ಬ್ರಹ್ಮಾವರ : ಅಕ್ರಮ ಮರಳುಗಾರಿಕೆ, ಓರ್ವ ಅರೆಸ್ಟ್‌

Brahmavara News (ಬ್ರಹ್ಮಾವರ) : ಅಕ್ರಮವಾಗಿ ಮರಳುಗಾರಿಕೆ ಮತ್ತು ಸಾಗಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಓರ್ವನ್ನು ಬಂಧಿಸಿ, ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ(Brahmavara) ತಾಲೂಕಿನ ಯಡ್ತಾಡಿ ಗ್ರಾಮದ ರಾಘವೇಂದ್ರ (32) ಎಂಬಾತನೇ ಬಂಧಿತ ಆರೋಪಿ.ಅಲ್ತಾರು ಹೊಳೆಯಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ಮತ್ತು ಸಾಗಾಟ ಮಾಡುತ್ತಿದ್ದ ಕುರಿತು ಬ್ರಹ್ಮಾವರ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಅವಿನಾಶ್ ಅವರಿಗೆ ಖಚಿತ ಮಾಹಿತಿ ದೊರಕಿತ್ತು.

ಕೂಡಲೇ ಸ್ಥಳಕ್ಕೆ ಬಂದ ಬ್ರಹ್ಮಾವರ ಠಾಣೆಯ ಪೊಲೀಸರು ಅಕ್ರಮವಾಗಿ ಮರಳುಗಾರಿಕೆ ನಡೆಸಲು ನಿಲ್ಲಿಸಿ KA-20-AA-0659 ನೋಂದಣಿ ಸಂಖ್ಯೆಯ ಟಾಟಾ ಏಸ್ ವಾಹನಕ್ಕೆ ರಾಘವೇಂದ್ರ ಬುಟ್ಟಿಯ ಮೂಲಕ ಮರಳು ತುಂಬಿಸುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ: ಮಣಿಪಾಲ : ಕಾಲೇಜು ವಿದ್ಯಾರ್ಥಿಗಳ ಮಾರಾಮಾರಿ : ಓರ್ವ ಗಂಭೀರ

ಮರಳು ತೆಗೆಯಲು ಮತ್ತು ಸಾಗಾಟ ಮಾಡಲು ಯಾವುದೇ ಪರವಾನಿಗೆ ಹೊಂದಿಲ್ಲ ಎಂದು ಆತ ಒಪ್ಪಿಕೊಂಡಿದ್ದಾನೆ. ಪೊಲೀಸರು ವಾಹನದಲ್ಲಿದ್ದ ಅರ್ಧ ಭಾಗದ ಮರಳು, ಐದು ಮರಳು ತುಂಬಿದ ಚೀಲಗಳು, ಐದು ಖಾಲಿ ಚೀಲಗಳು, ಮೂರು ಬುಟ್ಟಿಗಳು ಮತ್ತು ಎರಡು ಹಾರೆಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಾಧ ಕ್ರಮಾಂಕ 195/2025 ಅಡಿಯಲ್ಲಿ MMRD ACT ನ ಕಲಂ 4(1), 4(1A), 21(1)(2), ಹಾಗೂ KMMC RULE 1944 ರ ಕಲಂ 3(1), 42(1), 44 ಮತ್ತು BNS ನ ಕಲಂ 303(2) ಅಡಿಯಲ್ಲಿ ಆರೋಪಿಯ ವಿರುದ್ಧ ಕ್ರಮಕೈಗೊಂಡಿದ್ದಾರೆ.

ಇದನ್ನೂ ಓದಿ: ಕಾರ್ಕಳ : ಆನ್‌ಲೈನ್ ಬೆಟ್ಟಿಂಗ್ ದಂಧೆ, ಓರ್ವ ಅರೆಸ್ಟ್‌

ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories