40 ದಿನದಲ್ಲಿ 22 ಮಂದಿ ಹೃದಯಾಘಾತದಿಂದ ಸಾವು..!

Hassan heart attack cases : ಹಾಸನ : ಕಳೆದ 40 ದಿನಗಳ ಅವಧಿಯಲ್ಲಿ ಬರೋಬ್ಬರಿ 22 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿರುವ ಆತಂಕಕಾರಿ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಯುವ ಜನತೆ ಹೃದಯಾಘಾತಕ್ಕೆ ಬಲಿಯಾಗಿರೋದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.
ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಕಳೆದ 40 ದಿನಗಳಲ್ಲಿ 22 ಜನರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ಸಾವನ್ನಪ್ಪಿದ ಬಹುತೇಕರ ಪೈಕಿ ಯುವಕರು ಮತ್ತು ಮಧ್ಯವಯಸ್ಕರು (30 ರಿಂದ 55 ವರ್ಷ ವಯಸ್ಸಿನವರು). 19 ರಿಂದ 25 ವರ್ಷದೊಳಗಿನ ಐದು ಯುವಕರು ಮತ್ತು 25 ರಿಂದ 45 ವರ್ಷದೊಳಗಿನ ಎಂಟು ಮಂದಿ ಸಾವನ್ನಪ್ಪಿದ್ದಾರೆ.
Also Read : Innova car Accident :ಇನ್ನೋವಾ ಕಾರು ಪಲ್ಟಿ : ಐದು ಮಂದಿ ಸಾವು
Hassan heart attack : ಹೃದಯಾಘಾತ ಸಾವು : ತನಿಖೆಗೆ ಆದೇಶ
ಹಾಸನ ಜಿಲ್ಲೆಯಲ್ಲಿ ನಡೆದಿರುವ ಸರಣಿ ಸಾವುಗಳನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದೆ. ಮಾತ್ರವಲ್ಲ ಹೃದಯಾಘಾತದಿಂದ ಸಾವನ್ನಪ್ಪಿದವರ ಕುರಿತು ತನಿಖೆಗೆ ಆದೇಶ ಹೊರಡಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನದ ಮೇರೆಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ರವೀಂದ್ರನಾಥ್ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಅಲ್ಲದೇ, 10 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಈ ಸಮಿತಿಯು ಮರಣದ ಕಾರಣಗಳನ್ನು, ಅದರಲ್ಲಿ ಕೋವಿಡ್ ಲಸಿಕೆಯ ಸಂಭಾವ್ಯ ಸಂಪರ್ಕವನ್ನೂ ಸಹ ಪರಿಶೀಲಿಸಲಿದೆ. ತಜ್ಞರು ಮತ್ತು ವೈದ್ಯಕೀಯ ವರದಿಗಳ ಪ್ರಕಾರ, ಹೃದಯಾಘಾತ ಹೆಚ್ಚಳಕ್ಕೆ ಹಲವಾರು ಕಾರಣಗಳನ್ನು ಶಂಕಿಸಲಾಗಿದೆ.
Also Read : ಮಹಿಳೆಯರೇ.. ! ಲಿಪ್ಸ್ಟಿಕ್ ಖರೀದಿಸುವ ಮುನ್ನ ಗಮನಿಸಿ ? ಈ ಸಂಖ್ಯೆಗಿದೆ ವಿಶೇಷ ಕಾರಣ
Hassan heart attack : ಹೃದಯಾಘಾತಕ್ಕೆ ಕಾರಣವೇನು ?
- ಬದಲಾದ ಜೀವನಶೈಲಿ: ಆಧುನಿಕ ಜೀವನಶೈಲಿ, ಅನಿಯಮಿತ ನಿದ್ರೆ, ಅತಿಯಾದ ಒತ್ತಡ, ದೈಹಿಕ ಚಟುವಟಿಕೆಯ ಕೊರತೆ.
- ಆಹಾರ ಪದ್ಧತಿ: ಜಂಕ್ ಫುಡ್, ಅತಿ ಹೆಚ್ಚು ಕ್ಯಾಲೋರಿ ಇರುವ ಆಹಾರಗಳ ಸೇವನೆ.
- ವ್ಯಾಯಾಮದ ಕೊರತೆ: ನಿಯಮಿತ ವ್ಯಾಯಾಮ ಇಲ್ಲದಿರುವುದು.
- ಪರಿಸರ ಮಾಲಿನ್ಯ: ಹೆಚ್ಚುತ್ತಿರುವ ವಾಯು ಮತ್ತು ಜಲ ಮಾಲಿನ್ಯ.
- ಅನುವಂಶೀಯ ಕಾರಣಗಳು: ಕುಟುಂಬದಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಇತಿಹಾಸ.
- ಅನುಪಯುಕ್ತ ಔಷಧ ಸೇವನೆ/ದುಶ್ಚಟಗಳು: ಮದ್ಯಪಾನ ಮತ್ತು ಧೂಮಪಾನ.
ಇತರೆ ವೈದ್ಯಕೀಯ ಕಾರಣಗಳು: ಮಧುಮೇಹ, ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಇತ್ಯಾದಿಗಳ ನಿಯಂತ್ರಣ ಇಲ್ಲದಿರುವುದು.
ಹೃದಯಾಘಾತದಿಂದ ಸಾವನ್ನಪ್ಪಿದವರಲ್ಲಿ ಬಹುತೇಕರಿಗೆ ಯಾವುದೇ ಪೂರ್ವ ಆರೋಗ್ಯ ಸಮಸ್ಯೆಗಳು ಇರಲಿಲ್ಲ ಎಂಬುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಕೆಲವು ಪ್ರಕರಣಗಳಲ್ಲಿ ಮೃತಪಟ್ಟವರ ಪೋಷಕರಿಂದ ಮಗನ ಸಾವಿನ ಬಗ್ಗೆ ಅನುಮಾನಗಳನ್ನೂ ವ್ಯಕ್ತಪಡಿಸಲಾಗಿದೆ.
ಸರ್ಕಾರ ಮತ್ತು ಆರೋಗ್ಯ ಇಲಾಖೆಯ ಕ್ರಮಗಳು :
ರಾಜ್ಯ ಸರ್ಕಾರವು ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಹೃದಯಾಘಾತ ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.
ಆರೋಗ್ಯ ಇಲಾಖೆಯು ಶಾಲಾ ಕಾಲೇಜುಗಳಲ್ಲಿ ಹೃದಯದ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಆರೋಗ್ಯ ತಪಾಸಣೆಯನ್ನು ನಡೆಸಲು ಯೋಜಿಸುತ್ತಿದೆ.
ಹಾಸನದಲ್ಲಿನ ಈ ಸರಣಿ ಹೃದಯಾಘಾತ ಪ್ರಕರಣಗಳು ಇಡೀ ರಾಜ್ಯದಲ್ಲಿ ಆತಂಕ ಮೂಡಿಸಿದ್ದು, ಯುವ ಸಮುದಾಯ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವ ಅಗತ್ಯವನ್ನು ಎತ್ತಿ ತೋರಿಸಿವೆ.
Hassan heart attack cases 22 young aged death in 40 days in Kannada News



