50MP ಸೆಲ್ಫಿ ಕ್ಯಾಮೆರಾ, 200MP ಮೇನ್ ಕ್ಯಾಮೆರಾ ಇರುವ ವಿವೋ V60e ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ
Vivo V60e new smartphone: ವಿವೋ ತನ್ನ ವಿ ಸರಣಿಯ ಹೊಸ ಆವೃತ್ತಿಯ ವಿವೋ V60e ಫೋನ್ ಅನ್ನು ಭಾರತದಲ್ಲಿ ಅನಾವರಣಗೊಳಿಸಿದೆ.
ಹಬ್ಬದ ಸೀಸನ್‌ನಲ್ಲಿ ಬಿಡುಗಡೆಯಾದ ಮಿಡ್ ರೇಂಜ್‌ನ ಈ ಫೋನ್ ಖರೀದುದಾರರಿಗೆ ಹೊಸ ಅವಕಾಶ ಕಲ್ಪಿಸಿದೆ.
ಅಕ್ಟೋಬರ್ 7 ರಂದು (ಇಂದು) ಬಿಡುಗಡೆಯಾದ V60e ಸ್ಮಾರ್ಟ್‌ಫೋನ್ ಫೋಟೋಗ್ರಾಫಿ ಹಾಗೂ ಸೆಲ್ಫಿಯ ಕ್ರೇಜ್ ಇರುವವರಿಗೆ ಉತ್ತಮವಾಗಿದೆ.
ಗ್ರೂಪ್ ಸೆಲ್ಫಿ ಮತ್ತು ವೀಡಿಯೋ ಕಾಲ್‌ಗಾಗಿ ಮುಂಭಾಗದಲ್ಲಿ 50 MP ಸೆಲ್ಫಿ ಕ್ಯಾಮೆರಾದೊಂದಿಗೆ ಬರುವ ಈ ಫೋನ್ ಹಿಂಭಾಗದಲ್ಲಿ 200 MP ಮೇನ್ ಕ್ಯಾಮೆರಾ ಹೊಂದಿದೆ.
ಇದರಿಂದ ಇದು ಈಗಿನ ಕಾಲಕ್ಕೆ ತಕ್ಕಂತೆ ಸಿದ್ಧವಾದ ಫೋನ್ ಎಂದು ಹೇಳಬಹುದಾಗಿದೆ. ಇದರ ಜೊತೆಗೆ ಈ ಫೋನ್ ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ ಮತ್ತು ಇದರ ವಿನ್ಯಾಸ ಹೇಗಿದೆ ಎಂದು ತಿಳಿಯೋಣ.
V60e ಫೋನ್‌ನ ವೈಶಿಷ್ಟ್ಯ
ಈ ಹೊಸ ಹ್ಯಾಂಡ್‌ಸೆಟ್ ಮೀಡಿಯಾ ಟೆಕ್ ಡೈಮೆನ್ಸಿಟಿ 7360– ಟರ್ಬೊ ಚಿಪ್‌ಸೆಟ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 12GB ವರೆಗೆ RAM ಮತ್ತು 256GB ಆಂತರಿಕ ಸಂಗ್ರಹಣೆಯನ್ನು ಹೊಂದಿದೆ.
ಆಂಡ್ರಾಯ್ಡ್ 15 ಆಧಾರಿತ ಫನ್‌ಟಚ್ಓಎಸ್ 15ನಲ್ಲಿ ಕಾರ್ಯನಿರ್ವಹಿಸುತ್ತದೆ.
ಇದನ್ನೂ ಓದಿ: ಟ್ರಾನ್ಸ್‌ಪರಂಟ್ ಡಿಸೈನ್‌ನೊಂದಿಗೆ ಬರಲಿದೆ ನಥಿಂಗ್ ಇಯರ್ 3: ವೈಶಿಷ್ಟ್ಯಗಳೇನಿರಬಹುದು?
V60e ಫೋನ್‌ನ ವಿನ್ಯಾಸ ಹೇಗಿದೆ?
ಈಗ ಬಿಡುಗಡೆಯಾಗಿರುವ V60e ಫೋನ್‌ನ ವಿನ್ಯಾಸವು ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿದ್ದ V60 ಯ ಮಾದರಿಯನ್ನೇ ಹೋಲುತ್ತದೆ. 6.77-ಇಂಚಿನ ಕ್ವಾಡ್ ಕರ್ವ್ಡ್ AMOLED ಡಿಸ್ಪ್ಲೇಯನ್ನು ಹೊಂದಿದ್ದು , 120Hz ರಿಫ್ರೆಶ್ ದರ, 1,600 ನಿಟ್ಸ್ ಗರಿಷ್ಠ ಹೊಳಪು ಮತ್ತು 1.07 ಬಿಲಿಯನ್ ಬಣ್ಣಗಳಿಗೆ ಬೆಂಬಲವನ್ನು ನೀಡುತ್ತದೆ.
ಫೋನ್ ಹಿಂಭಾಗದಲ್ಲಿ ಕ್ಯಾಪ್ಸುಲ್ ಆಕಾರದ ಡ್ಯುಯಲ್ ಕ್ಯಾಮೆರಾ ಸೆಟಪ್ ಕಾಣಬಹುದು. ಎಲೈಟ್ ಪರ್ಪಲ್ ಮತ್ತು ನೋಬಲ್ ಗೋಲ್ಡ್ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಯಾದ ಫೋನ್ IP68 ಮತ್ತು IP69 ನೀರು ಮತ್ತು ಧೂಳು ನಿರೋಧಕ ರೇಟಿಂಗ್ ಹೊಂದಿದೆ.
ಅತ್ಯಂತ ಸ್ಲಿಮ್ ಆಗಿರುವ ಸ್ಮಾರ್ಟ್‌ಫೋನ್ ಡೈಮಂಡ್ ಶಿಲ್ಡ್ ಗ್ಲಾಸ್ ರಕ್ಷಣೆ ಮತ್ತು ಲೊ ಬ್ಲೂ ಲೈಟ್ ಪ್ರಮಾಣದೊಂದಿಗೆ ಬರುತ್ತದೆ. ಇದರಿಂದ ಫೋನ್‌ನ ಬಾಳಿಕೆ ಹೆಚ್ಚಾಗುವುದರ ಜೊತೆಗೆ ಕಣ್ಣಿಗೆ ರಕ್ಷಣೆ ಒದಗಿಸುತ್ತದೆ.
ಕ್ಯಾಮೆರಾ ಮತ್ತು AI ವೈಶಿಷ್ಟ್ಯ
ಈ ಸ್ಮಾರ್ಟ್‌ಫೋನ್ ಡ್ಯುಯಲ್-ರಿಯರ್ ಕ್ಯಾಮೆರಾ ಸೆಟಪ್, 200-ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್, OIS, 30x ಜೂಮ್ ಮತ್ತು 85mm ಪೋರ್ಟ್ರೇಟ್ ಇಮೇಜಿಂಗ್ ಅನ್ನು ಬೆಂಬಲಿಸುತ್ತದೆ.
ಇದರೊಂದಿಗೆ 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಮತ್ತು LED ಫ್ಲ್ಯಾಷ್ ಆಗಿ ಕಾರ್ಯನಿರ್ವಹಿಸುವ ಔರಾ ಲೈಟ್ ಸಿಸ್ಟಮ್ ಇದರಲ್ಲಿದೆ. ಮುಂಭಾಗದಲ್ಲಿ, ಹೋಲ್-ಪಂಚ್ ಕಟೌಟ್ ಒಳಗೆ 50-ಮೆಗಾಪಿಕ್ಸೆಲ್ ಐ ಆಟೋ-ಫೋಕಸ್ ಗ್ರೂಪ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಬಳಕೆದಾರರ ಸೃಜನಶೀಲತೆಯನ್ನು ಹೆಚ್ಚಿಸಲು AI ಫೆಸ್ಟಿವಲ್ ಪೋರ್ಟ್ರೇಟ್, AI ಫೋರ್ ಸೀಸನ್ ಪೋರ್ಟ್ರೇಟ್ ಮತ್ತು ಇಮೇಜ್ ಎಕ್ಸ್‌ಪಾಂಡರ್ ಮೋಡ್‌ಗಳನ್ನು ಒಳಗೊಂಡಿರುವ ಭಾರತದ ಮೊದಲ ಸ್ಮಾರ್ಟ್‌ಫೋನ್ ಎಂದು ವಿವೋ ಕಂಪನಿ ಹೇಳಿಕೊಂಡಿದೆ.
ಬ್ಯಾಟರಿ ಮತ್ತು ಸಂಪರ್ಕ
V60e ಸ್ಮಾರ್ಟ್‌ಫೋನ್ 6,500mAh ಬ್ಯಾಟರಿಯನ್ನು ಹೊಂದಿದ್ದು ಅದು 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಸಂಪರ್ಕ ಆಯ್ಕೆಗಳಿಗಾಗಿ NFC, IR ಬ್ಲಾಸ್ಟರ್ ಮತ್ತು ವಿಶ್ವಾಸಾರ್ಹ ನೆಟ್‌ವರ್ಕ್ ಪ್ರವೇಶಕ್ಕಾಗಿ 360-ಡಿಗ್ರಿ ಓಮ್ನಿಡೈರೆಕ್ಷನಲ್‌ಆಂಟೆನಾ ಒಳಗೊಂಡಿದೆ.
V60e ಸ್ಮಾರ್ಟ್‌ಫೋನ್ ಬೆಲೆ ಎಷ್ಟು?
ಭಾರತದಲ್ಲಿ V60e ಸ್ಮಾರ್ಟ್‌ಫೋನ್ ಮೂರು ರೂಪಾಂತರಗಳಲ್ಲಿ ದೊರೆಯಲಿದೆ. ಇದರ 8GB RAM + 128GB ಸ್ಟೋರೇಜ್ ರೂಪಾಂತರವು 29,999 ರೂ. ದಿಂದ ಪ್ರಾರಂಭವಾಗುತ್ತದೆ.
8GB + 256GB ಆವೃತ್ತಿಯ ಬೆಲೆ 31,999 ರೂ. ಆಗಿದ್ದರೆ, 12GB RAM ಮತ್ತು 256GB ಸ್ಟೋರೇಜ್ ಹೊಂದಿರುವ ಉನ್ನತ ಶ್ರೇಣಿಯ ಮಾದರಿಯ ಬೆಲೆಯು 33,999 ರೂ. ಆಗಿದೆ.
ಈ ಫೋನ್ ಅನ್ನು ಕಂಪನಿಯ ಅಧಿಕೃತ ವೆಬ್‌ಸೈಟ್ ಹಾಗೂ ರಿಟೆಲ್ ಅಂಗಡಿಗಳಲ್ಲಿ ಖರೀದಿಸಬಹುದಾಗಿದೆ.
(Vivo V60e new smartphone with 50MP Selfie camera 200MP Main Camera phone launched in India)



