ಈ ವರ್ಷ ನ್ಯೂ ಇಯರ್ ರೆಸಲ್ಯೂಷನ್ ಸೆಟ್ ಮಾಡ್ಕೋಬೇಕಾ ಅಥವಾ ಬೇಡ್ವಾ? ಅದಕ್ಕೆ ಏಕಿಷ್ಟು ಮಹತ್ವ?
New Year Resolution 2026: ಪ್ರತಿ ವರ್ಷ ಈ ಸಮಯದಲ್ಲಿ ನಾವೆಲ್ಲರೂ ಹೊಸ ವರ್ಷದ ಸ್ವಾಗತದ ತಯಾರಿಯಲ್ಲಿರುತ್ತೇವೆ. ಇದೇ ಸಮಯದಲ್ಲಿ ನಮ್ಮೆಲ್ಲರ ಮನಸ್ಸಿನ ಆಳದಿಂದ ಪುಟಿದೇಳುವ ಪ್ರಶ್ನೆ ಎಂದರೆ ಈ ವರ್ಷ ‘ನನ್ನ ನ್ಯೂ ಇಯರ್ ರೆಸಲ್ಯೂಷನ್’ ಏನು?
ಇನ್ನೇನು ಇದರ ಬಗ್ಗೆ ಯೋಚಿಸಬೇಕೆನ್ನುವಷ್ಟರಲ್ಲಿ ಮತ್ತೊಂದು ಸತ್ಯ ಎದುರಾಗುತ್ತದೆ. ಹೇಗಿದ್ದರೂ ರೆಸಲ್ಯೂಷನ್ ಅನ್ನು ವರ್ಷ ಪೂರ್ತಿಯಂತು ಪಾಲಿಸುವುದಿಲ್ಲ.
ಹಾಗಿದ್ದ ಮೇಲೆ ರೆಸಲ್ಯೂಷನ್ ಸೆಟ್ ಮಾಡಿಕೊಂಡು ಪ್ರಯೋಜನ ಏನು? ಪೌಷ್ಟಿಕ ಆಹಾರವನ್ನೇ ತಿನ್ನಬೇಕು, ರಜಾದಿನಗಳಲ್ಲಿ ಕಡ್ಡಾಯವಾಗಿ ಜಿಮ್‌ಗೆ ಹೋಗಬೇಕು, ಪ್ರತಿದಿನ ಒಂದಿಷ್ಟು ಸಮಯ ಧ್ಯಾನ, ಯೋಗ ಮಾಡಬೇಕು, ಸೋಷಿಯಲ್ ಮೀಡಿಯಾದಿಂದ ದೂರವಿರಬೇಕು, ಈ ವರ್ಷವನ್ನು ಬಹಳ ಸುಂದರವಾಗಿ ಕಳೆಯಬೇಕು. ಇವೆಲ್ಲ ಪ್ರತಿ ವರ್ಷ ಎಲ್ಲರೂ ಸೆಟ್ ಮಾಡಿಕೊಳ್ಳುವ ರೆಸಲ್ಯೂಷನ್‌ಗಳು. ಇವುಗಳಲ್ಲಿ ಜಿಮ್ ಮೆಂಬರ್‌ಶಿಪ್ ಹೊಸ ವರ್ಷದ ಮೊದಲ ತಿಂಗಳಿಗೆ ಸೀಮಿತವಾದರೆ, ಅನಾರೋಗ್ಯಕರ ತಿಂಡಿಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ಹೊಟ್ಟೆ ಸೇರುತ್ತವೆ. ಇನ್ನು ಸೋಷಿಯಲ್ ಮೀಡಿಯಾ, ಅನಾವಶ್ಯಕ ಖರ್ಚು ವೆಚ್ಚಗಳ ಕತೆಯಂತೂ ಕಳೆದ ವರ್ಷದ ಹಾದಿಯನ್ನೇ ಹಿಡಿಯುತ್ತದೆ. ಜನವರಿಯ ಅಂತ್ಯದೊಳಗೆ ನಿಮ್ಮ ರೆಸಲ್ಯೂಷನ್ ಬ್ರೇಕ್ ಆಗುವುದು ತಿಳಿದ್ದರೂ ಸಹ ಅದು ಮುಖ್ಯ. ಕನಿಷ್ಠ ಒಂದು ರೆಸಲ್ಯೂಷನ್ ಆದ್ರೂ ಈ ವರ್ಷ ಸೆಟ್ ಮಾಡಿಕೊಳ್ಳುವುದು ಬಹಳ ಮುಖ್ಯ. ಏಕೆ? ಮನಃಶಾಸ್ತ್ರಜ್ಞರ ಪ್ರಕಾರ ರೆಸಲ್ಯೂಷನ್ ಏಕೆ ಸೆಟ್ ಮಾಡಿಕೊಳ್ಳಬೇಕು? ಇಲ್ಲಿದೆ ಓದಿ.
ಇದನ್ನೂ ಓದಿ: 2026 ರ ವೃತ್ತಿ ಜೀವನದಲ್ಲಿ ಮಹತ್ವದ ಸಾಧನೆ ಮಾಡಬೇಕಾ? ಹಾಗಾದ್ರೆ ಈ 3 ವಸ್ತುಗಳನ್ನು ನಿಮ್ಮ ಆಫೀಸ್ ಡೆಸ್ಕ್ ಮೇಲೆ ಇಡಿ
ನ್ಯೂ ಇಯರ್ ರೆಸಲ್ಯೂಷನ್ ಏಕೆ ಸೆಟ್ ಮಾಡಿಕೊಳ್ಳಬೇಕು?
- ನ್ಯೂ ಇಯರ್ ರೆಸಲ್ಯೂಷನ್ ಸೆಟ್ ಮಾಡಿಕೊಳ್ಳುವುದರಿಂದ ಮಾನಸಿಕ ಮಟ್ಟದಲ್ಲಿ ಬದಲಾವಣೆ ಸಾಧ್ಯ. ರೆಸಲ್ಯೂಷನ್ ಅನ್ನು ಪೂರ್ಣಗೊಳಿಸದಿದ್ದರೂ ಅವುಗಳನ್ನು ಪ್ರಾರಂಭಿಸುವುದರಿಂದ ನಿಮಗೆ ಪ್ರೇರಣೆ ಹಾಗೂ ಆತ್ಮವಿಶ್ವಾಸ ದೊರಕಲು ಸಹಾಯ ಮಾಡುತ್ತದೆ.
- ಪ್ರತಿವರ್ಷ ರೆಸಲ್ಯೂಷನ್ ಅನ್ನು ಸೆಟ್ ಮಾಡಿಕೊಂಡು ಪ್ರಯತ್ನಿಸಿ ಅರ್ಧಕ್ಕೆ ಬಿಡುವುದೆಂದರೆ ನೀವು ವಿಫಲರಾದಂತೆ ಅಲ್ಲ. ಅದು ನಿಮ್ಮ ಸಾಮರ್ಥ್ಯ ಹಾಗೂ ದೌರ್ಬಲ್ಯದ ಸ್ವಯಂ ಅರಿವನ್ನು ಮೂಡಿಸುತ್ತದೆ.
- ಹೊಸ ರೆಸಲ್ಯೂಷನ್‌ಗಳು ನಿಮ್ಮ ಹಳೆಯ ನಿರ್ಣಯಗಳನ್ನು ನೆನಪಿಸುತ್ತವೆ. ಹೊಸ ಪ್ರಯತ್ನಕ್ಕೆ ಹಾಗೂ ಮಾನಸಿಕ ಬೆಳವಣಿಗೆಗೆ ಪ್ರೇರಣೆ ನೀಡುತ್ತದೆ.
- ನಿಮ್ಮ ಜೀವನ ಯಾವ ದಿಕ್ಕಿನಲ್ಲಿ ಸಾಗಬೇಕು ಎಂದು ನಿರ್ಧರಿಸಲು ಸಹಾಯ ಮಾಡುತ್ತದೆ. ಏಕಾಗ್ರತೆಯಿಂದ ಮಾತ್ರ ಯಶಸ್ಸು ಸಾಧ್ಯ ಎಂಬುದನ್ನು ತಿಳಿಸಿಕೊಡುತ್ತದೆ.
- ಅತಿ ಸಣ್ಣ ಪ್ರಯತ್ನವೂ ಸಹ ಮಾನಸಿಕ ಆರೋಗ್ಯಕ್ಕೆ ಮುಖ್ಯವಾಗಿದೆ. ಅದು ಒತ್ತಡ, ಆತಂಕ, ವೈಫಲ್ಯದ ಭಯವನ್ನು ಕಡಿಮೆ ಮಾಡುತ್ತದೆ.
- ಹೊಸ ನಿರ್ಣಯಗಳನ್ನು ತೆಗೆದುಕೊಳ್ಳುವುದರಿಂದ ಜೀವನದಲ್ಲಿ ಹೊಸ ಕಲಿಕೆಯನ್ನು ಯಾವಾಗ ಬೇಕಾದರೂ ಆರಂಭಿಸಬಹುದು. ಬದಲಾವಣೆಗೆ ನಿರ್ಣಯಗಳು ಅಡಿಪಾಯ ಹಾಕುತ್ತವೆ ಎಂಬುದನ್ನು ತೋರಿಸುತ್ತದೆ.
- ಯೋಚನೆಯ ವ್ಯಾಪ್ತಿ ಹೆಚ್ಚಾಗುತ್ತದೆ. ಇದು ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಹಾಯ ಮಾಡುತ್ತದೆ.
ಹಾಗಾದರೆ ಈ ವರ್ಷ ನ್ಯೂ ಇಯರ್ ರೆಸಲ್ಯೂಷನ್ ಸೆಟ್ ಮಾಡಿಕೊಳ್ಳಬೇಕಾ? ಮನಃಶಾಸ್ತ್ರಜ್ಞರು ಕೊಟ್ಟಿರುವ ಸಲಹೆಗಳನ್ನು ಗಮನಿಸಿದಾಗ ಇದಕ್ಕೆ ಉತ್ತರ ಹೌದು. ಹಾಗಾಗಿ 2026 ಕೇವಲ ಹೊಸ ವರ್ಷದ ಆರಂಭವಷ್ಟೇ ಅಲ್ಲ, ಹೊಸ ಯೋಚನೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಇರುವ ಉತ್ತಮ ಸಂದರ್ಭವಾಗಿದೆ.



