ಏಕದಿನ ವಿಶ್ವಕಪ್‌ನಲ್ಲಿ ಕೆಎಲ್‌ ರಾಹುಲ್‌ ಆಡುವುದು ಫಿಕ್ಸ್‌ : ತಂಡದಿಂದ ಹೊರ ಬಿದ್ದ ಖ್ಯಾತ ಆಟಗಾರ

ವಿಶ್ವಕಪ್‌ ನಲ್ಲಿ ಕನ್ನಡಿಗ ಕೆಎಲ್‌ ರಾಹುಲ್‌ (KL Rahul) ಆಡುವುದು ಖಚಿತ. ಭಾರತ ಮತ್ತು ಪಾಕಿಸ್ತಾನ (IND Vs PAK) ನಡುವಿನ ಏಷ್ಯಾ ಕಪ್ (Asia Cup 2023) ಪಂದ್ಯದ ನಂತರ ಏಕದಿನ ವಿಶ್ವಕಪ್ 2023ಕ್ಕೆ 15 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಆಯ್ಕೆ ಮಾಡಿದೆ ಎನ್ನಲಾಗುತ್ತಿದೆ.

ಮುಂಬೈ : ಏಕದಿನ ವಿಶ್ವಕಪ್‌ 2023 (ODI World Cup 2023) ಸರಣಿಗಾಗಿ ಟೀಂ ಇಂಡಿಯಾ ಸಜ್ಜಾಗುತ್ತಿದೆ. ಈಗಾಗಲೇ ಗಾಯಗೊಂಡು ಏಷ್ಯಾಕಪ್‌ (Asia Cup 2023) ನಿಂದಲೂ ಹೊರಬಿದ್ದಿದ್ದ ಕೆಎಲ್‌ ರಾಹುಲ್‌ (KL Rahul) ಇದೀಗ ವಿಶ್ವಕಪ್‌ ನಲ್ಲಿ ಆಡುವುದು ಖಚಿತವಾಗಿದೆ. ಕನ್ನಡಿಗ ರಾಹುಲ್‌ ಫಿಟ್ನೆಸ್‌ ಕುರಿತು ಈಗಾಗಲೇ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಹಸಿರು ನಿಶಾನೆ ತೋರಿಸಿದೆ. ನಾಳೆ ಭಾರತ ತಂಡದ ಆಯ್ಕೆ ನಡೆಯುವ ಸಾಧ್ಯತೆಯಿದೆ.

ಏಷ್ಯಾಕಪ್‌ ಪಂದ್ಯಾವಳಿಯಲ್ಲಿ ಶನಿವಾರ ಪಲ್ಲೆಕೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯದ ನಂತರ ಅಜಿತ್ ಅಗರ್ಕರ್ (Ajith Agarkar) ಅಧ್ಯಕ್ಷತೆಯಲ್ಲಿ ಬಿಸಿಸಿಐನ (BCCI)  ಆಯ್ಕೆ ಸಮಿತಿಯು 2023 ರ ODI ವಿಶ್ವಕಪ್‌ಗೆ 15 ಸದಸ್ಯರ ಭಾರತ ತಂಡವನ್ನು ಆಯ್ಕೆ ಮಾಡಿದೆ ಎಂದು ವರದಿ ಹೇಳಿದೆ. ಶನಿವಾರ ಪಲ್ಲೆಕೆಲೆಯಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಪಂದ್ಯದ ನಂತರ ಏಕದಿನ ವಿಶ್ವಕಪ್ 2023ಕ್ಕೆ 15 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಆಯ್ಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ಆದರೆ ನಾಳೆ ಅಧಿಕೃತವಾಗಿ ತಂಡದ ಆಯ್ಕೆ ನಡೆಯಲಿದೆ. ತಂಡದಲ್ಲಿ ಕೆಲವೊಂದು ಬದಲಾವಣೆ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ.

ODI World Cup 2023 KL Rahul In Top Player Missed Out
Image Credit : KL Rahul Instagram

ಐಪಿಎಲ್‌ (IPL 2023)  ಪಂದ್ಯಾವಳಿಯಲ್ಲಿ ಲಕ್ನೋ ತಂಡದ (lucknow super giants) ನಾಯಕರಾಗಿದ್ದ ಕೆಎಲ್‌ ರಾಹುಲ್‌ ಫೀಲ್ಡಿಂಗ್‌ ಮಾಡುವ ವೇಳೆಯಲ್ಲಿ ಗಾಯಗೊಂಡಿದ್ದರು. ನಂತರ ವಿದೇಶಕ್ಕೆ ತೆರಳಿ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿಕೊಂಡಿದ್ದರು. ಐಪಿಎಲ್‌ ಸೇರಿದಂತೆ ಪ್ರಮುಖ ಸರಣಿಯನ್ನು ರಾಹುಲ್‌ ಮಿಸ್‌ ಮಾಡಿಕೊಂಡಿದ್ದರು. ಇದೀಗ ಸಂಪೂರ್ಣ ಫಿಟ್‌ ಆಗಿದ್ದು, ನಿನ್ನೆಯಷ್ಟೇ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದ ರಾಹುಲ್‌ ಇದೀಗ ವಿಶ್ವಕಪ್‌ನಲ್ಲಿ ಆಡುವುದಕ್ಕೆ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (NCA) ಹಸಿರು ನಿಶಾನೆ ತೋರಿದೆ.

ವಿಶ್ವಕಪ್‌ ಗಾಗಿ ಭಾರತ ಹದಿನೈದು ಸದಸ್ಯರ ತಂಡವನ್ನು ಆಯ್ಕೆ ಮಾಡಲಿದೆ. ತಂಡದ ಆಯ್ಕೆಗೂ ಒಂದು ದಿನ ಮೊದಲು ರಾಹುಲ್‌ ಲಭ್ಯತೆ ಖಚಿತವಾಗಿದೆ. ಕೆಎಲ್‌ ರಾಹುಲ್‌ ಬ್ಯಾಟಿಂಗ್‌ ಜೊತೆಗೆ ವಿಕೆಟ್‌ ಕೀಪರ್‌ ಸ್ಥಾನವನ್ನು ತುಂಬಲಿದ್ದಾರೆ. ಅಲ್ಲದೇ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುವ ಸಾಧ್ಯತೆಯಿದೆ. ರಾಹುಲ್‌ ತಂಡಕ್ಕೆ ವಾಪಾಸಾದ್ರೂ ಕೂಡ ಇಶಾನ್‌ ಕಿಶನ್‌ ಅವರನ್ನು ಹೆಚ್ಚುವರಿ ವಿಕೆಟ್‌ ಕೀಪರ್‌ ಆಗಿ ಸ್ಥಾನ ಪಡೆಯುವ ಸಾಧ್ಯತೆಯಿದೆ.

ODI World Cup 2023 KL Rahul In Top Player Missed Out
Image Credit : KL Rahul Instagram

ಇನ್ನು ಭಾರತ – ಪಾಕಿಸ್ತಾನ ನಡುವಿನ ಪಂದ್ಯಾವಳಿಯ ವೇಳೆಯಲ್ಲಿ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್‌ ಅಗರ್‌ಕರ್‌ ಅವರು ತಂಡದ ಕೋಚ್‌ ರಾಹುಲ್‌ ದ್ರಾವಿಡ್‌ (Rahul Dravid) ಹಾಗೂ ನಾಯಕ ರೋಹಿತ್‌ ಶರ್ಮಾ (Rohit Sharma) ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಆದರೆ ಭಾರತ ವಿಶ್ವಕಪ್‌ ತಂಡದಲ್ಲಿ ಒಂದೆರಡು ಬದಲಾವಣೆ ಖಚಿತ.

ಇದನ್ನೂ ಓದಿ :  Virat Kohli Instagram Post: ಒಂದು ಇನ್’ಸ್ಟಾಗ್ರಾಂ ಪೋಸ್ಟ್’ಗೆ 11.45 ಕೋಟಿ, ವರ್ಷಕ್ಕೆ 300 ಕೋಟಿ; ಇದೆಲ್ಲಾ ಸುಳ್ಳು ಅಂದಿದ್ದೇಕೆ ಕಿಂಗ್ ಕೊಹ್ಲಿ?

ಏಷ್ಯಾಕಪ್‌ ತಂಡದಲ್ಲಿ ಬ್ಯಾಕ್‌ ಅಪ್‌ ಆಟಗಾರನಾಗಿ ಶ್ರೀಲಂಕಾಕ್ಕೆ ತೆರಳಿರುವ ಸಂಜು ಸ್ಯಾಮ್ಸನ್‌  (Sanju Samson) ಏಕದಿನ ವಿಶ್ವಕಪ್‌ ತಂಡದಿಂದ ಹೊರಗುಳಿಯುವುದು ಬಹುತೇಕ ಖಚಿತ. ಉಳಿದಂತೆ ತಿಲಕ್‌ ವರ್ಮಾ (Tilak Varma)  ಹಾಗೂ ಪ್ರಸಿದ್ದ ಕೃಷ್ಣ (Prasid Krishna) ಅವರಿಗೂ ಕೂಡ ತಂಡದಿಂದ ಗೇಟ್‌ ಪಾಸ್‌ ನೀಡುವುದು ಖಚಿತವಾಗಿದೆ. ರೋಹಿತ್‌ ಶರ್ಮಾ ನಾಯಕನಾಗಿ ಮುಂದುವರಿದ್ರೆ, ಹಾರ್ದಿಕ್‌ ಪಾಂಡ್ಯ (Hardik Pandya) ಉಪನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

ODI World Cup 2023 KL Rahul In Top Player Missed Out
Image Credit to Orginal Source

ರೋಹಿತ್‌ ಶರ್ಮಾ ಜೊತೆಗೆ ಶುಭಮನ್‌ ಗಿಲ್‌ ಆರಂಭಿಕ ಆಟಗಾರರಾಗಿ ಕಾಣಿಸಿಕೊಂಡ್ರೆ, ಮೊದಲ ಕ್ರಮಾಂತದಲ್ಲಿ ವಿರಾಟ್‌ ಕೊಹ್ಲಿ, ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್‌ ಅಯ್ಯರ್‌ ಹಾಗೂ ಕೆಎಲ್‌ ರಾಹುಲ್‌ ಸ್ಥಾನ ಪಡೆಯುವುದು ಖಚಿತ. ಉಳಿದಂತೆ ಆಲ್‌ರೌಂಡರ್‌ ಕೋಟಾದಲ್ಲಿ ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ ಹಾಗೂ ಶಾರ್ದೂಲ್‌ ಠಾಕೂರ್‌ ಸ್ಥಾನ ಪಡೆಯಬಹುದು. ಉಳಿದಂತೆ ಕುಲದೀಪ್‌ ಸಿಂಗ್‌ ಹಾಗೂ ಅಕ್ಷರ್‌ ಪಟೇಲ್‌ ಸ್ಪಿನ್ನರ್‌ ಆಗಿದ್ರೆ ಜಸ್ಪ್ರಿತ್‌ ಬೂಮ್ರಾ, ಮೊಹಮ್ಮದ್‌ ಸಿರಾಜ್‌ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಬ್ಯಾಕ್‌ ಅಪ್‌ ಪ್ಲೇಯರ್‌ ಆಗಿ ಸೂರ್ಯಕುಮಾರ್‌ ಯಾದವ್‌ ಹಾಗೂ ಇಶಾನ್‌ ಕಿಶನ್‌ ಆಯ್ಕೆಯಾಗಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ : Virat Kohli House : ಅಲಿಬಾಗ್’ನಲ್ಲಿ ವಿರಾಟ್ ಮನೆ, 8 ಎಕರೆಯಲ್ಲಿ ಐಷಾರಾಮಿ ಮನೆ ಕಟ್ಟುವ ಕಾರ್ಯಕ್ಕೆ ವಿರುಷ್ಕಾ ಚಾಲನೆ

ವಿಶ್ವಕಪ್‌ 2023ಕ್ಕೆ ಭಾರತ ಸಂಭಾವ್ಯ ತಂಡ :
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೀ) ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯದ್ಮಿ , ಅಕ್ಷರ್ ಪಟೇಲ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್.

ODI World Cup 2023 KL Rahul In Top Player Missed Out
Image Credit to Original Source

ಐಸಿಸಿ ವಿಶ್ವಕಪ್ 2023: ಅಭ್ಯಾಸ ಪಂದ್ಯಗಳ ವೇಳಾಪಟ್ಟಿ (ICC Cricket World Cup 2023: Warm-Up Matches Schedule)

ಸೆಪ್ಟೆಂಬರ್ 29
ಬಾಂಗ್ಲಾದೇಶ Vs ಶ್ರೀಲಂಕಾ (ಗುವಾಹಟಿ, ಮಧ್ಯಾಹ್ನ 2ಕ್ಕೆ)
ದಕ್ಷಿಣ ಆಫ್ರಿಕಾ Vs ಅಫ್ಘಾನಿಸ್ತಾನ (ತಿರುವನಂತಪುರಂ, ಮಧ್ಯಾಹ್ನ 2ಕ್ಕೆ)
ನ್ಯೂಜಿಲೆಂಡ್ Vs ಪಾಕಿಸ್ತಾನ (ಹೈದರಾಬಾದ್, ಮಧ್ಯಾಹ್ನ 2ಕ್ಕೆ)

ಸೆಪ್ಟೆಂಬರ್ 30
ಭಾರತ Vs ಇಂಗ್ಲೆಂಡ್ (ಗುವಾಹಟಿ, ಮಧ್ಯಾಹ್ನ 2ಕ್ಕೆ)
ಆಸ್ಟ್ರೇಲಿಯಾ Vs ನೆದರ್ಲೆಂಡ್ಸ್ (ತಿರುವನಂತಪುರಂ, ಮಧ್ಯಾಹ್ನ 2ಕ್ಕೆ)

ಅಕ್ಟೋಬರ್ 3
ಅಫ್ಘಾನಿಸ್ತಾನ Vs ಶ್ರೀಲಂಕಾ (ಗುವಾಹಟಿ, ಮಧ್ಯಾಹ್ನ 2ಕ್ಕೆ)
ಭಾರತ Vs ನೆದರ್ಲೆಂಡ್ಸ್ (ತಿರುವನಂತಪುರಂ, ಮಧ್ಯಾಹ್ನ 2ಕ್ಕೆ)
ಆಸ್ಟ್ರೇಲಿಯಾ Vs ಪಾಕಿಸ್ತಾನ (ಹೈದಬಾದಾದ್, ಮಧ್ಯಾಹ್ನ 2ಕ್ಕೆ)

ವಿಶ್ವಕಪ್ ಗೆ ಆತಿಥ್ಯ ವಹಿಸಲಿರುವ ನಗರಗಳು:
ಬೆಂಗಳೂರು, ದೆಹಲಿ, ಮುಂಬೈ, ಅಹ್ಮದಾಬಾದ್, ಪುಣೆ, ಲಕ್ನೋ, ಹೈದರಾಬಾದ್, ಧರ್ಮಶಾಲಾ, ಚೆನ್ನೈ, ಕೋಲ್ಕತಾ.

ಐಸಿಸಿ ವಿಶ್ವಕಪ್ 2023: ಟೂರ್ನಿಯಲ್ಲಿ ಆಡಲಿರುವ ತಂಡಗಳು
ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್, ಶ್ರೀಲಂಕಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ನೆದರ್ಲೆಂಡ್ಸ್.

ಇದನ್ನೂ ಓದಿ : Deepak Devadiga Alevooru : ಕರ್ನಾಟಕಕ್ಕೆ ಮತ್ತೊಬ್ಬ ಮಿಸ್ಟರಿ ಸ್ಪಿನ್‌ರ್‌ : ಮಹಾರಾಜ ಟ್ರೋಫಿಯಲ್ಲಿ ಮಿಂಚಿದ ದೀಪಕ್‌ ದೇವಾಡಿಗ ಅಲೆವೂರು

ಐಸಿಸಿ ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ (ICC World Cup 2023 Schedule)

ಅಕ್ಟೋಬರ್ 5: ಇಂಗ್ಲೆಂಡ್ Vs ನ್ಯೂಜಿಲೆಂಡ್ (ಅಹ್ಮದಾಬಾದ್)
ಅಕ್ಟೋಬರ್ 6: ಪಾಕಿಸ್ತಾನ Vs ನೆದರ್ಲೆಂಡ್ಸ್ (ಹೈದರಾಬಾದ್)
ಅಕ್ಟೋಬರ್ 7: ಬಾಂಗ್ಲಾದೇಶ Vs ಅಫ್ಘಾನಿಸ್ತಾನ (ಧರ್ಮಶಾಲಾ)
ಅಕ್ಟೋಬರ್ 7: ದಕ್ಷಿಣ ಆಫ್ರಿಕಾ Vs ಶ್ರೀಲಂಕಾ (ದೆಹಲಿ)
ಅಕ್ಟೋಬರ್ 8: ಭಾರತ Vs ಆಸ್ಟ್ರೇಲಿಯಾ (ಚೆನ್ನೈ)
ಅಕ್ಟೋಬರ್ 9: ನ್ಯೂಜಿಲೆಂಡ್ Vs ನೆದರ್ಲೆಂಡ್ಸ್ (ಹೈದರಾಬಾದ್)
ಅಕ್ಟೋಬರ್ 10: ಇಂಗ್ಲೆಂಡ್ Vs ಬಾಂಗ್ಲಾದೇಶ (ಧರ್ಮಶಾಲಾ)
ಅಕ್ಟೋಬರ್ 11: ಭಾರತ Vs ಅಫ್ಘಾನಿಸ್ತಾನ (ದೆಹಲಿ)
ಅಕ್ಟೋಬರ್ 12: ಪಾಕಿಸ್ತಾನ Vs ಶ್ರೀಲಂಕಾ (ಹೈದರಾಬಾದ್)
ಅಕ್ಟೋಬರ್ 13: ಆಸ್ಟ್ರೇಲಿಯಾ Vs ದಕ್ಷಿಣ ಆಫ್ರಿಕಾ (ಲಕ್ನೋ)
ಅಕ್ಟೋಬರ್ 14: ಇಂಗ್ಲೆಂಡ್ Vs ಅಫ್ಘಾನಿಸ್ತಾನ (ದೆಹಲಿ)
ಅಕ್ಟೋಬರ್ 14: ಬಾಂಗ್ಲಾದೇಶ Vs ನ್ಯೂಜಿಲೆಂಡ್ (ಚೆನ್ನೈ)
ಅಕ್ಟೋಬರ್ 15: ಭಾರತ Vs ಪಾಕಿಸ್ತಾನ (ಅಹ್ಮದಾಬಾದ್)
ಅಕ್ಟೋಬರ್ 16: ಆಸ್ಟ್ರೇಲಿಯಾ Vs ಶ್ರೀಲಂಕಾ (ಲಕ್ನೋ)
ಅಕ್ಟೋಬರ್ 17: ದಕ್ಷಿಣ ಆಫ್ರಿಕಾ Vs ನೆದರ್ಲೆಂಡ್ಸ್ (ಧರ್ಮಶಾಲಾ)
ಅಕ್ಟೋಬರ್ 18: ಅಫ್ಘಾನಿಸ್ತಾನ Vs ನ್ಯೂಜಿಲೆಂಡ್ (ಚೆನ್ನೈ)
ಅಕ್ಟೋಬರ್ 19: ಭಾರತ Vs ಬಾಂಗ್ಲಾದೇಶ (ಪುಣೆ)
ಅಕ್ಟೋಬರ್ 20: ಆಸ್ಟ್ರೇಲಿಯಾ Vs ಪಾಕಿಸ್ತಾನ (ಬೆಂಗಳೂರು)

ಇದನ್ನೂ ಓದಿ : Prithvi Shaw: ಇಂಗ್ಲೆಂಡ್ ಕೌಂಟಿ ಕ್ರಿಕೆಟ್’ನಲ್ಲಿ ಸಿಡಿಲಬ್ಬರದ ದ್ವಿಶಥಕ ಬಾರಿಸಿದ ಪೃಥ್ವಿ ಶಾ

ಅಕ್ಟೋಬರ್ 21: ಇಂಗ್ಲೆಂಡ್ Vs ದಕ್ಷಿಣ ಆಫ್ರಿಕಾ (ಮುಂಬೈ)
ಅಕ್ಟೋಬರ್ 21: ನೆದರ್ಲೆಂಡ್ಸ್ Vs ಶ್ರೀಲಂಕಾ (ಲಕ್ನೋ)
ಅಕ್ಟೋಬರ್ 22: ಭಾರತ Vs ನ್ಯೂಜಿಲೆಂಡ್ (ಧರ್ಮಶಾಲಾ)
ಅಕ್ಟೋಬರ್ 23: ಪಾಕಿಸ್ತಾನ Vs ಅಫ್ಘಾನಿಸ್ತಾನ (ಚೆನ್ನೈ)
ಅಕ್ಟೋಬರ್ 24: ದಕ್ಷಿಣ ಆಫ್ರಿಕಾ Vs ಬಾಂಗ್ಲಾದೇಶ (ಮುಂಬೈ)
ಅಕ್ಟೋಬರ್ 25: ಆಸ್ಟ್ರೇಲಿಯಾ Vs ನೆದರ್ಲೆಂಡ್ಸ್ (ದೆಹಲಿ)
ಅಕ್ಟೋಬರ್ 26: ಇಂಗ್ಲೆಂಡ್ Vs ಶ್ರೀಲಂಕಾ (ಬೆಂಗಳೂರು)
ಅಕ್ಟೋಬರ್ 27: ಪಾಕಿಸ್ತಾನ Vs ದಕ್ಷಿಣ ಆಫ್ರಿಕಾ (ಚೆನ್ನೈ)
ಅಕ್ಟೋಬರ್ 28: ನೆದರ್ಲೆಂಡ್ಸ್ Vs ಬಾಂಗ್ಲಾದೇಶ (ಕೋಲ್ಕತಾ)
ಅಕ್ಟೋಬರ್ 28: ಆಸ್ಟ್ರೇಲಿಯಾ Vs ನ್ಯೂಜಿಲೆಂಡ್ (ಧರ್ಮಶಾಲಾ)
ಅಕ್ಟೋಬರ್ 29: ಭಾರತ Vs ಇಂಗ್ಲೆಂಡ್ (ಲಕ್ನೋ)
ಅಕ್ಟೋಬರ್ 30: ಅಫ್ಘಾನಿಸ್ತಾನ Vs ಶ್ರೀಲಂಕಾ (ಪುಣೆ)
ಅಕ್ಟೋಬರ್ 31: ಪಾಕಿಸ್ತಾನ Vs ಬಾಂಗ್ಲಾದೇಶ (ಕೋಲ್ಕತಾ)
ನವೆಂಬರ್ 1: ದಕ್ಷಿಣ ಆಫ್ರಿಕಾ Vs ನ್ಯೂಜಿಲೆಂಡ್ (ಪುಣೆ)
ನವೆಂಬರ್ 2: ಭಾರತ Vs ಶ್ರೀಲಂಕಾ (ಮುಂಬೈ)
ನವೆಂಬರ್ 3: ನೆದರ್ಲೆಂಡ್ಸ್ Vs ಅಫ್ಘಾನಿಸ್ತಾನ (ಲಕ್ನೋ)
ನವೆಂಬರ್ 4: ಇಂಗ್ಲೆಂಡ್ Vs ಆಸ್ಟ್ರೇಲಿಯಾ (ಅಹ್ಮದಾಬಾದ್)

ಇದನ್ನೂ ಓದಿ : Rohit Sharma Tiripati Secret: ರೋಹಿತ್ ಶರ್ಮಾ ಯಶಸ್ಸಿನಲ್ಲಿ “ತಿರುಪತಿ” ಲಕ್, ಮತ್ತೆ “ತಿಮ್ಮಪ್ಪ”ನ ದರ್ಶನ ಮಾಡಿದ್ದು ಅದೇ ಕಾರಣಕ್ಕಾ?

ನವೆಂಬರ್ 4: ಪಾಕಿಸ್ತಾನ Vs ನ್ಯೂಜಿಲೆಂಡ್ (ಬೆಂಗಳೂರು)
ನವೆಂಬರ್ 5: ದಕ್ಷಿಣ ಆಫ್ರಿಕಾ Vs ಭಾರತ (ಕೋಲ್ಕತಾ)
ನವೆಂಬರ್ 6: ಬಾಂಗ್ಲಾದೇಶ Vs ಶ್ರೀಲಂಕಾ (ದೆಹಲಿ)
ನವೆಂಬರ್ 7: ಆಸ್ಟ್ರೇಲಿಯಾ Vs ಅಫ್ಘಾನಿಸ್ತಾನ (ಮುಂಬೈ)
ನವೆಂಬರ್ 8: ಇಂಗ್ಲೆಂಡ್ Vs ನೆದರ್ಲೆಂಡ್ಸ್ (ಪುಣೆ)
ನವೆಂಬರ್ 9: ನ್ಯೂಜಿಲೆಂಡ್ Vs ಶ್ರೀಲಂಕಾ (ಬೆಂಗಳೂರು)
ನವೆಂಬರ್ 10: ದಕ್ಷಿಣ ಆಫ್ರಿಕಾ Vs ಅಫ್ಘಾನಿಸ್ತಾನ (ಅಹ್ಮದಾಬಾದ್)
ನವೆಂಬರ್ 11: ಭಾರತ Vs ನೆದರ್ಲೆಂಡ್ಸ್ (ಬೆಂಗಳೂರು)
ನವೆಂಬರ್ 12: ಇಂಗ್ಲೆಂಡ್ Vs ಪಾಕಿಸ್ತಾನ (ಕೋಲ್ಕತಾ)
ನವೆಂಬರ್ 12: ಆಸ್ಟ್ರೇಲಿಯಾ Vs ಬಾಂಗ್ಲಾದೇಶ (ಪುಣೆ)
ನವೆಂಬರ್ 15: ಸೆಮಿಫೈನಲ್-1 (ಮುಂಬೈ)
ನವೆಂಬರ್ 16: ಸೆಮಿಫೈನಲ್-2 (ಕೋಲ್ಕತಾ)
ನವೆಂಬರ್ 19: ಫೈನಲ್ (ಅಹ್ಮದಾಬಾದ್)

ODI World Cup 2023 Kannadiga KL Rahul In Top Player  Sanju Samson, tilak Varma, Prasid Krisha Missed Out

Comments are closed.