ಭಟ್ಕಳದಲ್ಲಿ ಮೀನುಗಾರಿಕಾ ದೋಣಿ ಮುಳುಗಡೆ : ನಾಲ್ವರು ಮೀನುಗಾರರು ನಾಪತ್ತೆ

Bhatkal fishing boat capsizes : ಭಟ್ಕಳ : ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಅಳಿವೆಯಂಚಿಯಲ್ಲಿ ಮಗುಚಿ, ನಾಲ್ವರು ಮೀನುಗಾರರು ನಾಪತ್ತೆ ಆಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ.

ಜುಲೈ 30 ರಂದು ಮಧ್ಯಾಹ್ನ ಭಟ್ಕಳ ತಾಲೂಕಿನ ಅಳ್ವೆಕೋಡಿಯಿಂದ “ಮಹಾಸತಿ ಗಿಲ್ನೆಟ್” ಎಂಬ ಹೆಸರಿನ ದೋಣಿಯಲ್ಲಿ ಆರು ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಭಟ್ಕಳ ಅಳವಿನಂಚಿನಲ್ಲಿ ದೋಣಿ ಮುಳುಗಡೆಯಾಗಿದೆ.

ದೋಣಿಯಲ್ಲಿದ್ದ ಆರು ಮಂದಿ ಮೀನುಗಾರರಲ್ಲಿ ಮನೋಹರ್ ಮೊಗೇರ (31 ವರ್ಷ) ಮತ್ತು ರಾಮಾ ಖಾರ್ವಿ (43 ವರ್ಷ) ಎಂಬುವವರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದು, ಭಟ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Also Read : ಧರ್ಮಸ್ಥಳ ಎಸ್‌ಐಟಿ ತನಿಖೆ : ಶವಗಳ ಪತ್ತೆಗೆ ಯಿಂದ ಮಣ್ಣು ಪರೀಕ್ಷೆ, ಪತ್ತೆಯಾಗುತ್ತಾ ಬುರುಡೆ ರಹಸ್ಯ ?

ನಾಲ್ವರು ಮೀನುಗಾರರಾದ ರಾಮಕೃಷ್ಣ ಮೊಗೇರ (40 ವರ್ಷ), ಸತೀಶ್ ಮೊಗೇರ (26 ವರ್ಷ), ಗಣೇಶ್ ಮೊಗೇರ (27 ವರ್ಷ), ಮತ್ತು ನಿಶ್ಚಿತ್ ಮೊಗೇರ (30 ವರ್ಷ) ಎಂಬವರು ನಾಪತ್ತೆ ಆಗಿದ್ದಾರೆ.

ಕರಾವಳಿ ಭದ್ರತಾ ಪಡೆ, ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಮೀನುಗಾರಿಕೆ ಇಲಾಖೆಯು ನಾಪತ್ತೆಯಾದ ಮೀನುಗಾರರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಜಿಲ್ಲೆಯಾದ್ಯಂತ ರೆಡ್‌ ಅಲರ್ಟ್‌ ಘೋಷಿಸಲಾಗಿತ್ತು. ಧಾರಾಕಾರ ಗಾಳಿ, ಮಳೆಯಿಂದಾಗಿ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿರುವುದೇ ಘಟನೆಗೆ ಕಾರಣ ಎನ್ನಲಾಗುತ್ತಿದೆ.

Also Read : ಪಿಎಂ ಕಿಸಾನ್ ಯೋಜನೆ : ಕರ್ನಾಟಕದ 5 ಲಕ್ಷ ರೈತರಿಗೆ ಸಿಗಲ್ಲ ಹಣ

Fishing boat capsizes in Bhatkal: Four fishermen missing Kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories