ಗೃಹಲಕ್ಷ್ಮಿ ಯೋಜನೆಯ 2000 ರೂ. ಹಣ ಬಂತಾ ? ಈ ಮೆಸೇಜ್‌ ಬಂದಿದ್ಯಾ ಒಮ್ಮೆ ಚೆಕ್‌ ಮಾಡಿ

ಗೃಹಲಕ್ಷ್ಮೀ ಯೋಜನೆಯ (Gruha Lakshmi Scheme) ಮೂಲಕ ಒಂದು ಕೋಟಿಗೂ ಅಧಿಕ ಮಹಿಳೆಯರು ಪ್ರತೀ ತಿಂಗಳು 2000 ರೂಪಾಯಿ ಹಣವನ್ನು ಪಡೆಯಲಿದ್ದಾರೆ. ಈಗಾಗಲೇ ಯೋಜನೆಗೆ ಚಾಲನೆ ದೊರೆತಿದ್ದು, ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಿದ್ರೆ ಮಸೇಜ್‌ ಬರುತ್ತೆ.

ಬೆಂಗಳೂರು : ಕರ್ನಾಟಕ ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರವು ಆಗಸ್ಟ್ 30 ರಂದು ಮೈಸೂರಿನಲ್ಲಿ ಗೃಹ ಲಕ್ಷ್ಮಿ ಯೋಜನೆಗೆ (Gruha Lakshmi Scheme) ಚಾಲನೆ ನೀಡಿದ್ದರು. ಯೋಜನೆಯ ಪ್ರಕಾರ, ರಾಜ್ಯದಲ್ಲಿ ವಾಸಿಸುವ ಕುಟುಂಬದ ಮೊದಲ ಮಹಿಳಾ ಸದಸ್ಯೆಯ ಬ್ಯಾಂಕ್‌ ಖಾತೆಗೆ (Bank Account) ಸರಕಾರದಿಂದ ಪ್ರತಿ ತಿಂಗಳಿಗೆ 2,000 ರೂ. ಜಮೆ ಮಾಡಲಾಗುತ್ತದೆ. ಸದ್ಯ ಗೃಹ ಲಕ್ಷ್ಮಿ ಯೋಜನೆಯಡಿ ನಿಮ್ಮ ಖಾತೆಗೆ ಹಣ ಜಮೆ (Gruha Lakshmi Money Deposit ) ಆಗಿದ್ಯಾ, ಇಲ್ಲವೇ ಎಂದು ಪರಿಶೀಲಿಸುವುದು ಹೇಗೆ ಎಂದು ಈ ಕೆಳಗೆ ತಿಳಿಸಲಾಗಿದೆ.

ರಾಜ್ಯ ಸರಕಾರದ ಅಂಕಿಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಸುಮಾರು 1.10 ಕೋಟಿ ಮಹಿಳೆಯರು ಗೃಹ ಲಕ್ಷ್ಮಿ ಯೋಜನೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಕರ್ನಾಟಕ ಸರ್ಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ‘ಗೃಹಲಕ್ಷ್ಮಿ’ ಕಾರ್ಯಕ್ರಮಕ್ಕೆ 17,500 ಕೋಟಿ ರೂ. ಮೀಸಲಿಡಲಾಗಿದೆ. ಮೇ ತಿಂಗಳಲ್ಲಿ ನಡೆದ 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ 5 ಭರವಸೆಗಳಲ್ಲಿ ಗೃಹ ಲಕ್ಷ್ಮಿ ಯೋಜನೆಯೂ ಒಂದಾಗಿದೆ.

ಇದನ್ನೂ ಓದಿ : ನಿಮ್ಮ ಮನೆ ಬಿಪಿಎಲ್ ಕಾರ್ಡ್ ನಲ್ಲಿ ಗಂಡಸರ ಹೆಸರಿದ್ಯಾ ? ಹಾಗಿದ್ದರೇ ನಿಮಗೆ ಸಿಗಲ್ಲ ಗೃಹಲಕ್ಷ್ಮೀ ಯೋಜನೆಯ 2000 ರೂ.

ಕಾಂಗ್ರೆಸ್ ಸರಕಾರವು ಚುನಾವಣಾ ಪೂರ್ವ ಐದು ಭರವಸೆಗಳ ಪೈಕಿ ಮೂರನ್ನು ‘ಶಕ್ತಿ ಯೋಜನೆ’, ‘ಗೃಹ ಜ್ಯೋತಿ ಯೋಜನೆ’ ಮತ್ತು ‘ಅನ್ನ ಭಾಗ್ಯ’ ಈಗಾಗಲೇ ಜಾರಿಗೆ ತಂದಿದೆ. ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕನೆಯದು ‘ಗೃಹ ಲಕ್ಷ್ಮಿ ಯೋಜನೆ’ ಆಗಿದ್ದು, ಈಗಾಗಲೇ ಅದಕ್ಕೂ ಚಾಲನೆ ನೀಡಲಾಗಿದೆ. ಐದನೆ ಯೋಜನೆಯಾದ ‘ಯುವ ನಿಧಿ’ಅಡಿಯಲ್ಲಿ ರಾಜ್ಯದ ಯುವಕರಿಗೆ ನಿರುದ್ಯೋಗ ಭತ್ಯೆ ನೀಡುವ ಭರವಸೆ ನೀಡಲಾಗಿದೆ.

Gruha Lakshmi Scheme Money Credited your Bank Account Chek Messge in Your Mobile
Image Credit to Original Source

ಗೃಹ ಲಕ್ಷ್ಮಿ ಯೋಜನೆಯ ನೋಂದಣಿ ಜುಲೈ 19 ರಂದು ಪ್ರಾರಂಭವಾಯಿತು. ಅಂತ್ಯೋದಯ, ಬಡತನ ರೇಖೆಗಿಂತ ಕೆಳಗಿರುವ (BPL), ಮತ್ತು ಬಡತನ ರೇಖೆಗಿಂತ ಮೇಲಿನ (APL) ಪಡಿತರ ಚೀಟಿಗಳಲ್ಲಿ ಕುಟುಂಬದ ಮುಖ್ಯಸ್ಥರೆಂದು ಪಟ್ಟಿ ಮಾಡಲಾದ ಮಹಿಳೆಯರು ಗೃಹ ಲಕ್ಷ್ಮಿ ಯೋಜನೆಗೆ ಅರ್ಹರಾಗಿರುತ್ತಾರೆ. ಒಂದು ಕುಟುಂಬದಲ್ಲಿ ಒಬ್ಬ ಮಹಿಳೆ ಮಾತ್ರ ಈ ಯೋಜನೆಯ ಫಲಾನುಭವಿಯಾಗುತ್ತಾರೆ.

ಇದನ್ನೂ ಓದಿ : ಶಕ್ತಿ ಯೋಜನೆ ರದ್ದು ಕೋರಿ ಅರ್ಜಿ : ಮಹಿಳೆಯರ ಉಚಿತ ಪ್ರಯಾಣದ ಬಗ್ಗೆ ಹೈಕೋರ್ಟ್‌ ಖಡಕ್‌ ವಾರ್ನಿಂಗ್‌ !

ಒಂದೊಮ್ಮೆ ನೀವು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿ ಆಗಿದ್ದರೆ, ನಿಮ್ಮ ಖಾತೆಗೆ ಹಣ ವರ್ಗಾವಣೆ ಆದ ಕೂಡಲೇ ಮೆಸೇಜ್‌ ಬರುತ್ತದೆ. ಈ ಮೆಸೇಜ್‌ ಬಂದಿಲ್ಲ ಎಂದಾದ್ರೆ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಲಿಲ್ಲ ಎಂದೇ ಅರ್ಥ. ಇನ್ನು ಅಗಸ್ಟ್‌ 15 ರ ಒಳಗಾಗಿ ನೀವು ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಸಿಕೊಂಡಿದ್ದರೆ ನಿಮ್ಮ ಖಾತೆಗೆ ಬಹುತೇಕ ಹಣ ವರ್ಗಾವಣೆ ಆಗಲಿದೆ.

ಗೃಹ ಲಕ್ಷ್ಮಿ ಯೋಜನೆಯ ಸ್ಟೇಟಸ್ ಪರಿಶೀಲಿಸಿ :

ಗೃಹ ಲಕ್ಷ್ಮಿ ಯೋಜನೆಗೆ ನೋಂದಾಯಿಸಿದವರು ತಮ್ಮ ಹೆಸರನ್ನು ನೋಂದಾಯಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿ ಸ್ಥಿತಿಯನ್ನು ಪರಿಶೀಲಿಸಬಹುದು. ಇದಕ್ಕಾಗಿ ಮುಂದಿನ ಹಂತಗಳನ್ನು ಅನುಸರಿಸಬೇಕಾಗಿದೆ.

  • ಮೊದಲು ಸೇವಾ ಸಿಂಧು sevasindhuservices.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
  • ನಿಮ್ಮ ಅಪ್ಲಿಕೇಶನ್ ಸ್ಥಿತಿಯನ್ನು ಪರಿಶೀಲಿಸಿ ಎಂಬ ಆಯ್ಕೆಯು ವೆಬ್‌ಸೈಟ್‌ನ ಮೊದಲ ಪುಟದಲ್ಲಿಯೇ ಕಾಣಿಸುತ್ತದೆ.
  • ನಿಮ್ಮ ಅಪ್ಲಿಕೇಶನ್ ಸಂಖ್ಯೆಯನ್ನು ನಮೂದಿಸಿ. ನೆನಪಿಡಿ, ನೀವು ಅರ್ಜಿ ಸಲ್ಲಿಸಿದಾಗ ಸ್ವೀಕರಿಸಿದ ಅಪ್ಲಿಕೇಶನ್ ಸಂಖ್ಯೆಯು ಅಪ್ಲಿಕೇಶನ್ ಸ್ಥಿತಿಯನ್ನು ಪರಿಶೀಲಿಸಲು ಸಹ ಅಗತ್ಯವಿದೆ.
  • ಚೆಕ್ ಸ್ಟೇಟಸ್ ನೌ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
  • ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಯಶಸ್ವಿಯಾಗಿದೆಯೇ ಅಥವಾ ಇಲ್ಲವೇ ಎಂಬ ಮಾಹಿತಿಯನ್ನು ಪಡೆಯಿರಿ. ಯಶಸ್ವಿಯಾದರೆ ಇಂದಿನಿಂದ 2 ಸಾವಿರ ರೂ. ಇದು ಇನ್ನೂ ಪ್ರಕ್ರಿಯೆ ಹಂತದಲ್ಲಿದ್ದರೆ ಈ ತಿಂಗಳು ನಿಮಗೆ ಈ ಹಣ ಸಿಗುವುದಿಲ್ಲ.

Gruha Lakshmi Scheme Money Credited your Bank Account Chek Messge in Your Mobile

Comments are closed.