ಶ್ರೀ ಕೃಷ್ಣ ಜನ್ಮಾಷ್ಟಮಿ 2025 ಯಾವಾಗ ? ಆಚರಣೆ ಮಾಡುವುದು ಹೇಗೆ ?

Shri Krishna Janmashtami 2025: ಹಿಂದೂಗಳು ಜಗದೋದ್ಧಾರಕ ಶ್ರೀ ಕೃಷ್ಣನ ಜನ್ಮ ದಿನವನ್ನು ಜನ್ಮಾಷ್ಟಮಿ ಎಂದು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ.

ಧರ್ಮ ಸ್ಥಾಪನೆಗಾಗಿ ಅವತಾರವೆತ್ತಿ ಬಂದ ಶ್ರೀ ಕೃಷ್ಣನನ್ನು ಭಕ್ತಿಯಿಂದ ಪೂಜಿಸುವ ದಿನವಾಗಿದೆ. ಪುರಾಣಗಳ ಪ್ರಕಾರ ಇದು ಮಹಾವಿಷ್ಣುವಿನ ಎಂಟನೇ ಅವತಾರವಾಗಿದೆ.

ಸುಮಾರು 5000 ವರ್ಷಗಳ ಹಿಂದೆ ಮಥುರಾದಲ್ಲಿ ಶ್ರೀ ಕೃಷ್ಣನು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಜನಿಸಿದನು. ತನ್ನ ಮಾವ ದುಷ್ಟ ಕಂಸನನ್ನು ಸಂಹರಿಸಲು ಅವತಾರವೆತ್ತಿ ಬಂದನು.

ಆದ್ದರಿಂದ ಪ್ರತಿ ವರ್ಷ ಜನ್ಮಾಷ್ಟಮಿಯನ್ನು ಅದೇ ದಿನ ಆಚರಿಸಲಾಗುತ್ತದೆ. ಕೃಷ್ಣ ಜನ್ಮಾಷ್ಟಮಿಯು ಕೇವಲ ಧಾರ್ಮಿಕ ಆಚರಣೆಯಾಗಿಲ್ಲ.

ಅದಕ್ಕಿಂತಲೂ ಮಿಗಿಲಾಗಿ ಪ್ರತಿ ತಾಯಿಯು ತಮ್ಮ ಮಕ್ಕಳನ್ನು ಶ್ರೀ ಕೃಷ್ಣನಂದೇ ಭಾವಿಸಿ, ಅವರಲ್ಲಿ ಕೃಷ್ಣನನ್ನು ಕಾಣುವ ವಿಶೇಷ ದಿನವಾಗಿದೆ.

ಶ್ರೀ ಕೃಷ್ಣನ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾ ಸಂಭ್ರಮಿಸುವ ದಿನವಾಗಿದೆ. ಹಾಗಾದರೆ ಈ ವರ್ಷ ಕೃಷ್ಣ ಜನ್ಮಾಷ್ಟಮಿ ಯಾವಾಗ ಮತ್ತು ಯಾವ ರೀತಿ ಆಚರಿಸಲಾಗುತ್ತದೆ ಎಂದು ತಿಳಿಯೋಣ.

Shri Krishna Janmashtami 2025: ಕೃಷ್ಣ ಜನ್ಮಾಷ್ಟಮಿ ಯಾವಾಗ?

ಪ್ರತಿ ವರ್ಷದಂತೆ ಈ ವರ್ಷವು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಆಚರಿಸಲಾಗುತ್ತಿದೆ. ಪಂಚಾಂಗದ ಪ್ರಕಾರ ಅಷ್ಟಮಿ ತಿಥಿಯು ಆಗಸ್ಟ್‌ 15 ರ ರಾತ್ರಿ 11:49 ಕ್ಕೆ ಪ್ರಾರಂಭವಾಗಿ ಆಗಸ್ಟ್‌ 16ರ ರಾತ್ರಿ 9:34 ಕ್ಕೆ ಕೊನೆಗೊಳ್ಳುತ್ತದೆ.

ಆದರೆ ಉದಯ ತಿಥಿಯ ಪ್ರಕಾರ ಜನ್ಮಾಷ್ಟಮಿಯು ಆಗಸ್ಟ್‌ 16 ರಂದು ಇರುತ್ತದೆ. ಆದ್ದರಿಂದ ಯಾವ ಪಂಚಾಂಗವನ್ನು ಪಾಲಿಸುತ್ತಾರೆ ಎನ್ನುವ ಆಧಾರದ ಮೇಲೆ ಜನ್ಮಾಷ್ಟಮಿಯನ್ನು ಆಗಸ್ಟ್‌ 15 ಅಥವಾ 16 ರಂದು ಆಚರಿಸುತ್ತಾರೆ.

Shri Krishna Janmashtami 2025: ಜನ್ಮಾಷ್ಟಮಿ ಆಚರಣೆ ಹೇಗೆ?

ಉಪವಾಸ, ಭಜನೆ ಮತ್ತು ಕೀರ್ತನೆಗಳು, ಕೃಷ್ಣನಿಗೆ ಅಲಂಕಾರ, ಮಧ್ಯರಾತ್ರಿ ಪೂಜೆ, ರಾಸಲೀಲೆ, ದಹಿ ಹಂಡಿ, ಮುಂತಾದ ಆಚರಣೆಗಳನ್ನು ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ: Ragi Laddu Recipe:ರಾಗಿ ಮುದ್ದೆ, ದೋಸೆ ಇಷ್ಟಪಡದವರು ತಿನ್ನಿ ರಾಗಿ ಲಡ್ಡು

ಉಪವಾಸ:

ಸಾಮನ್ಯವಾಗಿ ಕೃಷ್ಣನ ಭಕ್ತರೆಲ್ಲರೂ ಉಪವಾಸ ವ್ರತಾಚರಣೆಯನ್ನು ಕೈಗೊಳುತ್ತಾರೆ. ಮಧ್ಯರಾತ್ರಿಯ ಪೂಜೆಯ ನಂತರ ಉಪವಾಸವನ್ನು ಮುರಿಯುತ್ತಾರೆ. ದುರ್ಬಲರು ಮತ್ತು ಅನಾರೋಗ್ಯ ಪೀಡಿತರು ಹಾಲು, ಹಣ್ಣು ಮತ್ತು ಎಳನೀರು ಸೇವನೆ ಮಾಡುತ್ತಾರೆ.

ಭಜನೆ ಮತ್ತು ಕೀರ್ತನೆ:

ಭಕ್ತರು ದಿನವಿಡೀ ಕೃಷ್ಣನಿಗೆ ಸಂಬಂಧಿಸಿ ಭಜನೆ ಮತ್ತು ಕೀರ್ತನೆಗಳನ್ನು ಮಾಡುತ್ತಾರೆ. ಇನ್ನು ಕೆಲವು ಕಡೆ ಭಗವದ್ಗೀತೆಯನ್ನು ಓದುತ್ತಾರೆ.

ಅಲಂಕಾರ:

ಬಾಲ ಗೋಪಾಲನ ವಿಗ್ರಹಕ್ಕೆ ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿ, ಆಭರಣಗಳಿಂದ ಅಲಂಕರಿಸಿ, ಸುಂದರವಾದ ತೊಟ್ಟಿಲುಗಳನ್ನು ಇಡುತ್ತಾರೆ. ಪೂಜೆಯ ನಂತರ ಬಾಲ ಗೋಪಾಲನನ್ನು ಆ ತೊಟ್ಟಿಲಲ್ಲಿ ಇಟ್ಟು ತೂಗುತ್ತಾರೆ.

ಮಧ್ಯರಾತ್ರಿ ಪೂಜೆ:

ನಿಶಿತಾ ಕಾಲದಲ್ಲಿ ಭಕ್ತರು ಕೃಷ್ಣನ ಪೂಜೆ ಮಾಡುತ್ತಾರೆ. ಮಂತ್ರಗಳನ್ನು ಪಠಿಸಿ, ಕೃಷ್ಣನಿಗೆ ಪ್ರಿಯವಾದ ಬೆಣ್ಣೆ, ಹಾಲು ಮತ್ತು ಸಿಹಿ ತಿಂಡಿಗಳನ್ನು ಅರ್ಪಿಸುತ್ತಾರೆ.

ರಾಸಲೀಲೆ ಮತ್ತು ನಾಟಕ:

ಭಾರತದ ಹಲವಡೆ ರಾಸಲೀಲೆಯನ್ನು ಆಡುತ್ತಾರೆ. ಈ ಆಚರಣೆಯು ಉತ್ತರ ಭಾರತದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

ಇದನ್ನೂ ಓದಿ: Sabbakki Paddu : ಉಪವಾಸದ ದಿನದಂದು ಮನೆಯಲ್ಲೇ ಮಾಡಿ ಸಬ್ಬಕ್ಕಿ ಪಡ್ಡು

ದಹಿ ಹಂಡಿ:

ಜನ್ಮಾಷ್ಟಮಿಯಲ್ಲಿ ದಹಿ ಹಂಡಿಯನ್ನು ಒಡೆಯುವುದು ಒಂದು ಸಂಪ್ರದಾಯ. ಮಣ್ಣಿನ ಹಂಡಿ (ಮಡಿಕೆ) ಯಲ್ಲಿ ಹಾಲು, ಮೊಸರು, ಬೆಣ್ಣೆ ತುಂಬಿಸಿ ಎತ್ತರದ ಜಾಗದಲ್ಲಿ ಕಟ್ಟುತ್ತಾರೆ. ಅದನ್ನು ಯುವಕ, ಯುವತಿಯರು ಮಾನವ ಪಿರಮಿಡ್‌ ರೂಪಿಸಿ ಒಡೆಯುತ್ತಾರೆ. ಈ ಆಚರಣೆ ಸಾಮಾನ್ಯವಾಗಿ ಎಲ್ಲ ಕಡೆ ಕಂಡು ಬರುತ್ತದೆ.

(Shri Krishna Janmashtami 2025 know the correct date time and rituals in Kannada)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories