ರಾಜ್ಯದಲ್ಲಿ ವರುಣನ ಆರ್ಭಟ ಕೊನೆಗೂ ಅಂತ್ಯ : ಕರ್ನಾಟಕದಾದ್ಯಂತ ಇನ್ಮುಂದೆ ಚಳಿಯ ಕಾಟ

ಇಷ್ಟು ದಿನ ಮಳೆಯ ಆರ್ಭಟಕ್ಕೆ ಕಂಗಲಾಗಿದ್ದ ರಾಜ್ಯದ ಜನತೆಗೆ ಈಗ ಚಳಿಯ ಕಾಟ ಶುರುವಾಗಿದೆ. ಸಂಪೂರ್ಣ ಕರ್ನಾಟಕದಲ್ಲಿ ಚಳಿಯ ವಾತಾವರಣ ಆರಂಭಗೊಂಡಿದ್ದು ರಾಜ್ಯದ ಜನತೆ ಸ್ವೆಟರ್​ ಹಾಕಿಕೊಂಡು ಚಳಿಯಿಂದ ಮುಕ್ತಿ ಯಾವಾಗ ಅಂತಾ ಕೇಳುವ ವಾತಾವರಣ ನಿರ್ಮಾಣವಾಗಿದೆ .

ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಇಡೀ ದಿನ ಮೋಡ ಮುಸುಕಿದ ವಾತಾವರಣ ಇರಲಿದೆ. ಇಂದು ಮಳೆಯ ಸಂಭವ ಇಲ್ಲ. ಆದರೆ ಸಂಜೆ ಬಳಿಕ ಇಬ್ಬನಿ ಬೀಳಲಿದೆ ಎನ್ನಲಾಗಿದೆ. ಸದ್ಯ ಬೆಂಗಳೂರಿನ ತಾಪಮಾನ 17 ಡಿಗ್ರಿ ಸೆಲ್ಸಿಯಸ್​ಗೆ ಕುಸಿತ ಕಂಡಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ : ಸರಕಾರ ವಿರುದ್ಧ ಮುಗಿಬೀಳಲು ಸಜ್ಜಾದ ಬಿಜೆಪಿ, ಜೆಡಿಎಸ್

ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡದಲ್ಲಿ ಇಂದು ಒಣಹವೆ ಇರಲಿದೆ. ದಕ್ಷಿಣ ಕರ್ನಾಟಕದಲ್ಲಿಯೂ ಮಂಜು ಕವಿದ ವಾತಾರವಣವೇ ಇರಲಿದ್ದು ರಾಜ್ಯದ ಯಾವುದೇ ಕಡೆಗಳಲ್ಲಿ ಮಳೆಯಾಗುವುದಿಲ್ಲ ಎಂದು ಐಎಂಡಿ ತಿಳಿಸಿದೆ.
ಉತ್ತರ ಕರ್ನಾಟಕದ ಜಿಲ್ಲೆಗಳಾದ ಧಾರವಾಡ, ಹುಬ್ಬಳ್ಳಿ, ಗದಗ, ಹಾವೇರಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಕಲಬುರಗಿ, ರಾಯಚೂರು, ಬೀದರ್ ಮತ್ತು ಕೊಪ್ಪಳದಲ್ಲಿ ವಾತಾವರಣವು ಬೆಳಿಗ್ಗೆ ಒಣ ಹವೆಯಿಂದ ಕೂಡಿದರೆ ರಾತ್ರಿ ಹಾಗೂ ಬೆಳಿಗ್ಗೆ ಮಂಜು ಕವಿದ ವಾತಾವರಣವಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories