ಸ್ಯಾಮ್ಸಂಗ್ ಗ್ಯಾಲಕ್ಸಿ S24 Ultra ಬೆಲೆಯಲ್ಲಿ ಬಾರೀ ಇಳಿಕೆ : ಬೆಲೆ ಕೇಳಿದ್ರೆ ಸುಸ್ತಾಗೋದು ಫಕ್ಕಾ

Samsung Galaxy S24 Ultra : ಸ್ಯಾಮ್ಸಂಗ್ ಕಂಪೆನಿ ಬಿಡುಗಡೆ ಮಾಡಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್24 ಆಲ್ಟ್ರಾ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ನಡುವಲ್ಲೇ ಗ್ರಾಹರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಫೋನಿನ ಬೆಲೆಯಲ್ಲಿ ಬಾರೀ ಇಳಿಕೆ ಕಂಡು ಬಂದಿದೆ.
ಫೋನ್ ಬಿಡುಗಡೆಯಾದಾಗ ಇದ್ದ ಬೆಲೆಗೆ ಹೋಲಿಸಿದರೆ, ಇದೀಗ ₹45,000 ರಿಂದ ₹50,000 ವರೆಗೆ ಬೆಲೆ ಇಳಿಕೆಯಾಗಿದೆ. ಜೊತೆಗೆ ವಿವಿಧ ಬ್ಯಾಂಕ್ ಕಾರ್ಡ್ಗಳು ಮತ್ತು ಎಕ್ಸ್ಚೇಂಜ್ ಆಫರ್ ಘೋಷಿಸಿವೆ. ಇದನ್ನು ಬಳಸಿಕೊಂಡ್ರೆ ಇನ್ನಷ್ಟು ಲಾಭ ದೊರೆಯುವುದು ಖಚಿತ.
Samsung Galaxy S24 Ultra ಆರಂಭಿಕ ಬೆಲೆ: 12GB RAM ಮತ್ತು 256GB ಸ್ಟೋರೇಜ್ ಮಾದರಿಯು ₹1,29,999 ಬೆಲೆಗೆ ಬಿಡುಗಡೆಯಾಗಿತ್ತು.
ಇತ್ತೀಚಿನ ಬೆಲೆ: ಪ್ರಸ್ತುತ, ಈ ಮಾದರಿ ₹80,000 ಕ್ಕಿಂತ ಕಡಿಮೆ ಬೆಲೆಗೆ ಇ-ಕಾಮರ್ಸ್ ವೆಬ್ಸೈಟ್ಗಳಲ್ಲಿ ಲಭ್ಯವಿದೆ.
ಸ್ಯಾಮ್ಸಂಗ್ನ ಗ್ಯಾಲಕ್ಸಿ ಎಸ್ 24 ಅಲ್ಟ್ರಾ ಸ್ಮಾರ್ಟ್ಫೋನ್ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಗ್ಯಾಲಕ್ಸಿ ಎಐ (Galaxy AI) ಅನ್ನೋ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.
ಈ ತಂತ್ರಜ್ಞಾನವು ಗ್ರಾಹಕರ ಗಮನ ಸೆಳೆದಿದೆ. ಭಾರತದಲ್ಲಿ ಈ ಫೋನ್ನ ಬೆಲೆ ವಿವಿಧ ಸ್ಟೋರೇಜ್ ಮತ್ತು ಮೆಮೊರಿ ಆಯ್ಕೆಗಳಿಗೆ ಅನುಗುಣವಾಗಿ ಬದಲಾಗುತ್ತದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 24 ಅಲ್ಟ್ರಾ ಫೋನ್ನ ಮೂಲ ಬೆಲೆಗಳು ಹೀಗಿವೆ:
- 12GB RAM ಮತ್ತು 256GB ಸ್ಟೋರೇಜ್: ₹1,29,999
- 12GB RAM ಮತ್ತು 512GB ಸ್ಟೋರೇಜ್: ₹1,39,999
- 12GB RAM ಮತ್ತು 1TB ಸ್ಟೋರೇಜ್: ₹1,59,999
ಈ ಬೆಲೆಗಳು ಫೋನ್ ಬಿಡುಗಡೆಯಾದಾಗ ಇದ್ದವು. ಪ್ರಸ್ತುತ, ಆನ್ಲೈನ್ ಮಾರಾಟದ ವೇದಿಕೆಗಳಾದ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ನಲ್ಲಿ ವಿಶೇಷ ರಿಯಾಯಿತಿಗಳು ಲಭ್ಯವಿದೆ.
ಇದನ್ನೂ ಓದಿ : ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತೆ ಈ ಮೊಬೈಲ್ ರಿಚಾರ್ಜ್..!
ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 24 ಅಲ್ಟ್ರಾ ಪ್ರಮುಖ ವೈಶಿಷ್ಟ್ಯಗಳು:

- 6.8 ಇಂಚಿನ ಡೈನಾಮಿಕ್ AMOLED ಡಿಸ್ಪ್ಲೇ
- 200MP ಕ್ವಾಡ್ ಕ್ಯಾಮೆರಾ ಸೆಟಪ್
- ಶಕ್ತಿಶಾಲಿ ಸ್ನಾಪ್ಡ್ರಾಗನ್ 8 Gen 3 ಪ್ರೊಸೆಸರ್
- Galaxy AI ವೈಶಿಷ್ಟ್ಯಗಳು ಮತ್ತು 7 ವರ್ಷಗಳ ಸಾಫ್ಟ್ವೇರ್ ಅಪ್ಡೇಟ್ಗಳು.
ಇದನ್ನೂ ಓದಿ : ರಿಯಲ್ ಮೀ 15 ಪ್ರೋ ಬೆಲೆ ಎಷ್ಟು ಗೊತ್ತಾ ?
ಗ್ಯಾಲಕ್ಸಿ ಎಸ್25 ಸರಣಿಯ ಬಿಡುಗಡೆಯ ನಂತರ, ಎಸ್24 ಅಲ್ಟ್ರಾ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದ್ದು, ಉತ್ತಮ ಕಾರ್ಯಕ್ಷಮತೆಯ ಫೋನ್ ಹುಡುಕುತ್ತಿರುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.
Samsung Galaxy S24 Ultra price Huge Discount Kannada News



