ಬೈಂದೂರು: ಕಾಲೇಜು ವಿದ್ಯಾರ್ಥಿನಿ ನಾಪತ್ತೆ, ಪ್ರಕರಣ ದಾಖಲು

Byndoor College student missing (ಬೈಂದೂರು) : ಕಾಲೇಜಿಗೆ ತೆರಳಿದ್ದ ವಿದ್ಯಾರ್ಥಿನಿಯೋರ್ವಳು ನಾಪತ್ತೆ ಆಗಿರುವ ಘಟನೆ ಬೈಂದೂರು ( Byndoor ) ತಾಲೂಕಿನ ಶಿರೂರು ಗ್ರಾಮದ ಕೇಸರಕೋಡಿಯಲ್ಲಿ ನಡೆದಿದೆ.

ಶಿರೂರು ಗ್ರಾಮದ ಕೇಸರಕೋಡಿಯ ನಿವಾಸಿ ಬೀಬಿ ಕಾಶ್ಪಾ (18 ವರ್ಷ) ನಾಫತ್ತೆ ಆಗಿರುವ ಯುವತಿ. ಭಟ್ಕಳದ ಅಂಜುಮನ್ ಕಾಲೇಜಿನಲ್ಲಿ 2ನೇ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದರು. ಆದರೆ ಮನೆಯಿಂದ ಹೊರಗೆ ಹೋದವರು ವಾಪಾಸಾಗಿಲ್ಲ.

ಈ ಕುರಿತು ಬೀಬಿ ಕಾಶ್ಪಾ ಅವರ ತಾಯಿ ಹಬಿಬುನ್ಸಿಸಾ ಬೈಂದೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ತನ್ನ ಮಗಳು ಶಿರೂರು ಗ್ರಾಮದ ಕೇಸರಕೋಡಿಯಲ್ಲಿ ಇರುವ ತಮ್ಮ ಮನೆಯಿಂದ ಸೆಪ್ಟೆಂಬರ್‌ 30 ರಂದು ಯಾರಿಗೂ ಹೇಳದೇ ಹೊರಗೆ ಹೋದವರು, ಇಲ್ಲಿಯವರೆಗೆ ಮನೆಗೆ ಹಿಂದಿರುಗಿಲ್ಲ.

Byndoor College student missing : ಕಾಣೆಯಾದವರ ವಿವರ

ಪ್ರಾಯ: 18 ವರ್ಷ 3 ತಿಂಗಳು

ಎತ್ತರ: 5 ಅಡಿ 11 ಇಂಚು

ಮೈಬಣ್ಣ: ಗೋಧಿ ಮೈಬಣ್ಣ

ಧರಿಸಿರುವ ಬಟ್ಟೆ: ಹಸಿರು (ಗ್ರೀನ್) ಬಣ್ಣದ ಟಾಪ್‌ ಮತ್ತು ಕಾಫಿ ಬಣ್ಣದ ಪ್ಯಾಂಟ್

ವಿಶೇಷ ಗುರುತು: ಎಡಗಣ್ಣಿನ ಕೆಳಭಾಗದಲ್ಲಿ ಸಣ್ಣ ಕಪ್ಪು ಮಚ್ಚೆ ಇದೆ.

ಮಾತನಾಡುವ ಭಾಷೆಗಳು: ಹಿಂದಿ, ಇಂಗ್ಲೀಷ್, ಕನ್ನಡ ಮತ್ತು ಉರ್ದು.

ಇದನ್ನೂ ಓದಿ: ಉಡುಪಿ : ಅಂಬಲಪಾಡಿ ದೇವಸ್ಥಾನದಲ್ಲಿ ಸರಗಳ್ಳತನ ಯತ್ನ: ಇಬ್ಬರು ಮಹಿಳೆಯರ ಬಂಧನ

ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 173/2025 ರಂತೆ 00 MP (ಹೆಂಗಸು ಕಾಣೆ) ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಾರ್ವಜನಿಕರಿಗೆ ಯುವತಿ ಕುರಿತು ಮಾಹಿತಿ ದೊರೆತರೆ ಕೂಡಲೇ ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಲಾಗಿದೆ.

ಇದನ್ನೂ ಓದಿ: ಅಜೆಕಾರು: ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ವಿರುದ್ದ ಅವಹೇಳನಕಾರಿ ಪೋಸ್ಟ್‌, ಪ್ರಕರಣ ದಾಖಲು

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories