ಗೂಗಲ್ ಪಿಕ್ಸೆಲ್ 10 ಪ್ರೊ : ಅತ್ಯಾಧುನಿಕ ಫೀಚರ್ಸ್, ಬೆಲೆ ಎಷ್ಟು ?

Google Pixel 10 Pro : ಗೂಗಲ್ ಪಿಕ್ಸೆಲ್ 10 ಸರಣಿಯಲ್ಲಿ ಎರಡು ವಿನ್ಯಾಸದ ಮೊಬೈಲ್‌ಗಳನ್ನು ಮಾರುಕಟ್ಟೆ ಬಿಡುಗಡೆ ಮಾಡಿದೆ. ಅತ್ಯಾಧುನಿಕ ಫೀಚರ್ಸ್ ಜೊತೆಗೆ ಬಿಡುಗಡೆ ಆಗಲಿದೆ. ಆದ್ರೆ ಗೂಗಲ್ ಪಿಕ್ಸೆಲ್ 10 ಪ್ರೊ, ಪಿಕ್ಸೆಲ್ 10 5G ಬಿಡುಗಡೆಗೆ ಮುನ್ನವೇ ಗ್ರಾಹಕರಿಗೆ ಗಮನ ಸೆಳೆದಿದೆ.
ಗೂಗಲ್ ಪಿಕ್ಸೆಲ್ 10 ಸರಣಿಯಲ್ಲಿ ಇಂದು ಪಿಕ್ಸೆಲ್ 10, ಪಿಕ್ಸೆಲ್ 10 ಪ್ರೊ, ಪಿಕ್ಸೆಲ್ 10 ಪ್ರೊ ಎಕ್ಸ್‌ಎಲ್, ಮತ್ತು ಪಿಕ್ಸೆಲ್ 10 ಪ್ರೊ ಫೋಲ್ಡ್ ಮಾದರಿಯಲ್ಲಿ ಮೊಬೈಲ್ ಬಿಡುಗಡೆ ಆಗಲಿದೆ. ಆದರೆ ಗೂಗಲ್ ಇದನ್ನು ದೃಢಪಡಿಸಿದೆ.
ವೇಗದ ಚಾರ್ಜಿಂಗ್ ವ್ಯವಸ್ಥೆಯನ್ನು ನೀಡಲಾಗಿದೆ. ಗೂಗಲ್ ಪಿಕ್ಸೆಲ್ ವಾಚ್ 4, ಪಿಕ್ಸೆಲ್ ಸ್ನ್ಯಾಪ್ ರಿಂಗ್ ಸ್ಟ್ಯಾಂಡ್, ಪಿಕ್ಸೆಲ್ ಫ್ಲೆಕ್ಸ್ 67W ಚಾರ್ಜರ್ ಹೊಂದಿರಲಿದೆ. ಬಿಡುಗಡೆಗೆ ಮೊದಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೊಸ ಪಿಕ್ಸೆಲ್ 10 ಸರಣಿಯಲ್ಲಿ ಪಿಕ್ಸೆಲ್ 10, ಪಿಕ್ಸೆಲ್ 10 ಪ್ರೊ, ಪಿಕ್ಸೆಲ್ 10 ಪ್ರೊ ಎಕ್ಸ್‌ಎಲ್, ಮತ್ತು ಪಿಕ್ಸೆಲ್ 10 ಪ್ರೊ ಫೋಲ್ಡ್. ಭಾರತದಲ್ಲಿ ಈ ಫೋನ್‌ಗಳು ಆಗಸ್ಟ್ 21 ರಂದು ಲಭ್ಯವಾಗಲಿದೆ ಎಂದು ಗೂಗಲ್ ದೃಢಪಡಿಸಿದೆ.
ಈ ಹೊಸ ಫೋನ್‌ಗಳು ಗೂಗಲ್‌ನ Tensor G5 ಚಿಪ್‌ಸೆಟ್ ಅನ್ನು ಒಳಗೊಂಡಿದ್ದು, ಇದರಲ್ಲಿ ಕೃತಕ ಬುದ್ಧಿಮತ್ತೆ (AI) ವೈಶಿಷ್ಟ್ಯಗಳು ಹೆಚ್ಚಿರಲಿವೆ. ಗೂಗಲ್ ಹೊಸ ಪೋನ್ ಅತ್ಯುತ್ತಮ ಕ್ಯಾಮರಾ ಒಳಗೊಂಡಿದೆ.
ಇದನ್ನೂ ಓದಿ :/ಐಪೋನ್ 16 ಖರೀದಿಯ ಮೇಲೆ 20 ಸಾವಿರ ಡಿಸ್ಕೌಂಟ್
ಅತೀ ಹೆಚ್ಚು ಬ್ಯಾಟರ್ ಬ್ಯಾಕ್ ಅಪ್‌ಗಾಗಿ ಬ್ಯಾಟರಿ ಸಾಮರ್ಥ್ಯ ಮತ್ತು ನವೀಕರಿಸಿದ Android 16 ಆಪರೇಟಿಂಗ್ ಸಿಸ್ಟಂ ಅನ್ನು ನಿರೀಕ್ಷಿಸಬಹುದು. ಈ ಬೆಲೆಗಳು ಅಧಿಕೃತ ಬಿಡುಗಡೆ ನಂತರ ದೃಢಪಡಲಿದೆ.
ಗೂಗಲ್ ಕಂಪೆನಿ ಎಕ್ಸೆಲ್ 10 ಸರಣಿಯನ್ನು ಇಂದು (ಆಗಸ್ಟ್ 20, 2025) ಜಾಗತಿಕವಾಗಿ ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ ಪಿಕ್ಸೆಲ್ 10, ಪಿಕ್ಸೆಲ್ 10 ಪ್ರೊ, ಪಿಕ್ಸೆಲ್ 10 ಪ್ರೊ ಎಕ್ಸ್‌ಎಲ್ ಮತ್ತು ಪಿಕ್ಸೆಲ್ 10 ಪ್ರೊ ಫೋಲ್ಡ್ ಮಾದರಿಗಳು ಸೇರಿವೆ.
ಗೂಗಲ್ ಪಿಕ್ಸೆಲ್ 10 ಪ್ರೊ ಪ್ರಮುಖ ವೈಶಿಷ್ಟ್ಯಗಳು
ಡಿಸ್‌ಪ್ಲೇ: ಪಿಕ್ಸೆಲ್ 10 ಪ್ರೊ 6.7 ಇಂಚಿನ LTPO OLED ಡಿಸ್‌ಪ್ಲೇಯನ್ನು ಹೊಂದಿದ್ದು, ಇದು 1440p ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್ ನೀಡುತ್ತದೆ. ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಹೊಂದಿದೆ.
ಪ್ರೊಸೆಸರ್: ಹೊಸ Tensor G5 ಚಿಪ್‌ಸೆಟ್ ಅನ್ನು ಬಳಸಲಾಗಿದೆ. ಈ ಚಿಪ್‌ಸೆಟ್ ಕೃತಕ ಬುದ್ಧಿಮತ್ತೆ (AI) ಆಧಾರಿತ ವೈಶಿಷ್ಟ್ಯಗಳನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಭದ್ರತೆಗಾಗಿ Titan M2 ಸಹ-ಪ್ರೊಸೆಸರ್ ಅನ್ನು ಸಹ ಸೇರಿಸಲಾಗಿದೆ.
ಕ್ಯಾಮೆರಾ: ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 50MP ಮುಖ್ಯ ಕ್ಯಾಮೆರಾ, 48MP ಅಲ್ಟ್ರಾ-ವೈಡ್ ಕ್ಯಾಮೆರಾ, ಮತ್ತು 48MP ಟೆಲಿಫೋಟೋ ಲೆನ್ಸ್ (5x ಆಪ್ಟಿಕಲ್ ಝೂಮ್) ಇರಲಿದೆ.
ಇದನ್ನೂ ಓದಿ : ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲ್ಯಾನ್ ಪರಿಚಯಿಸಿದ ಜಿಯೋ
ಮುಂಭಾಗದಲ್ಲಿ 42MP ಸೆಲ್ಫಿ ಕ್ಯಾಮೆರಾ ಇದೆ. ಹೊಸ ವೈಶಿಷ್ಟ್ಯಗಳಾದ ‘ಪೋರ್ಟ್ರೇಟ್ ಬ್ಲರ್’, ‘ಮ್ಯಾಜಿಕ್ ಎರೇಸರ್’, ಮತ್ತು ‘ಝೂಮ್ ಎನ್ಹಾನ್ಸ್’ AI ಕ್ಯಾಮೆರಾ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ.
ಬ್ಯಾಟರಿ ಮತ್ತು ಚಾರ್ಜಿಂಗ್: ಪಿಕ್ಸೆಲ್ 10 ಪ್ರೊ 4,870mAh ಬ್ಯಾಟರಿಯನ್ನು ಹೊಂದಿದ್ದು, ಇದು 30W ವೇಗದ ವೈರ್ಡ್ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ (Qi2) ಬೆಂಬಲಿಸುತ್ತದೆ.
ಮೆಮೊರಿ ಮತ್ತು ಸಂಗ್ರಹಣೆ: ಇದು 16GB RAM ಮತ್ತು 128GB, 256GB, 512GB, ಮತ್ತು 1TB ಸಂಗ್ರಹಣಾ ಆಯ್ಕೆಗಳಲ್ಲಿ ಲಭ್ಯವಿದೆ.
ಇತರ ವೈಶಿಷ್ಟ್ಯಗಳು: ಫೋನ್ ಆಂಡ್ರಾಯ್ಡ್ 16 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಬರುತ್ತದೆ ಮತ್ತು ಗೂಗಲ್ 7 ವರ್ಷಗಳ ಓಎಸ್ ಮತ್ತು ಸೆಕ್ಯೂರಿಟಿ ಅಪ್‌ಡೇಟ್‌ಗಳನ್ನು ಒದಗಿಸುವುದಾಗಿ ಭರವಸೆ ನೀಡಿದೆ.
Google Pixel 10 Pro : ಭಾರತದಲ್ಲಿನ ಬೆಲೆ
- ಗೂಗಲ್ ಪಿಕ್ಸೆಲ್ 10: ₹79,999 ರಿಂದ ಪ್ರಾರಂಭ.
- ಗೂಗಲ್ ಪಿಕ್ಸೆಲ್ 10 ಪ್ರೊ: ₹1,09,999 ರಿಂದ ಪ್ರಾರಂಭ.
- ಗೂಗಲ್ ಪಿಕ್ಸೆಲ್ 10 ಪ್ರೊ ಎಕ್ಸ್‌ಎಲ್: ₹1,24,999 ರಿಂದ ಪ್ರಾರಂಭ.
ಭಾರತದಲ್ಲಿ ಈ ಫೋನ್‌ಗಳು ಫ್ಲಿಪ್‌ಕಾರ್ಟ್, ರಿಲಯನ್ಸ್ ಡಿಜಿಟಲ್ ಮತ್ತು ಕ್ರೋಮಾ ಮೂಲಕ ಆಗಸ್ಟ್ 21 ರಿಂದ ಲಭ್ಯವಾಗಲಿದೆ. ಗೂಗಲ್ ಸ್ಟೋರ್‌ನಲ್ಲಿ ಪೂರ್ವ-ಆರ್ಡರ್‌ಗಳು ಲೈವ್ ಆಗಿವೆ.
Google Pixel 10 Pro : Advanced Features, What is the Price ?



