Vivo T5 Pro 5G : ವಿವೋ ಟಿ5 ಪ್ರೋ 5ಜಿ ಒಂದಲ್ಲ ಎರಡಲ್ಲ.. ಬರೋಬ್ಬರಿ 9020mAh ಬ್ಯಾಟರಿ ! ಬೆಲೆ ಎಷ್ಟು ಗೊತ್ತಾ ?
ವಿವೋ ಟಿ5 ಪ್ರೋ 5ಜಿ ಸ್ಮಾರ್ಟ್‌ಪೋನ್‌ನಲ್ಲಿ ಹೊಸ ತಲೆಮಾರಿನ Qualcomm Snapdragon 7s Gen 4 ಪ್ರೊಸೆಸರ್ ಬಳಸಲಾಗಿದೆ. ಅಷ್ಟೇ ಅಲ್ಲದೆ, ಗೇಮಿಂಗ್ ಸಮಯದಲ್ಲಿ ಫೋನ್ ಬಿಸಿಯಾಗದಂತೆ ತಡೆಯಲು 7000mm² ವೇಪರ್ ಕೂಲಿಂಗ್ ಚೇಂಬರ್ ತಂತ್ರಜ್ಞಾನ ನೀಡಲಾಗಿದೆ.

ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ವಿವೋ ಕಂಪೆನಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ತನ್ನ ಪವರ್‌ಫುಲ್ ‘ಟರ್ಬೊ’ ಸರಣಿಯಲ್ಲಿ ಬಹುನಿರೀಕ್ಷಿತ ವಿವೋ ಟಿ5 ಪ್ರೋ 5ಜಿ ( Vivo T5 Pro 5G) ಸ್ಮಾರ್ಟ್‌ಫೋನ್ ಎಪ್ರಿಲ್ 15ಕ್ಕೆ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಈ ಪೋನ್ ಸದ್ಯ ತನ್ನ ಫೀಚರ್ಸ್‌ಗಳ ಮೂಲಕ ಮೊಬೈಲ್ ಪ್ರಿಯರ ನಿದ್ದೆಗೆಡಿಸಿದೆ.
9020mAh ಬ್ಯಾಟರಿ ಸಾಮರ್ಥ್ಯವೇ ಇದರ ಪ್ಲಸ್ ಪಾಯಿಂಟ್
ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ಗಳಲ್ಲಿ 5000mAh ಅಥವಾ 6000mAh ಬ್ಯಾಟರಿ ಇರೋದು ಸರ್ವೇ ಸಾಮಾನ್ಯ. ಆದರೆ ವಿವೋ ಒಂದು ಹೆಜ್ಜೆ ಮುಂದೆ ಹೋಗಿ ಈ ಫೋನಿನಲ್ಲಿ 9020mAh ಬೃಹತ್ ಬ್ಯಾಟರಿಯನ್ನು ಅಳವಡಿಸಿದೆ. ಇಷ್ಟೊಂದು ದೊಡ್ಡ ಬ್ಯಾಟರಿ ಇದ್ದರೂ ಸಹ, ಈ ಫೋನ್ ಕೇವಲ 8.25mm ನಷ್ಟು ಸ್ಲಿಮ್ ಆಗಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಒಮ್ಮೆ ಚಾರ್ಜ್ ಮಾಡಿದರೆ ಸತತ 12 ಗಂಟೆಗಳ ಕಾಲ ಗೇಮಿಂಗ್ ಅಥವಾ 90 ಗಂಟೆಗಳ ಕಾಲ ಮ್ಯೂಸಿಕ್ ಆಸ್ವಾದಿಸಬಹುದಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ.
Also read : AI ಫೇಸ್ ಅನ್‌ಲಾಕ್ ಭದ್ರತೆಯ ರೆಡ್ಮಿ ನೋಟ್ ವಿಶೇಷ ಆವೃತ್ತಿ 15 SE 5G ಮಾರಾಟ ಪ್ರಾರಂಭ: ಬೆಲೆ, ಲಭ್ಯತೆ ಹೀಗಿದೆ
ಗೇಮರುಗಳಿಗಾಗಿ ಹೈ-ಸ್ಪೀಡ್ ಪರ್ಫಾರ್ಮೆನ್ಸ್
ವಿವೋ ಟಿ5 ಪ್ರೋ 5ಜಿ ಸ್ಮಾರ್ಟ್‌ಪೋನ್‌ನಲ್ಲಿ ಹೊಸ ತಲೆಮಾರಿನ Qualcomm Snapdragon 7s Gen 4 ಪ್ರೊಸೆಸರ್ ಬಳಸಲಾಗಿದೆ. ಅಷ್ಟೇ ಅಲ್ಲದೆ, ಗೇಮಿಂಗ್ ಸಮಯದಲ್ಲಿ ಫೋನ್ ಬಿಸಿಯಾಗದಂತೆ ತಡೆಯಲು 7000mm² ವೇಪರ್ ಕೂಲಿಂಗ್ ಚೇಂಬರ್ ತಂತ್ರಜ್ಞಾನ ನೀಡಲಾಗಿದೆ. ಇದು BGMI ಮತ್ತು Call of Duty ನಂತಹ ಗೇಮ್‌ಗಳನ್ನು 120FPS ವೇಗದಲ್ಲಿ ಸುಗಮವಾಗಿ ಆಡಲು ಅನುವು ಮಾಡಿಕೊಡುತ್ತದೆ.
ವಿವೋ ಟಿ5 ಪ್ರೋ 5ಜಿ : ಡಿಸ್‌ಪ್ಲೇ ಮತ್ತು ಸಾಫ್ಟ್‌ವೇರ್
ವಿವೋ ಟಿ5 ಪ್ರೋ 5ಜಿ 6.8-ಇಂಚಿನ 1.5K AMOLED ಡಿಸ್‌ಪ್ಲೇ ಇರಲಿದ್ದು, 144Hz ರಿಫ್ರೆಶ್ ರೇಟ್ ಹೊಂದಿರಲಿದೆ. ಇದು ಲೇಟೆಸ್ಟ್ Android 16 ಹಾಗೂ ವಿವೋದ ಪವರ್‌ಫುಲ್ OriginOS 6 ನಲ್ಲಿ ಕಾರ್ಯನಿರ್ವಹಿಸಲಿದೆ.
Also Read : ಸ್ಯಾಮ್‌ಸಂಗ್ ಪ್ರಿಯರಿಗೆ ಬಂಪರ್ ಆಫರ್: ಗ್ಯಾಲಕ್ಸಿ S26 ಅಲ್ಟ್ರಾ ಭರ್ಜರಿ ಡಿಸ್ಕೌಂಟ್
ಕ್ಯಾಮೆರಾ ಮತ್ತು ವಿನ್ಯಾಸ
ಫೋಟೋಗ್ರಫಿಗಾಗಿ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ನೀಡಲಾಗಿದ್ದು, 50MP ಮುಖ್ಯ ಕ್ಯಾಮೆರಾ ಇರಲಿದೆ ಎಂದು ಮೂಲಗಳು ತಿಳಿಸಿವೆ. ಇದು ಗ್ಲೇಸಿಯರ್ ಬ್ಲೂ ಮತ್ತು ಕಾಸ್ಮಿಕ್ ಬ್ಲಾಕ್ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿರಲಿದೆ.
Vivo T5 Pro 5G ಸ್ಮಾರ್ಟ್‌ಫೋನ್ ಏಪ್ರಿಲ್ 15ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ. ಇದರ ಆರಂಭಿಕ ಬೆಲೆ ಅಂದಾಜು ₹29,999 ರಿಂದ ₹34,999 ಇರಬಹುದು ಎಂದು ನಿರೀಕ್ಷಿಸಲಾಗಿದೆ. ಬಿಡುಗಡೆಯ ನಂತರ ಈ ಫೋನ್ ಪ್ರಮುಖ ಇ-ಕಾಮರ್ಸ್ ತಾಣವಾದ Flipkart ಮತ್ತು ವಿವೋ ಅಧಿಕೃತ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ.
Vivo T5 Pro 5G Launch 9020mAh Battery Phone Best Gaming Phone India Vivo News Kannada



