Google Pixel 10 : ಐಪೋನ್ ಬಿಟ್ಟು ಗೂಗಲ್ ಫಿಕ್ಸೆಲ್ 10 ಖರೀದಿಗೆ ಮುಂದಾದ ಜನ : ಅಷ್ಟಕ್ಕೂ ಇದರಲ್ಲಿ ಏನಿದೆ ಫೀಚರ್ಸ್
ಗೂಗಲ್ ಫಿಕ್ಸೆಲ್ 10 ( Google Pixel 10 ) ಬಗ್ಗೆ ಕೇಳಿಬರುತ್ತಿರುವ ಸುದ್ದಿಗಳು ಸ್ಮಾರ್ಟ್‌ಫೋನ್ ಪ್ರೇಮಿಗಳಲ್ಲಿ ಹೊಸ ಸಂಚಲನ ಮೂಡಿಸಿವೆ. ಗೂಗಲ್ ತನ್ನ 10ನೇ ಸರಣಿಯ ಮೂಲಕ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದೆ.

Google Pixel : ತಂತ್ರಜ್ಞಾನದ ಜಗತ್ತಿನಲ್ಲಿ ಪ್ರತಿವರ್ಷ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಆದರೆ, ಈ ಬಾರಿ ಗೂಗಲ್ ಫಿಕ್ಸೆಲ್ 10 ( Google Pixel 10 ) ಬಗ್ಗೆ ಕೇಳಿಬರುತ್ತಿರುವ ಸುದ್ದಿಗಳು ಸ್ಮಾರ್ಟ್‌ಫೋನ್ ಪ್ರೇಮಿಗಳಲ್ಲಿ ಹೊಸ ಸಂಚಲನ ಮೂಡಿಸಿವೆ. ಗೂಗಲ್ ತನ್ನ 10ನೇ ಸರಣಿಯ ಮೂಲಕ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದೆ. ಹಾಗಾದರೆ ಈ ಪಿಕ್ಸೆಲ್ 10 ನಲ್ಲಿ ಅಂತಹ ವಿಶೇಷತೆ ಏನಿದೆ ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
ಗೂಗಲ್ ಫಿಕ್ಸೆಲ್ 10 : ಸ್ವಂತ ಶಕ್ತಿಯ ‘Tensor G5’ ಚಿಪ್‌ಸೆಟ್
ಈವರೆಗೆ ಗೂಗಲ್ ತನ್ನ ಚಿಪ್‌ಗಳ ತಯಾರಿಕೆಗೆ ಸ್ಯಾಮ್‌ಸಂಗ್ ಮೇಲೆ ಅವಲಂಬಿತವಾಗಿತ್ತು. ಆದರೆ ಗೂಗಲ್ ಫಿಕ್ಸೆಲ್ 10 (Google Pixel 10) ನಲ್ಲಿ ಮೊದಲ ಬಾರಿಗೆ ಸಂಪೂರ್ಣವಾಗಿ ಗೂಗಲ್ ವಿನ್ಯಾಸಗೊಳಿಸಿದ, TSMC ತಯಾರಿಸಿದ Tensor G5 ಪ್ರೊಸೆಸರ್ ಇರಲಿದೆ. ಇದು ಫೋನ್‌ನ ವೇಗವನ್ನು ಹೆಚ್ಚಿಸುವುದಲ್ಲದೆ, ಬ್ಯಾಟರಿ ಉಳಿತಾಯ ಮತ್ತು ಅತಿಯಾದ ಬಿಸಿಯಾಗುವಿಕೆಯನ್ನು (Overheating) ತಡೆಯುತ್ತದೆ.
Google Pixel 10 : ಕ್ಯಾಮೆರಾ ಲೋಕದ ಮಾಂತ್ರಿಕ
ಪಿಕ್ಸೆಲ್ ಫೋನ್‌ಗಳೆಂದರೆ ಮೊದಲು ನೆನಪಾಗುವುದೇ ಅದರ ಕ್ಯಾಮೆರಾ. ಪಿಕ್ಸೆಲ್ 10 ನಲ್ಲಿ 48MP ಮುಖ್ಯ ಕ್ಯಾಮೆರಾ ಜೊತೆಗೆ ಮೊದಲ ಬಾರಿಗೆ ಸಾಮಾನ್ಯ ಮಾಡೆಲ್‌ನಲ್ಲೂ Telephoto ಲೆನ್ಸ್ ನೀಡಲಾಗುತ್ತಿದೆ. ಇದರೊಂದಿಗೆ AI ಆಧಾರಿತ ‘Magic Cue’ ಮತ್ತು ‘Pixelsnap’ ಫೀಚರ್‌ಗಳು ಫೋಟೋ ಎಡಿಟಿಂಗ್ ಅನ್ನು ವೃತ್ತಿಪರ ಮಟ್ಟಕ್ಕೆ ಕೊಂಡೊಯ್ಯಲಿವೆ. ಕತ್ತಲೆಯಲ್ಲಿ ತೆಗೆಯುವ ಆಸ್ಟ್ರೋಫೋಟೋಗ್ರಫಿ ಈಗ ಮತ್ತಷ್ಟು ಸ್ಪಷ್ಟವಾಗಿರಲಿದೆ.
ಇದನ್ನೂ ಓದಿ : Vivo T5 Pro 5G : ವಿವೋ ಟಿ5 ಪ್ರೋ 5ಜಿ ಒಂದಲ್ಲ ಎರಡಲ್ಲ.. ಬರೋಬ್ಬರಿ 9020mAh ಬ್ಯಾಟರಿ ! ಬೆಲೆ ಎಷ್ಟು ಗೊತ್ತಾ ?
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಅಬ್ಬರ
ಗೂಗಲ್‌ನ ‘Gemini Nano’ ಮಾದರಿಯು ಈ ಫೋನ್‌ನಲ್ಲಿ 2.6 ಪಟ್ಟು ವೇಗವಾಗಿ ಕೆಲಸ ಮಾಡಲಿದೆ. ‘Pixel Sense’ ಎನ್ನುವ ಹೊಸ ಫೀಚರ್ ನಿಮ್ಮ ಮೆಸೇಜ್, ಕ್ಯಾಲೆಂಡರ್ ಮತ್ತು ಗೂಗಲ್ ಮ್ಯಾಪ್‌ಗಳನ್ನು ಅರ್ಥ ಮಾಡಿಕೊಂಡು ನಿಮಗೆ ಬೇಕಾದ ಮಾಹಿತಿಯನ್ನು ಕೇಳುವ ಮುನ್ನವೇ ನೀಡುತ್ತದೆ. ನಿಮ್ಮ ಧ್ವನಿಯಲ್ಲೇ ಭಾಷಾಂತರ ಮಾಡುವ (Live Translate) ಸೌಲಭ್ಯ ಕೂಡ ಇದರಲ್ಲಿದೆ.
Google Pixel 10 : ವಿನ್ಯಾಸ ಮತ್ತು ಡಿಸ್‌ಪ್ಲೇ
ಪಿಕ್ಸೆಲ್ 10 ಪ್ರೀಮಿಯಂ ಲುಕ್ ಹೊಂದಿರಲಿದ್ದು, 3,000 nits ಬ್ರೈಟ್‌ನೆಸ್ ಹೊಂದಿರುವ ಅಲ್ಟ್ರಾ-ಬ್ರೈಟ್ ಡಿಸ್‌ಪ್ಲೇಯನ್ನು ಹೊಂದಿರುತ್ತದೆ. ಇದರಿಂದ ಬಿರು ಬಿಸಿಲಿನಲ್ಲಿಯೂ ಸ್ಕ್ರೀನ್ ಸ್ಪಷ್ಟವಾಗಿ ಕಾಣಿಸುತ್ತದೆ. ಆಕರ್ಷಕವಾದ ‘Obsidian’, ‘Indigo’ ಮತ್ತು ‘Frost’ ಬಣ್ಣಗಳಲ್ಲಿ ಇದು ಲಭ್ಯವಿರಲಿದೆ.
ಇದನ್ನೂ ಓದಿ : AI ಫೇಸ್ ಅನ್‌ಲಾಕ್ ಭದ್ರತೆಯ ರೆಡ್ಮಿ ನೋಟ್ ವಿಶೇಷ ಆವೃತ್ತಿ 15 SE 5G ಮಾರಾಟ ಪ್ರಾರಂಭ: ಬೆಲೆ, ಲಭ್ಯತೆ ಹೀಗಿದೆ
ನೀವು ಕೇವಲ ಒಂದು ಫೋನ್‌ಗಿಂತ ಹೆಚ್ಚಾಗಿ, ಅತ್ಯಾಧುನಿಕ AI ತಂತ್ರಜ್ಞಾನ ಮತ್ತು ಅದ್ಭುತ ಕ್ಯಾಮೆರಾ ಬಯಸುವವರಾಗಿದ್ದರೆ Google Pixel 10 ಗಾಗಿ ಕಾಯಲೇಬೇಕು. ಇದು ಆಂಡ್ರಾಯ್ಡ್ ಜಗತ್ತಿನ ಹೊಸ ‘ಕಿಂಗ್’ ಆಗುವುದರಲ್ಲಿ ಸಂಶಯವಿಲ್ಲ.
google pixel 10 launch features and camera updates kannada



