2026 ರ ವೃತ್ತಿ ಜೀವನದಲ್ಲಿ ಮಹತ್ವದ ಸಾಧನೆ ಮಾಡಬೇಕಾ? ಹಾಗಾದ್ರೆ ಈ 3 ವಸ್ತುಗಳನ್ನು ನಿಮ್ಮ ಆಫೀಸ್‌ ಡೆಸ್ಕ್‌ ಮೇಲೆ ಇಡಿ

Career Growth Feng Shui Vastu Tips: ಜ್ಯೋತಿಷ್ಯ ಶಾಸ್ತ್ರದಂತೆ ವಾಸ್ತು ಶಾಸ್ತ್ರವೂ ಬಹಳ ಪುರಾತನವಾದ ಶಾಸ್ತ್ರವಾಗಿದೆ. ವಾಸ್ತು ಶಾಸ್ತ್ರವು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಾಗಲು ಸಹಾಯ ಮಾಡುತ್ತದೆ ಎಂಬ ಗಾಢ ನಂಬಿಕೆ ಹಲವರಲ್ಲಿದೆ.
ಇದರಂತೆಯೇ ಚೀನಿ ವಾಸ್ತ್ರು ಶಾಸ್ತ್ರವಾದ ಫೆಂಗ್‌ ಶೂಯಿ ನಿಯಮಗಳನ್ನು ಪಾಲಿಸುವುದರಿಂದ ಜೀವನದಲ್ಲಿ ಸಾಕಷ್ಟು ಧನಾತ್ಮಕ ಬದಲಾವಣೆಗಾಳಾಗುತ್ತವೆ ಎಂಬ ನಂಬಿಕೆಯಿದೆ.

ಫೆಂಗ್‌ ಶೂಯಿ ವಾಸ್ತು ನಿಯಮದಲ್ಲಿಯೂ ಹಲವಾರು ನಿಯಮಗಳನ್ನು ರೂಪಿಸಲಾಗಿದೆ. ಅವೆಲ್ಲವೂ ವ್ಯಕ್ತಿಯು ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿಯನ್ನು ಪಡೆದುಕೊಳ್ಳಲು ಇರುವ ಸಿಂಪಲ್‌ ಟಿಪ್ಸ್‌ಗಳಾಗಿವೆ.

ಮನೆಯ ಆರ್ಥಿಕ ಅಭಿವೃದ್ಧಿಗೆ ವಾಸ್ತು ನಿಯಮಗಳಿರುವಂತೆ, ಆಫೀಸಿನಲ್ಲಿ ಉನ್ನತ ಹುದ್ದೆಗಳನ್ನು ಸುಲಭವಾಗಿ ಅಲಂಕರಿಸಲು ಸಹಾಯ ಮಾಡುವ ಟಿಪ್ಸ್‌ಗಳನ್ನು ಫೆಂಗ್‌ ಶೂಯಿಯಲ್ಲಿ ಹೇಳಲಾಗದೆ. ಇವು ನಿಮ್ಮ ಔದ್ಯೋಗಿಕ ಬೆಳವಣಿಗೆಯನ್ನು ದ್ವಿಗುಣಗೊಳಿಸುತ್ತದೆ.

ಹಾಗಾದರೆ ಆಫೀಸ್‌ನಲ್ಲಿ ನಿಮ್ಮ ಗುರಿಯನ್ನು ಸುಲಭವಾಗಿ ತಲುಪಲು ಹಾಗೂ ಉನ್ನತ ಹುದ್ದೆಗಳಿಗೆ ಏರಲು ಸಹಾಯ ಮಾಡುವ ವಾಸ್ತು ನಿಯಮಗಳನ್ನು ತಿಳಿಯೋಣ.

ಮನಿ ಪ್ಲಾಂಟ್‌

ಸಾಮಾನ್ಯವಾಗಿ ಮನಿ ಪ್ಲಾಂಟ್‌ ಅನ್ನು ಮನೆಯಲ್ಲಿ ಇಡುವುದನ್ನು ನೀವು ನೋಡಿರಬಹುದು. ಫೆಂಗ್‌ ಶೂಯಿ ಪ್ರಕಾರ ಮನಿ ಪ್ಲಾಂಟ್‌ ಅನ್ನು ಆಫೀಸಿನ ಡೆಸ್ಕ್‌ ಮೇಲೂ ಇಟ್ಟುಕೊಳ್ಳಬೇಕು.

ಏಕೆಂದರೆ ಇದು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಅಷ್ಟೇ ಅಲ್ಲ ಆಫೀಸಿನಲ್ಲಿ ಆಗಾಗ ಉಂಟಾಗುವ ಒತ್ತಡದ ಸಂದರ್ಭಗಳನ್ನು ಸಕಾರಾತ್ಮಕವಾಗಿ ಎದುರಿಸಲು ಸಹಾಯ ಮಾಡುತ್ತದೆ.

