ಟ್ರಾನ್ಸ್ಪರಂಟ್ ಡಿಸೈನ್ನೊಂದಿಗೆ ಬರಲಿದೆ ನಥಿಂಗ್ ಇಯರ್ 3: ವೈಶಿಷ್ಟ್ಯಗಳೇನಿರಬಹುದು?
Nothing Ear 3: ನಥಿಂಗ್ ಹೊಸ ಇಯರ್ ಬಡ್ ಅನ್ನು ಅನಾವರಣಗೊಳಿಸಲು ಸಿದ್ಧತೆ ನಡೆಸಿದೆ. ಇದೀಗ ನಂಥಿಂಗ್ ಮುಂಬರುವ ಇಯರ್ 3 ಎನ್ನುವ ಇಯರ್ ಬಡ್ ವಿನ್ಯಾಸವನ್ನು ಬಹಿರಂಗಪಡಿಸಿದೆ.
ಕಂಪನಿಯು ತನ್ನ ಅಧಿಕೃತ X ಖಾತೆಯಲ್ಲಿ ಮುಂದೆ ಬರಲಿರುವ ಹೊಸ ನಥಿಂಗ್ ಇಯರ್ ಬಡ್ನ ಫೋಟೋವನ್ನು ಹಂಚಿಕೊಂಡಿದೆ. ಈ ಹೊಸ ಇಯರ್ 3, 2023ರಲ್ಲಿ ಬಿಡುಗಡೆಗೊಂಡಿದ್ದ ಇಯರ್ 2 ಇಯರ್ ಬಡ್ ಅನ್ನು ಬಹಳಷ್ಟು ಹೋಲುತ್ತದೆ.
ಅಂದರೆ ಇವೆರಡರ ವಿನ್ಯಾಸ ಮತ್ತು ಚಾರ್ಜಿಂಗ್ನಲ್ಲಿ ಸಾಮ್ಯತೆಯನ್ನು ಕಾಣಬಹುದಾಗಿದೆ. ಆದರೆ ಕಂಪನಿಯು ಈ ಹೊಸ ಇಯರ್ ಬಡ್ ಅನ್ನು 100 ಪ್ರತಿಶತ ಮರುಬಳಕೆ ಮಾಡಬಹುದಾದ ಅಲ್ಯಮಿನಿಯಮ್ ನಿಂದ ತಯಾರಿಸಲಾಗಿದೆ ಎಂದು ಹೇಳಿದೆ.
ಮೊದಲ ಬಾರಿಗೆ ಇಯರ್ 3 ರ ಚಾರ್ಜಿಂಗ್ ಕೇಸ್ನಲ್ಲಿ ಸೂಪರ್ ಮೈಕ್ ಹೆಸರಿನ ಒಂದು ಮೈಕ್ರೋಫೋನ್ ಮತ್ತು ಒಂದು ಟಾಕ್ ಬಟನ್ ಕಾಣಬಹುದಾಗಿದೆ.
ನಥಿಂಗ್ ಇಯರ್ 3 ವೈಶಿಷ್ಟ್ಯಗಳು
ಕಳೆದ ವಾರ ನಥಿಂಗ್ ತನ್ನ X ಖಾತೆಯ ಮೂಲಕ ಇಯರ 3 ರ ಕೆಲವು ಟೀಸರ್ ಫೋಟೋಗಳನ್ನು ಹಂಚಿಕೊಂಡಿತ್ತು. ಆದರೆ ಇದೀಗ ಅದು ಹಂಚಿಕೊಂಡ ಕ್ಲೋಸ್ಅಪ್ ಫೋಟೋದಿಂದ ಒಂದಿಷ್ಟು ವೈಶಿಷ್ಟ್ಯಗಳು ತಿಳಿದುಬಂದಿವೆ. ಅದೇನೆಂದರೆ ಇಯರ್ 3 ರ ಟಾಕ್ ಬಟನ್ ಮತ್ತು ಮೈಕ್ರೋಫೋನ್ ವೈಶಿಷ್ಟ್ಯ. ಆದರೆ ಇದನ್ನು ಬಳಸಿಕೊಳ್ಳಬೇಕಾದರೆ ಒಂದು ಸ್ಮಾರ್ಟ್ ಅಸಿಸ್ಟೆಂಟ್ನ ಅವಶ್ಯಕತೆ ಇರುತ್ತದೆ. ಇಯರ್ 3 ಚಾರ್ಜಿಂಗ್ ಕೇಸ್ ವೈಯರ್ಲೆಸ್ ಮೈಕ್ನ ಕೆಲಸವನ್ನೂ ಮಾಡುತ್ತದೆ. ಇದರ ಪೂರ್ಣ ವಿಷಯ ಇಯರ್ ಬಡ್ ಬಿಡುಗಡೆಯ ನಂತರ ತಿಳಿದು ಬರಲಿದೆ.
ಇದನ್ನೂ ಓದಿ: iPhone ಪ್ರಿಯರಿಗೆ ಗುಡ್ ನ್ಯೂಸ್! ಬಿಡುಗಡೆ ಸಜ್ಜಾದ ಐಫೋನ್ 17 ಸರಣಿ
ನಥಿಂಗ್ ಇಯರ್ 3 ಹೆಚ್ಚು ಬಾಳಿಕೆ ಮತ್ತು ಪ್ರೀಮಿಯಮ್ ಫೀನಿಶ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಏಕೆಂದರೆ ಇದರಲ್ಲಿ ಮೆಟಲ್ ಬಿಡಿಭಾಗಗಳಿವೆ. ಇದರಲ್ಲಿ ಎಂಟಿನಾವನ್ನು ಮೆಟಲ್ನಿಂದಲೇ ವಿನ್ಯಾಸಗೊಳಿಸಲಾಗಿದೆ. ಇದು ಇಯರ್ ಬಡ್ಗೆ ಅಲ್ಟ್ರಾ ಸ್ಲಿಮ್ ವಿನ್ಯಾಸ ನೀಡುತ್ತದೆ. ಇದರ ಕಾರ್ಯಕ್ಷಮತೆ ಮತ್ತು ಇತರ ವಿವರಗಳು ಸೆಪ್ಟೆಂಬರ್ 18, 2025 ರಂದು ಬಹಿರಂಗಪಡಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: Realme GT ಹೊಸ ಸ್ಮಾರ್ಟ್ಫೋನ್ : 10,000mAh ಬ್ಯಾಟರಿ, 10 ನಿಮಿಷಕ್ಕೆ ಬ್ಯಾಟರಿ ಚಾರ್ಜ್
(Nothing Ear 3 earbuds will coming with talk button and microphone)



