Lakshya Sen Won Gold Medal : ಕಾಮನ್​ವೆಲ್ತ್​ ಗೇಮ್ಸ್​ ಬ್ಯಾಡ್ಮಿಂಟನ್​​ ಪುರುಷರ ಸಿಂಗಲ್ಸ್​ನಲ್ಲಿ ಭಾರತದ ‘ಸ್ವರ್ಣ’ ಸಾಧನೆ

ಬರ್ಮಿಂಗ್​ಹ್ಯಾಮ್​ : Lakshya Sen Won Gold Medal : ಬರ್ಮಿಂಗ್​ಹ್ಯಾಮ್​​ನಲ್ಲಿ ನಡೆಯುತ್ತಿರುವ ಕೊನೆಯ ದಿನದ ಕಾಮನ್​ವೆಲ್ತ್​ ಗೇಮ್ಸ್​​ನಲ್ಲಿ ಭಾರತವು ಮತ್ತೊಂದು ಚಿನ್ನದ ಪದಕಕ್ಕೆ ಮುತ್ತಿಟ್ಟಿದೆ. ಬ್ಯಾಡ್ಮಿಂಟನ್​​ನ ಸಿಂಗಲ್ಸ್​ ವಿಭಾಗದಲ್ಲಿ ಭಾರತದ ಲಕ್ಷ್ಯ ಸೇನ್​​ ಮಲೇಷಿಯಾದ ಎನ್​ಜಿ ತ್ಸೆ ಯೋಂಗ್​ರನ್ನು 21-191, 21-9, 21-16 ಅಂತರದಲ್ಲಿ ಫೈನಲ್​ನಲ್ಲಿ ಮಣಿಸುವ ಮೂಲಕ ಚಿನ್ನದ ಪದಕವನ್ನು ಗಳಿಸಿದ್ದಾರೆ .

ಮೊದಲ ಹಂತದಲ್ಲಿ ಎನ್​​ಜಿ ತ್ಸೆ ಯೋಂಗ್​​​ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ ಯೋಂಗ್​ರನ್ನು ಸರಿಗಟ್ಟುವಲ್ಲಿ ಯಶಸ್ವಿಯಾದ ಲಕ್ಷ್ಯ ಸೇನ್​​ 2 ಪಾಯಿಂಟ್​ಗಳ ಅಂತರದಲ್ಲಿ ಸೋಲನ್ನು ಅನುಭವಿಸಿದ್ದಾರೆ.ಎರಡನೆ ಹಂತದಲ್ಲಿ ಲಕ್ಷ್ಯ ಸೇನ್​ ಹಾಗೂ ಯೋಂಗ್​​ ನಡುವೆ ಭಾರೀ ಪೈಪೋಟಿ ಎದುರಾಗಿತ್ತು. ಎರಡನೇ ಹಂತದಲ್ಲಿ ಲಕ್ಷ್ಯ ಸಿಂಗ್​ಗೆ ಹಿನ್ನೆಡೆ ನೀಡಿದ ಯೋಂಗ್​ 21-9 ಅಂತರದಲ್ಲಿ ಸೆಟ್​ನ್ನು ಗೆದ್ದುಕೊಂಡರು.

ಮೊದಲ ಎರಡು ಸುತ್ತಿನಲ್ಲಿ ಸಮಬಲ ಸಾಧಿಸಿದ ಬಳಿಕ ಲೆಮನ್​ ಬ್ರೇಕ್​ನಲ್ಲಿ ಲಕ್ಷ್ಯ 11 ಪಾಯಿಂಟ್​​ಗಳನ್ನು ಕಲೆ ಹಾಕಿ ಮುನ್ನಡೆಗೆ ಕಾಯ್ದುಕೊಂಡರು. ಮೂರನೇ ಸುತ್ತಿನಲ್ಲಿ 21-16 ಪಾಯಿಂಟ್​ಗಳ ಅಂತರದಲ್ಲಿ ಎನ್​ಜಿ ತ್ಸೆ ಯೋಂಗ್​​ರನ್ನು ಮಣಿಸುವ ಮೂಲಕ ಲಕ್ಷ್ಯ ಸಿಂಗ್​​ ಚಿನ್ನದ ಪದಕ್ಕೆ ಮುತ್ತಿಟ್ಟಿದ್ದಾರೆ. ಮೂರು ಸುತ್ತಿನ ಹಣಾಹಣಿಯಲ್ಲಿ ತೀವ್ರ ಪೈಪೋಟಿಯನ್ನು ಎದುರಿಸಿದ ಲಕ್ಷ್ಯ ಸೇನ್​ ಅನುಭವಿ ಆಟಗಾರನ ಎದುರು ತನ್ನ ಸಾಮರ್ಥ್ಯ ಪ್ರದರ್ಶಿಸುವಲ್ಲಿ ಯಶಸ್ವಿಯಾದರು.

ಇತ್ತ ಮಹಿಳಾ ಸಿಂಗಲ್ಸ್​ ಫೈನಲ್​ನಲ್ಲಿ ಬ್ಯಾಡ್ಮಿಂಟನ್​ ತಾರೆ ಪಿವಿ ಸಿಂಧು ಕೆನಡಾದ ಮಿಶೆಲ್ ಲಿ ಅವರನ್ನು 21-15, 21-13 ನೇರ ಸೆಟ್​ಗಳಿಂದ ಸೋಲಿಸುವ ಮೂಲಕ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಈ ಮೂಲಕ ಮಹಿಳಾ ಹಾಗೂ ಪುರುಷ ಸಿಂಗಲ್ಸ್​​ ಬ್ಯಾಡ್ಮಿಂಟನ್​​ನಲ್ಲಿ ಭಾರತವು ‘ಸ್ವರ್ಣ’ ಸಾಧನೆ ಮಾಡಿದಂತಾಗಿದೆ .

ಇದನ್ನು ಓದಿ : Siddramautsav program : ಸಿದ್ದರಾಮೋತ್ಸವದಿಂದ ನಡುಕ ಶುರುವಾಗಿದ್ದು ಬಿಜೆಪಿಗಲ್ಲ, ಕಾಂಗ್ರೆಸ್ಸಿಗರಿಗೆ : ಡಾ.ಸಿ.ಎನ್​ ಅಶ್ವತ್ಥ ನಾರಾಯಣ

ಇದನ್ನೂ ಓದಿ : Saligrama: ಗಿರಿ ಫ್ರೆಂಡ್ಸ್(ರಿ ) ಚಿತ್ರಪಾಡಿ  – ಸಾಲಿಗ್ರಾಮ: “ಮನೆಗೊಂದು ಮಕ್ಕಳ  ಹೆಸರಲ್ಲಿ ಗಿಡ ನೆಡುವ “ವಿನೂತನ ಕಾರ್ಯಕ್ರಮ

ಇದನ್ನೂ ಓದಿ : Dipika Pallikal : ಕಂಚಿನ ಪದಕ ಗೆದ್ದ ದಿನೇಶ್ ಕಾರ್ತಿಕ್ ಪತ್ನಿ, ಅವಳಿ ಮಕ್ಕಳ ತಾಯಿ ದೀಪಿಕಾ

CWG 2022 Men’s Singles Badminton: Lakshya Sen Won Gold Medal

Comments are closed.