ನಿಮ್ಮ ಆಫೀಸಿನ ಡೆಸ್ಕ್‌ ಮೇಲೆ ಮನಿ ಪ್ಲಾಂಟ್‌ ಇಡುವುದರಿಂದ ನಿಮ್ಮ ಮನಸ್ಸು ಸ್ಥಿರವಾಗಿಡುತ್ತದೆ. ಧನಾತ್ಮಕ ಕಂಪನಗಳು ನಿಮ್ಮ ಜೊತೆಗಿರುವಂತೆ ಮಾಡುತ್ತದೆ.

ಇದು ಹೊರಸೂಸುವ ಸಕಾರಾತ್ಮಕ ಶಕ್ತಿ ನೀವು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಆದ್ದರಿಂದ ನಿಮ್ಮ ಆಫೀಸ್‌ ಡೆಸ್ಕ್ ಮೇಲೆ ಒಂದು ಚೆಂದದ ಮನಿ ಪ್ಲಾಂಟ್‌ ಇಟ್ಟುಕೊಳ್ಳಿ.

ಡ್ರ್ಯಾಗನ್‌ ಪ್ರತಿಮೆ

ಫೆಂಗ್‌ ಶೂಯಿ ವಾಸ್ತುವಿನಲ್ಲಿ ಡ್ರ್ಯಾಗನ್‌ ಅನ್ನು ಅತ್ಯಂತ ಶಕ್ತಿಶಾಲಿ ಹಾಗೂ ಅದೃಷ್ಟಶಾಲಿ ಎಂದು ಪರಿಗಣಿಸಲಾಗಿದೆ. ನೋಡಿದರೆ ಭಯ ಹುಟ್ಟಿಸುವಂತೆ ಕಂಡರೂ ಅದು ಸಕಾರಾತ್ಮಕ ಶಕ್ತಿಯನ್ನು ಹೊಂದಿರುತ್ತದೆ.

ಡ್ರ್ಯಾಗನ್‌ ಪ್ರತಿಮೆಯನ್ನು ನಿಮ್ಮ ಆಫೀಸಿನ ಡೆಸ್ಕ್‌ ಮೇಲೆ ಇಟ್ಟುಕೊಳ್ಳಿ. ಅದರ ಮುಖವು ನಿಮ್ಮ ಕಡೆಗೆ ನೋಡುತ್ತಿರುವಂತೆ ಹೊಂದಿಸಿಕೊಳ್ಳಿ.

ಹಾಗೆ ಇಡುವುದರಿಂದ ಡ್ರ್ಯಾಗನ್‌ನ ಶಕ್ತಿಯು ನಿಮ್ಮ ಸಂವಹನ ಕೌಶಲ್ಯವನ್ನು ಚುರುಕಾಗಿಸುತ್ತದೆ ಹಾಗೂ ನಿಮ್ಮ ಪ್ರಗತಿಗೆ ಕಾರಣವಾಗತ್ತದೆ.

ಇದನ್ನೂ ಓದಿ: ಲಕ್ಷ್ಮಿದೇವಿಯ ಕೃಪಾಕಟಾಕ್ಷ ಸದಾ ನಿಮ್ಮ ಮೇಲಿರಲು ಶುಕ್ರವಾರ ಈ ಆಚರಣೆಗಳನ್ನು ಪಾಲಿಸಿ

ಲಾಫಿಂಗ್‌ ಬುದ್ಧ

ಲಾಫಿಂಗ್‌ ಬುದ್ಧನ ಪ್ರತಿಮೆಯು ತುಂಬಾ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ಫೆಂಗ್‌ ಶೂಯಿ ವಾಸ್ತು ಹೇಳುತ್ತದೆ. ಇದನ್ನು ಸುಖ, ಶಾಂತಿ ಮತ್ತು ಸಮೃದ್ಧಿಯ ಸಂಕೇತವೆಂದು ಜಗತ್ತಿನಲ್ಲಿ ಅತ್ಯಂತ ಜನಪ್ರಿಯವಾಗಿದೆ.

ಈ ಪ್ರತಿಮೆಯನ್ನು ನಿಮ್ಮ ಡೆಸ್ಕ್‌ ಮೇಲೆ ಇಟ್ಟುಕೊಳ್ಳಿ. ನಿಮ್ಮ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗುತ್ತದೆ. ನಿಮ್ಮ ವೃತ್ತಿ ಜೀವನ ಏರುಗತಿಯಲ್ಲಿ ಸಾಗುತ್ತದೆ. ಹೊಸ ಹೊಸ ಅವಕಾಶ, ಬಡ್ತಿ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories