ಅಮಾಸೆಬೈಲು: ಗಾಂಧಿ ಜಯಂತಿಯಂದು ಅಕ್ರಮ ಮದ್ಯ ಮಾರಾಟ, ಪ್ರಕರಣ ದಾಖಲು

Amasebailu (ಅಮಾಸೆಬೈಲು ): ಗಾಂಧಿ ಜಯಂತಿಯಂದು ಅಕ್ರಮವಾಗಿ ಮದ್ಯ ಮಾರಾಟ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರ ವಿರುದ್ದ ಅಮಾಸೆಬೈಲು ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಮಾಸೆಬೈಲಿನ ಮಾರ್ಕೆಟ್ ಬಳಿಯ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರು. ಕುಂದಾಪುರ ಶಾರದೋತ್ಸವ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಪಿಎಸ್ಐ ಅಶೋಕ್ ಕುಮಾರ್ ಅವರಿಗೆ, ನರಸಿಂಹ ಪೂಜಾರಿಯವರ ಅಂಗಡಿಯಲ್ಲಿ ಪರವಾನಿಗೆ ಇಲ್ಲದೆ ಮದ್ಯ ಮಾರಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ದೊರೆತಿದೆ.
ಮೇಲಾಧಿಕಾರಿಗಳ ಸೂಚನೆಯ ಮೇರೆಗೆ ಸಿಬ್ಬಂದಿಯೊಂದಿಗೆ ಸಂಜೆ 7 ಗಂಟೆಗೆ ದಾಳಿ ನಡೆಸಿದಾಗ, ಆರೋಪಿ ನರಸಿಂಹ ಪೂಜಾರಿ ಅವರು ಯಾವುದೇ ಪರವಾನಿಗೆ ಇಲ್ಲದೆ 4.770 ಲೀಟರ್ಗಳ (53 ಪ್ಯಾಕೆಟ್ಗಳು) ಮೌಲ್ಯದ WINDSOR DELUXE 90 ML ಮದ್ಯವನ್ನು ಮತ್ತು ಮಾರಾಟದಿಂದ ಬಂದ ₹2,650 ನಗದನ್ನು ವಶಪಡಿಸಿಕೊಂಡಿದ್ದಾರೆ.
Also Read : ಕಾರ್ಕಳ : ಹಾಡುಹಗಲೇ ಬೀಗ ಒಡೆದು ಮನೆ ದರೋಡೆ, 6.5 ಲಕ್ಷ ರೂ. ಮೌಲ್ಯದ ಚಿನ್ನ, ಸೊತ್ತು ಕಳವು
ಸರ್ಕಾರದ ಆದೇಶದಂತೆ ಗಾಂಧಿ ಜಯಂತಿಯ ಪ್ರಯುಕ್ತ ಮದ್ಯ ಮಾರಾಟ ನಿಷೇಧವಿದ್ದರೂ ಈ ಕೃತ್ಯ ಎಸಗಲಾಗಿದೆ. ಅಕ್ರಮ ಮದ್ಯ ಮಾರಾಟಕ್ಕೆ ಪ್ಯಾಕೆಟ್ಗಳನ್ನು ಒದಗಿಸಿದ ಗಿರಿಜಾ ಬಾರ್ನ ಮ್ಯಾನೇಜರ್ ಪ್ರವೀಣ್ ಅವರ ವಿರುದ್ಧವೂ ವರದಿ ನೀಡಲಾಗಿದೆ.
ಅಮಾಸೆಬೈಲು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
Also Read : ಅಜೆಕಾರು: ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ವಿರುದ್ದ ಅವಹೇಳನಕಾರಿ ಪೋಸ್ಟ್, ಪ್ರಕರಣ ದಾಖಲು



