಲ್ಲಿ ಹೆಚ್ಚು ಶಾಂತಿ ಹಾಗೂ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಲು ಸಾಧ್ಯವಿದೆ. ಹಾಗಾದರೆ ಮನೆಯಿಂದ ಹೊರಹಾಕಬೇಕಾದ ವಸ್ತುಗಳು ಯಾವುದು ಎಂಬುದನ್ನು ತಿಳಿಯೋಣ.

ಮುರಿದು ಹೋದ ವಸ್ತುಗಳು : ಮುರಿದು ಹೋದ ಅಥವಾ ಬಿರುಕುಬಿಟ್ಟ ಅಥವಾ ಹಾಳಾದ ವಸ್ತುಗಳು ಮನೆಯಲ್ಲಿ ನಕಾರಾತ್ಮಕ ಅಂಶಗಳನ್ನು ಹೊತ್ತು ತರುತ್ತದೆ.ಇವುಗಳು ಮನೆಯಲ್ಲಿನ ಒಳ್ಳೆಯ ಶಕ್ತಿಯನ್ನು ಕಡಿಮೆ ಮಾಡುತ್ತವೆ. ಹೀಗಾಗಿ ಇಂತಹ ವಸ್ತುಗಳನ್ನು ತೆಗೆದುಹಾಕುವುದರಿಂದ ಮನೆಯಲ್ಲಿ ಉತ್ತಮ ವಾತಾವರಣ ಸೃಷ್ಟಿಸಲು ಸಾಧ್ಯವಿದೆ.

Also Read: ದೀಪಾವಳಿ 2025 ಯಾವಾಗ? ದಿನಾಂಕ, ತಿಥಿ, ಪೂಜಾ ಸಮಯ ತಿಳಿಯಿರಿ

ಅಸ್ತವ್ಯಸ್ತವಾದ ಮನೆ : ಮನೆಯಲ್ಲಿ ಯಾವ ವಸ್ತುಗಳು ಎಲ್ಲಿರಬೇಕೋ ಅಲ್ಲೇ ಇದ್ದರೆ ಚಂದ. ಒಂದೇ ಜಾಗದಲ್ಲಿ ತುಂಬಾ ವಸ್ತುಗಳನ್ನು ಇರಿಸುವುದು ಹಾಗೂ ಮನಸ್ಸಿಗೆ ಬಂದಂತೆ ವಸ್ತುಗಳನ್ನು ಇರಿಸುವುದು ನಿಮ್ಮ ಮೇಲೆ ನಕಾರಾತ್ಮಕ ಪರಿಣಾಮವನ್ನುಂಟು ಮಾಡುತ್ತದೆ. ಹೀಗಾಗಿ ಮನೆ ಅಚ್ಚುಕಟ್ಟಾಗಿರಬೇಕು. ವಿಶ್ರಾಂತಿ ಪಡೆದುಕೊಳ್ಳಲು, ಓಡಾಡಲು ಮನೆಯಲ್ಲಿ ಯಾವುದೇ ಅಡೆತಡೆ ಇರಬಾರದು.

ಹಳೆಯ ಹಾಗೂ ಬಳಕೆ ಮಾಡದ ಬಟ್ಟೆಗಳು : ನೀವು ಬಳಸದೇ ಹಾಗೆಯೇ ಇಟ್ಟ ನಿಮ್ಮ ಉಡುಪುಗಳು ಕೂಡ ಮನೆಗೆ ನಕಾರಾತ್ಮಕತೆಯನ್ನು ತಂದೊಡ್ಡುತ್ತದೆ. ಹೀಗಾಗಿ ಮನೆಯಲ್ಲಿರುವ ಹಳೆಯ ಬಟ್ಟೆಗಳನ್ನು ಮೊದಲು ಹೊರಹಾಕಿ. ಅಗತ್ಯ ಇರುವವರಿಗೆ ದಾನ ಮಾಡಿದರೆ ದಾನದ ಪುಣ್ಯದ ಜೊತೆಗೆ ಮನೆಯಲ್ಲಿ ಸಕಾರಾತ್ಮಕತೆ ಕೂಡ ನಿಮ್ಮದಾಗುತ್ತದೆ.

ನಕಾರಾತ್ಮಕ ಅಲಂಕಾರ : ನಿಮ್ಮ ಜೀವನದ ಹಿಂದಿನ ಕೆಟ್ಟ ನೆನಪುಗಳಿಗೆ ಸಂಬಂಧಿಸಿದ ಅಥವಾ ಮನಸ್ಸಿಗೆ ಕಿರಿಕಿರಿಯುಂಟು ಮಾಡುವಂತಹ ಅಲಂಕಾರಿಕ ವಸ್ತುಗಳನ್ನು ಮನೆಯಲ್ಲಿ ಇರಿಸಬಾರದು. ಇವುಗಳು ನಿಮ್ಮ ಮನಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮವನ್ನುಂಟು ಮಾಡುತ್ತದೆ.

ನಿಮ್ಮ ಜೀವನಕ್ಕೆ ಹೊಂದಿಕೆಯಾಗದ ಯಾವುದೇ ವಸ್ತುಗಳು ಮನೆಯಲ್ಲಿದ್ದರೂ ಸಹ ಮೊದಲು ಅದನ್ನು ತೆಗೆದು ಹಾಕಿ. ಶಾಂತಿಯನ್ನು ತರುವಂತಹ ವಸ್ತುಗಳಿಂದ ಮನೆಯನ್ನು ಅಲಂಕರಿಸಿ.

Also Read: ಹಬ್ಬಗಳಲ್ಲಿ ಮನೆಯ ಮುಂಬಾಗಿಲಿಗೆ ಹಾಕಿದ ಮಾವಿನ ತೋರಣ ಯಾವಾಗ ತೆಗೆಯಬೇಕು?

ಹಾಳಾದ ಹಾಗೂ ಅವಧಿಮೀರಿದ ಆಹಾರ : ಅವಧಿ ಮೀರಿದ ಅಥವಾ ಹಾಳಾಗಿ ಹೋದ ಆಹಾರ ಪದಾರ್ಥಗಳು, ವಿಶೇಷವಾಗಿ ಫ್ರಿಡ್ಜ್​ನಲ್ಲಿ ನಮಗೆ ಅರಿವಿಲ್ಲದಂತೆ ಹಾಗೆಯೇ ಕೊಳೆಯುತ್ತಿರುತ್ತದೆ. ಇವುಗಳು ಮನೆಗೆ ಶೋಭೆ ತರುವುದಿಲ್ಲ. ಈ ವಸ್ತುಗಳನ್ನು ತೆಗೆದುಹಾಕುವುದರಿಂದ ತಾಜಾತನ ಮತ್ತು ಸಕಾರಾತ್ಮಕತೆ ಬರುತ್ತದೆ.

ನೀವು ಇಷ್ಟಪಡದ ವ್ಯಕ್ತಿಗಳು ನೀಡಿದ ಉಡುಗೊರೆ : ನಿಮ್ಮ ಜೀವನಕ್ಕೆ ಹಾನಿಯುಂಟು ಮಾಡಿದ, ನಿಮ್ಮ ಮನಸ್ಸಿಗೆ ಘಾಸಿಯುಂಟು ಮಾಡಿದ ವ್ಯಕ್ತಿಗಳು ನೀಡಿದ ಉಡುಗೊರೆಗಳೇನಾದರೂ ಇನ್ನೂ ನಿಮ್ಮ ಮನೆಯಲ್ಲಿ ಇದ್ದರೆ ಮೊದಲು ಅದನ್ನು ತೆಗೆದು ಹಾಕಿ.

ಇವುಗಳು ನಿಮ್ಮ ಭಾವನೆಗಳಿಗೆ ಪದೇ ಪದೇ ಪೆಟ್ಟು ನೀಡುತ್ತಿರುತ್ತದೆ. ಆ ಉಡುಗೊರೆಗಳನ್ನು ಕಂಡಾಗಲೆಲ್ಲ ನಿಮ್ಮ ಆ ವ್ಯಕ್ತಿಯ ನೆನಪಾಗಿ ಮನಸ್ಸು ಹದಗೆಡುತ್ತದೆ. ಅಂತಹ ವಸ್ತುಗಳನ್ನು ಕಣ್ಣಿಂದ ದೂರ ಸರಿಸುವುದರಿಂದ ನಿಮಗೆ ಹಳೆಯ ನೆನಪುಗಳು ಮರುಕಳಿಸುವುದಿಲ್ಲ. ಮನೆಯಲ್ಲಿ ಶಾಂತಿ ನೆಲೆಸುತ್ತದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories