ಕರ್ನಾಟಕ ನಮ್ಮ ಜನ್ಮಸ್ಥಳ, ಕನ್ನಡ ನಮ್ಮ ಹೆಮ್ಮೆ : ಸಿಬ್ಬಂದಿ ವರ್ತನೆಗೆ ಕೆನರಾ ಬ್ಯಾಂಕ್ ಸ್ಪಷ್ಟನೆ

ಚಿಕ್ಕಮಗಳೂರು : ಕೆನರಾ ಬ್ಯಾಂಕ್‌ನ (Canara Bank) ಮಲಯಾಲಂ ಸಿಬ್ಬಂದಿ ಗ್ರಾಹಕರ ಜೊತೆಗೆ ಕನ್ನಡದಲ್ಲಿ ಮಾತನಾಡದೆ ದರ್ಪ ತೋರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನರಾ ಬ್ಯಾಂಕ್ ಇದೀಗ ಸ್ಪಷ್ಟನೆ ಕೊಟ್ಟಿದೆ.
ಕೆನರಾ ಬ್ಯಾಮಕ್ ತನ್ನ ಅಧಿಕೃತ ಟ್ವೀಟರ್ ಹ್ಯಾಂಡಲ್‌ನಲ್ಲಿ ಪ್ರತಿಕ್ರೀಯೆ ನೀಡಿದೆ. ಕರಾವಳಿ ಮೂಲದ ಕೆನರಾ ಬ್ಯಾಂಕ್, ಕರ್ನಾಟಕ ನಮ್ಮ ಜನ್ಮಸ್ಥಳ, ಕನ್ನಡ ಕೇವಲ ಭಾಷೆಯಲ್ಲ ಅದು ನಮ್ಮ ಹೆಮ್ಮೆ ಎಂದಿದೆ.
Canara Bank : ಕೆನರಾ ಬ್ಯಾಂಕ್ ಹೇಳಿದ್ದೇನು ?
ಚಿಕ್ಕಮಗಳೂರಲ್ಲಿ ಕೆನರಾ ಬ್ಯಾಂಕ್ ಸಿಬ್ಬಂದಿಯ ವರ್ತನೆಯ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಕೆನರಾ ಬ್ಯಾಂಕ್ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಕನ್ನಡ ಮತ್ತು ಕರ್ನಾಟಕದಲ್ಲಿ ಅದರ ಗ್ರಾಹಕರ ನೆಲೆಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ. “ಕನ್ನಡ ನಮ್ಮ ಅಡಿಪಾಯ, ನಿಮ್ಮ ಬೆಂಬಲ ನಮ್ಮ ಶಕ್ತಿ. ಕೆನರಾ ಬ್ಯಾಂಕಿಗೆ, ಕರ್ನಾಟಕ ಕೇವಲ ಒಂದು ರಾಜ್ಯವಲ್ಲ – ಇದು ನಮ್ಮ ಜನ್ಮಸ್ಥಳ.
ನೂರು ವರ್ಷಗಳ ಹಿಂದೆ ಪ್ರಾರಂಭವಾದ ನಮ್ಮ ಪ್ರಯಾಣದ ಮೊದಲ ಅಡಿಪಾಯ. ಕನ್ನಡ ನಮಗೆ ಕೇವಲ ಒಂದು ಭಾಷೆಯಲ್ಲ, ಇದು ಭಾವನೆ, ಹೆಮ್ಮೆ. ರಾಜ್ಯದ ಪ್ರತಿ ಶಾಖೆಯಲ್ಲೂ ಸ್ಥಳೀಯ ಭಾಷೆಯಲ್ಲಿ ಸೇವೆಗಳನ್ನು ಒದಗಿಸಲು ಸಿದ್ದ ಎಂದಿದೆ.
ಇದನ್ನೂ ಒದಿ : ಅತೀ ಕಡಿಮೆ ಬಡ್ಡಿದರ : ಗೃಹಸಾಲ ಪಡೆಯೋಕೆ ಈ ಬ್ಯಾಂಕ್ ಬೆಸ್ಟ್
ನಮ್ಮ ಸಿಬ್ಬಂದಿ ವಿವಿಧ ರಾಜ್ಯಗಳಿಂದ ಬಂದಿರಬಹುದು.ಆದರೆ ನಮ್ಮ ಹೃದಯ ಯಾವಾಗಲೂ ನಮ್ಮ ಗ್ರಾಹಕರೊಂದಿಗೆ ಪ್ರತಿಧ್ವನಿಸುತ್ತದೆ.
ಸೇವೆ ಮತ್ತು ಸಂಪರ್ಕದಲ್ಲಿ ಕನ್ನಡಕ್ಕೆ ಸರಿಯಾದ ಸ್ಥಾನವನ್ನು ನೀಡುವಲ್ಲಿ ನಾವು ಯಾವಾಗಲೂ ಮುಂಚೂಣಿಯಲ್ಲಿದ್ದೇವೆ ಎಂದಿದೆ.
Canara Bank : ಚಿಕ್ಕಮಗಳೂರು ಕೆನರಾ ಬ್ಯಾಂಕ್‌ನಲ್ಲಿ ನಡೆದಿದ್ದೇನು ?
ಚಿಕ್ಕಮಗಳೂರಿನಲ್ಲಿ ಗ್ರಾಹಕರ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡಿತ್ತು. ಈ ಕುರಿತು ಕೆನರಾ ಬ್ಯಾಂಕ್ ಶಾಖೆಗೆ ತೆರಳಿ ವಿಚಾರಣೆ ನಡೆಸುವ ವೇಳೆಯಲ್ಲಿ ಅಲ್ಲಿದ್ದ ಸಿಬ್ಬಂದಿ ಸೂಕ್ತ ಸೇವೆಯನ್ನು ನೀಡಲಿಲ್ಲ.
ಮಲಯಾಲಂನಲ್ಲಿ ಮಾತನಾಡಿದ ಕೆನರಾ ಬ್ಯಾಂಕ್ ಸಿಬ್ಬಂದಿ ಕನ್ನಡದಲ್ಲಿ ಸರಿಯಾಗಿ ಪ್ರತಿಕ್ರಿಯೆ ನೀಡಲಿಲ್ಲ. ಕನ್ನಡ ಬಾರದ ಸಿಬ್ಬಂದಿ ಕನ್ನಡಿಗರಿಗೆ ಯಾವ ರೀತಿ ಸೇವೆ ನೀಡಲು ಸಾಧ್ಯ ಎಂದು ಗ್ರಾಹಕರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಗೃಹಲಕ್ಷ್ಮೀ ಫಲಾನುಭವಿಗಳ ಖಾತೆಗೆ 4000 ರೂ : ಗುಡ್‌ನ್ಯೂಸ್ ಕೊಟ್ಟ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಈ ವಿಡಿಯೋವನ್ನು ಗ್ರಾಹಕರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ನೋಡಿದ ಕನ್ನಡಿಗರು ಕೆನರಾ ಬ್ಯಾಂಕ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡ ಬಾರದವರು ಇಲ್ಲಿ ಯಾಕೆ ಕೆಲಸ ಮಾಡುತ್ತಿದ್ದಾರೆ ಎಂಬ ಪ್ರಶ್ನೆಯನ್ನು ಗ್ರಾಹಕರು ಎತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಕೆನರಾ ಬ್ಯಾಂಕ್ ಇದೀಗ ಸ್ಪಷ್ಟನೆ
Canara Bank Clarification about chikmagalur Branch issued issued a statement on reaffirmed its commitment to Kannada and its customer base in Karnataka.



